ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮಾಯವಾಗುತ್ತಿರುವ ತೃತೀಯ ಶಕ್ತಿ

By Srinath
|
Google Oneindia Kannada News

ಬೆಂಗಳೂರು, ಮೇ 22: ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲಿ ಮೋದಿ ಸುನಾಮಿಗೆ ಸಿಲುಕಿ ಪುರಾತನ ಕಾಂಗ್ರೆಸ್ ಪಕ್ಷವಷ್ಟೇ ತರಗೆಲೆಯಂತೆ ಉದುರಿಲ್ಲ. ರಾಜ್ಯದಲ್ಲಿ ತೃತೀಯ ರಂಗವು ಶಕ್ತಿಹೀನವಾಗುತ್ತಿದೆ. ಪಕ್ಷೇತರರೂ ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಉಳಿದ ಪಕ್ಷಗಳು ಶೇ. 16ರಷ್ಟು ಮತ ಪಡೆದಿವೆ.

ದಕ್ಷಿಣ ಭಾರತದಲ್ಲಿ ಇತರೆ ನೆರೆಯ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಅಥವಾ ತೃತೀಯ ರಂಗ ಪಕ್ಷಗಳು ಮತ ಗಳಿಸಿವುದು ಅಷ್ಟಕ್ಕಷ್ಟೇ. 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟು ಶೇ. 80ರಷ್ಟು ಗಳಿಸಿದ್ದರೆ ಉಳಿದ ಪಕ್ಷಗಳ ಸಾಧನೆ ಶೇ. 20ಕ್ಕೆ ಸೀಮಿತವಾಗಿತ್ತು. ಇದರರ್ಥ ತೃತೀಯ ಶಕ್ತಿಯ ಬಲ ಶೇ. 4ರಷ್ಟು ಕುಸಿದಿದೆ ಎಂದಾಯಿತು.

ಅದಕ್ಕಿಂತ ಹಿಂದೆ ಅಂದರ 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟು ಶೇ. 72ರಷ್ಟು ಗಳಿಸಿದ್ದವು. ಆಗ ತೃತೀಯ ರಂಗದ ಸಾಧನೆ ಶೇ. 28ರಷ್ಟಾಗಿತ್ತು. ಅಂದರೆ ಗಣನೀಯ ಪ್ರಮಾಣಲ್ಲಿ (ಶೇ. 8ರಷ್ಟು) ಮತಗಳನ್ನು ಕಳೆದುಕೊಂಡಿತ್ತು.

ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ಹೀಗಿತ್ತು:

ls-election-result-2014-third-force-parties-vote-gain-shrinks-karnataka
ಕುತೂಹಲದ ಸಂಗತಿಯೆಂದರೆ 1999ರ ಚುನಾವಣೆಯಲ್ಲಿ ಶೇ. 11ರಷ್ಟು ಮತ ಪಡೆದಿದ್ದ ಜೆಡಿಎಸ್, 2004ರ ವೇಳೆಗೆ ಶೇ. 21ಕ್ಕೆ ಜಂಪ್ ಪಡೆದಿತ್ತು. ಆದರೆ ಆ ಸಾಧನೆಯನ್ನು ಉಳಿಸಿಕೊಳ್ಳಲಾಗದ ಜೆಡಿಎಸ್ 2009ರ ಚುನಾವಣೆ ವೇಳೆಗೆ ಶೇ. 14ಕ್ಕೆ ಕುಸಿದಿತ್ತು. ಅದೀಗ ಮತ್ತಷ್ಟು ತಳಕಚ್ಚಿದ್ದು ಶೇ. 11ಕ್ಕೆ ಇಳಿದಿದೆ. ಗಮನಮಾರ್ಹವೆಂದರೆ ಅವಿಭಜಿತ ಜನತಾದಳ 1996ರಲ್ಲಿ 16 ಸ್ಥಾನಗಳನ್ನು ಗೆದ್ದು, ಶೇ. 35ರಷ್ಟು ಮತ ಪಡೆದಿತ್ತು. ಆ ಉಚ್ಛ್ರಾಯ ದಿನಗಳು ಪಕ್ಷ ವಿಭಜನೆಯ ನಂತರ ಮತ್ತೆ ಕಂಡುಬಂದಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಎಡ ರಂಗದ ಸಾಧನೆ ಕರ್ನಾಟಕದಲ್ಲಿ ಎಂದಿಗೂ ಆಶಾದಾಯಕವಾಗಿಲ್ಲ. 2014ರಲ್ಲಿ ಎಡ ರಂಗದ ಸಾಧನೆ ಶೇ 0.3 ಮಾತ್ರ. ಬಹುಜನ ಸಮಾಜ ಪಕ್ಷದ ಸಾಧನೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. 2009ರಲ್ಲಿ ಶೇ. 2 ರಷ್ಟು ಮತ ಗಳಿಕೆ ಹೊಂದಿದ್ದ ಬಿಎಸ್ ಪಿ, ಇದೀಗ ಶೆ. 1ಕ್ಕಿಂತ ಕಡಿಮೆ ಮತ ಗಳಿಸಿದೆ. ಇನ್ನು ಹೊಸದಾಗಿ ಅವತರಿಸಿದ ಆಮ್ ಆದ್ಮಿ ಪಕ್ಷವು ಬೆಂಗಳೂರಿನಲ್ಲಿ ಶೇ. 0.8ರಷ್ಟು ಮತ ಗಳಿಸಿದೆ. ಇದು ನೋಟಾ (NOTA) ಸಾಧನೆಗಿಂತ ಕಡಿಮೆಯಾಗಿದೆ.

English summary
Lok Sabha election Results 2014 - Third force parties vote gain shrinks in Karnataka. The 2014 Lok Sabha elections has seen the space for non-Bharatiya Janata Party (BJP) and non-Congress alternatives shrink further in Karnataka, with the vote share of all other parties and Independents together adding up to just 16.2 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X