ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ದಶಕಗಳೇ ಕಳೆದರೂ ಪ್ರಗತಿ ಕಾಣದ ಬಿಜಾಪುರ!

By Srinath
|
Google Oneindia Kannada News

ಬಿಜಾಪುರ, ಮಾರ್ಚ್ 22: ಬಿಜಾಪುರ ಕ್ಷೇತ್ರವು ಲೋಕಸಭಾ ಚುನಾವಣೆಯತ್ತ ದಾಪುಗಾಲು ಹಾಕುತ್ತಿದೆ. 8 ವಿಧಾನಸಭಾ ಕ್ಷೇತ್ರಗಳನ್ನು ಮಡಿಲಲ್ಲಿಟ್ಟುಕೊಂಡಿರುವ ಪರಿಶಿಷ್ಟ ಮೀಸಲು ಕ್ಷೇತ್ರವು ಪ್ರಸ್ತುತ ಬಿಜೆಪಿಯ ರಮೇಶ್ ಜಿಗಜಿಣಗಿ ಅವರ ಸುಪರ್ದಿಯಲ್ಲಿದೆ. ಆದರೆ ಕಳೆದೈದು ದಶಕಗಳಿಂದ ಕ್ಷೇತ್ರವು ಗಣನೀಯ ಅಭಿವೃದ್ಧಿಯನ್ನು ಕಂಡಿಲ್ಲ.

ಪ್ರಮುಖ ಕೈಗಾರಿಕೆಗಳಾಗಲಿ ಅಥವಾ ತನ್ನೊಡಲಲ್ಲಿರುವ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಇಲ್ಲಿಮದ ಆರಿಸಿಬರುವ ಸಂಸದರಾರೂ ನೀರೆರೆದಿಲ್ಲ. ಹಾಗೆ ನೋಡಿದರೆ ಬಿಜಾಪುರ ಜಿಲ್ಲೆ ಅಭಿವೃದ್ಧಿ ಕಾಣುವುದಕ್ಕೆ ವಿಫುಲ ಅವಕಾಶಗಳಿವೆ.

ಆದರೂ ಬಿಜಾಪುರಕ್ಕೆ ಅಂಟಿಕೊಂಡಿರುವ 'ಹಿಂದುಳಿದ ಜಿಲ್ಲೆ' ಹಣೆಪಟ್ಟಿಯನ್ನು ತೊಡೆದುಹಾಕಲು ಯಾವೊಬ್ಬ ಸಂಸದರೂ ಯತ್ನಿಸಿಲ್ಲ. ಹೀಗಾದಲ್ಲಿ ಬಿಜಾಪುರ ಸಂಪದ್ಭರಿತ ಜಿಲ್ಲೆಯಾಗುವುದು ಯಾವ ಕಾಲಕ್ಕೆ ಎಂದು ಇಲ್ಲಿನ ಮುಗ್ಧ ಮತದಾರ ಬೇಸರಿದಿಂದ ಪ್ರಶ್ನಿಸುತ್ತಾನೆ. ಉತ್ತರ ನೀಡಬೇಕಾದ ಸಂಸದರು ತಕ್ಷಣಕ್ಕೆ ಕೈಗೆ ಸಿಗುವುದಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ls-polls-2014-bijapur-sc-constituency-failed-to-progress-in-5-decades

(ಪೇಪರ್ ಮೇಲೆ) ಇರುವುದೊಂದೇ ದೊಡ್ಡ ಕೈಗಾರಿಕೆ ಅಂದರೆ 4,000 ಮೆಗಾವಾಟ್ ಸಾಮರ್ಥ್ಯದ ಕುಡಗಿ ಉಷ್ಣ ವಿದ್ಯುತ್ ಸ್ಥಾವರ ಯೋಜನೆ ವಿರೋಧ/ವಿವಾದದ ಸುಳಿಯಲ್ಲಿ ಸಿಲುಕಿದೆ. ಅದಿನ್ನು ಜಿಲ್ಲೆಯ ಜನತೆಗೆ ಕರೆಂಟ್ ನೀಡುವುದು ಯಾವ ಕಾಲಕ್ಕೋ?

