ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಮಹದೇವ ಪ್ರಸಾದ್ ವಿರುದ್ಧ ಲೋಕಾಯುಕ್ತ ತನಿಖೆ

|
Google Oneindia Kannada News

ಚಾಮರಾಜನಗರ, ಜೂ. 6 : ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ವಿರುದ್ಧ ಲೋಕಾಯುಕ್ತ ತನಿಖೆ ಆರಂಭವಾಗಲಿದೆ. ಕರ್ನಾಟಕ ಗೃಹ ಮಂಡಳಿಗೆ ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಪಡೆದಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲು ಚಾಮರಾಜನಗರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಆದೇಶ ನೀಡಿದೆ.

ಸಚಿವ ಮಹದೇವ ಪ್ರಸಾದ್ ಅವರು ಕರ್ನಾಟಕ ಗೃಹ ಮಂಡಳಿಗೆ ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಪಡೆದಿದ್ದಾರೆ ಎಂದು ಹಿರೇಬೇಗೂರು ನಂದೀಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಕೋರ್ಟ್ 2013ರ ಡಿ.21ರಂದು ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಆದರೆ, ಸಚಿವರು ಹೈಕೋರ್ಟ್ ನಲ್ಲಿ ಈ ಆದೇಶವನ್ನು ಪ್ರಶ್ನಿಸಿದ್ದರು.

Mahadeva Prasad

ಆದರೆ, ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಸಚಿವ ಮಹದೇವ ಪ್ರಸಾದ್ ವಿರುದ್ಧದ ತನಿಖೆಗೆ ಯಾವುದೇ ತಡೆ ನೀಡಿಲ್ಲ. ಆದ್ದರಿಂದ ದೂರುದಾರ ಹಿರೇಬೇಗೂರು ನಂದೀಶ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಗುರುವಾರ ತನಿಖೆಗೆ ಅಸ್ತು ಎಂದಿದೆ. [ಮಹದೇವ್ ಪ್ರಸಾದ್ ವಿರುದ್ಧ ಭೂ ಹಗರಣ ದೂರು]

ಜುಲೈ 11ರೊಳಗೆ ತನಿಖೆ : ನ್ಯಾಯಾಲಯದ ಆದೇಶದಂತೆ ಶೀಘ್ರವೇ ಎಫ್ಐಆರ್ ದಾಖಲಿಸಿ ವಿಚಾರಣೆ ಆರಂಭಿಸಬೇಕಾಗಿದೆ. ಜುಲೈ 11ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಕೋರ್ಟ್ ಆದೇಶ ಪ್ರತಿ ಲೋಕಾಯುಕ್ತರ ಕೈ ಸೇರಿದ ತಕ್ಷಣ ಅವರು ಎಫ್ಐಆರ್ ದಾಖಲಿಸುವ ಸಾಧ್ಯತೆ ಇದೆ.

ಆರೋಪವೇನು : ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಾಗಿಟ್ಟಿದ್ದ ನಿವೇಶವನ್ನು ಮಹದೇವ ಪ್ರಸಾದ್ ಅಕ್ರಮವಾಗಿ ಖರೀದಿಸಿದ್ದಾರೆ ಎಂಬುದು ಆರೋಪ. ಈ ಕುರಿತು ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ನಿಯಮದಂತೆ ಗೃಹ ಮಂಡಳಿ ನಿವೇಶನ ಖರೀದಿ ಮಾಡಬೇಕಾದರೆ ಅರ್ಜಿದಾರರು ಬೇರೆಲ್ಲೂ ನಿವೇಶನ ಹೊಂದಿರಬಾರದು. ಆದರೆ, ಮಹದೇವ ಪ್ರಸಾದ್ ಮೈಸೂರು, ಗುಡ್ಲುಪೇಟೆ, ಹಾಲಹಳ್ಳಿ ಪ್ರದೇಶಗಳಲ್ಲಿ ನಿವೇಶನ ಹೊಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

English summary
Another trouble for Chief Minister Siddaramaiah. Chamarajanagar district Lokayukta Special Court has ordered the filing of a first information report (FIR) against Cooperation Minister H.S.Mahadev Prasad cabinet colleague of CM siddaramamiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X