2011ರ ಜನಸಂಖ್ಯೆ ಆಧಾರದ ಪ್ರಕಾರ ಜಿಲ್ಲೆಯ ಜನಸಂಖ್ಯೆ 21.75 ಲಕ್ಷ. ಸುಮಾರು 16 ಲಕ್ಷ ಮಂದಿ ಇಲ್ಲಿ ಕೃಷಿಯನ್ನೇ ನಂಬಿ ಬದುಕು ನಡೆಸಿದ್ದಾರೆ. ಆರ್ಥಿಕ ತಜ್ಞರ ಪ್ರಕಾರ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಧಾನವಾಗಿ 2 ಸಂನ್ಮೂಲಗಳಿವೆ. ಒಂದು ಪ್ರವಾಸೋದ್ಯಮ, ಮತ್ತೊಂದು ಕೃಷಿ.

ಆದಿಲ್ ಷಾಹಿ ಸ್ಮಾರಕಗಳು ಬಿಜಾಪುರ ನಗರ ಮತ್ತು ಜಿಲ್ಲೆಯ ಕೆಲ ಭಾಗಗಳಲ್ಲಿ ಹರಡಿಕೊಂಡಿವೆ. ಇದನ್ನು ಪ್ರವಾಸೋದ್ಯಮ ಆಕರ್ಷಣೆಗಳಾಗಿ ಅಭಿವೃದ್ಧಿಪಡಿಸಬಹುದು, ಆರ್ಥಿಕಾಭಿವೃದ್ಧಿ ಕಾಣಬಹುದು, ಉದ್ಯೋಗಾವಕಾಶಗಳನ್ನು ಹೆಚ್ಚಿಸಬಹುದು, ಆದರೆ?

ಇನ್ನು, ಜಿಲ್ಲೆಯ ಕೃಷಿ ಬಗ್ಗೆ ಹೇಳುವುದಾದರೆ ... ಇಲ್ಲಿನ ರೈತನಿಗೆ ನೀರಾವರಿ ಒದಗಿಸಿದರೆ ಸಾಕು. ಉಳಿದಿದ್ದು ಆತನೇ ಸ್ವಯಂ ಸಿದ್ಧಿಸಿಕೊಳ್ಳಬಲ್ಲ. ಜಿಲ್ಲೆಯನ್ನು 5 ನದಿಗಳು ಸುತ್ತುವರಿದಿವೆ. ಆದರೂ ಜಿಲ್ಲೆಯ ನೀರಾವರಿ ವರಿ ಹಾಗೆಯೇ ಉಳಿದುಬಿಟ್ಟಿದೆ.
(ಕರ್ನಾಟಕ ವಾರ್ತೆ- ಬಿಜಾಪುರ)

ಅಂದಹಾಗೆ ಜಿಲ್ಲೆಯಿಂದ ಆರಿಸಿಬಂದ ಸಂಸದರ ಪೈಕಿ ಇದುವರೆಗೂ ಒಬ್ಬರು ಕೇಂದ್ರ ಸಚಿವರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ವತಿಯಿಂದ 2 ಬಾರಿ ಸಂಸದರಾಗಿ ಆರಿಸಿಬಂದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎನ್ ಡಿಎ ಅಧಿಕಾರದಲ್ಲಿದ್ದಾಗ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು.

ಕ್ಷೇತ್ರದಲ್ಲಿ 1957ರಿಂದ ನಡೆಯುತ್ತಾ ಬಂದಿರುವ ಲೋಕಸಭಾ ಚುನಾವಣೆಯಲ್ಲಿ ಇದುವರೆಗೂ (1984, 1999 ಮತ್ತು 2009) 3 ಮಹಿಳಾ ಅಭ್ಯರ್ಥಿಗಳು ಮಾತ್ರ ಕಣಕ್ಕೆಇಳಿದಿದ್ದರು. ಆದರೆ ಮತದಾರ ಯಾರೊಬ್ಬರನ್ನೂ ಆರಿಸಿ ಕಳುಹಿಸಲಿಲ್ಲ. 1977ರ ಚುನಾವಣೆಯಲ್ಲಿ ಕೇವಲ ಇಬ್ಬೇ ಇಬ್ಬರು ಸ್ಪರ್ಧಿಗಳು ಕಣದಲ್ಲಿದ್ದರು.

English summary
Lok Sabha Polls 2014- Bijapur SC reserved constituency failed to progress even after five decades. The district, according to experts, has two major resources that can be harnessed - tourism and agriculture. Though the district has tremendous growth opportunities, people wonder why Bijapur has not transformed from a “backward district” into a “prosperous” district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X