ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸೀಟುಗಳಿಗೆ ಮತ ಎಣಿಕೆ : ಹಿನ್ನಡೆ ಮುನ್ನಡೆ

By Mahesh
|
Google Oneindia Kannada News

ಬೆಂಗಳೂರು, ಮೇ.16: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಸುಮಾರು 435 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತ ಎಣಿಕೆ ಕಾರ್ಯ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದೆ. 16ನೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಏ.17 (ಗುರುವಾರ) ರಂದು ಮತದಾನ ನಡೆದಿದ್ದು, ಶೇ.67.28ರಷ್ಟು ದಾಖಲೆ ಮತದಾನ ಕಂಡಿತ್ತು. ಮತ ಎಣಿಕೆ, ಟ್ರೆಂಡಿಂಗ್, ಅಭ್ಯರ್ಥಿಗಳ ಮುನ್ನಡೆ, ಹಿನ್ನಡೆ ಕುರಿತ ಕ್ಷಣ ಕ್ಷಣದ ಮಾಹಿತಿ ಅಪ್ಡೇಡ್ ಗಳಿಗೆ ಈ ಪುಟ ನೋಡುತ್ತಿರಿ...

Karnataka Election Verdict 2014

4.45: ದಾವಣಗೆರೆಯಲ್ಲಿ ಬಿಜೆಪಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಕಾರ್ಯಕರ್ತ ಶಫಿವುಲ್ಲ(38) ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
4.35: ಕರ್ನಾಟಕ ಪಕ್ಷದ ಬಲಾಬಲ : ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2, ಎಎಪಿ ಶೂನ್ಯ.
4.30 : ಮಂಡ್ಯದಲ್ಲಿ ಜೆಡಿಎಸ್ ನ ಸಿ.ಎಸ್ ಪುಟ್ಟರಾಜುಗೆ ಜಯ. ಕಾಂಗ್ರೆಸ್ ಅಭ್ಯರ್ಥಿ ರಮ್ಯಾಗೆ ಸೋಲು, ತೀವ್ರ ಮುಖಭಂಗ.
3.45:
ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಗೆ ಭಾರಿ ಗೆಲುವು.
3.00:
ಗೆಲುವಿನ ಹೊಸ್ತಿಲಲ್ಲಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್ ಪುಟ್ಟರಾಜು, ಲಕ್ಕಿ ಕ್ವೀನ್ ರಮ್ಯಾಗೆ ಸೋಲಿನ ಕಹಿ ನಿಶ್ಚಿತ.
2.50: ಕರ್ನಾಟಕ ಬಲಾಬಲ: ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 1
2.30:
ಹಾಸನದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಭಾರಿ ಗೆಲುವು
2.20:
ಮೊಯ್ಲಿಗೆ ಒಲಿದ ವಿಜಯ ಲಕ್ಷ್ಮಿ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿಗೆ ಜಯ. ಬಿಜೆಪಿಯ ಬಿ.ಎನ್ ಬಚ್ಚೇಗೌಡಗೆ ಎರಡನೇ ಸ್ಥಾನ, ಜೆಡಿಎಸ್ ಎಚ್ ಡಿ ಕುಮಾರಸ್ವಾಮಿಗೆ ಭಾರಿ ಮುಖಭಂಗ.
2.15:
ಚಿಕ್ಕಬಳ್ಳಾಪುರದಲ್ಲಿ ಮತ್ತೆ ಮುನ್ನಡೆ ಪಡೆದುಕೊಂಡ ವೀರಪ್ಪ ಮೊಯ್ಲಿ, ಎರಡನೇ ಸ್ಥಾನದಲ್ಲಿ ಬಿಜೆಪಿಯ ಬಚ್ಚೇಗೌಡ, ಮೂರನೇ ಸ್ಥಾನದಲ್ಲಿ ಎಚ್ ಡಿ ಕುಮಾರಸ್ವಾಮಿ.
2.10:
ಬಿಜಾಪುರದಲ್ಲಿ ಬಿಜೆಪಿಯ ರಮೇಶ್ ಜಿಗಜಿಣಗಿಗೆ ಗೆಲುವು
2.00:
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಜೆಡಿಎಸ್ ಸಿ.ಎಚ್. ಪುಟ್ಟರಾಜುಗೆ 13 ಸಾವಿರ ಮತಗಲ ಮುನ್ನಡೆ

1.45: ಗೆಲುವು: ಬಿಜೆಪಿ 16, ಕಾಂಗ್ರೆಸ್ 8, ಜೆಡಿಎಸ್ 1
1.30: ತುಮಕೂರು ಕಾಂಗ್ರೆಸ್ಸಿನ ಮುದ್ದಹನುಮೇಗೌಡರಿಗೆ ಜಯ.
1.20: ಮೈಸೂರಿನಲ್ಲಿ ಹಳೆ ಹುಲಿ ಎಚ್. ವಿಶ್ವನಾಥ್ ಗೆ ಭಾರಿ ಮುಖಭಂಗ. ಪ್ರಥಮ ಬಾರಿಗೆ ಸಂಸತ್ ಪ್ರವೇಶಕ್ಕೆ ಸಜ್ಜಾದ ಪ್ರತಾಪ್ ಸಿಂಹ

1.15: ಕೊಪ್ಪಳದಲ್ಲಿ ಕರಡಿ ಕುಣಿತ: ಬಿಜೆಪಿಯ ಸಂಗಣ್ಣ ಕರಡಿಗೆ ಜಯ, ಕಾಂಗ್ರೆಸ್ಸಿನ ಬಸವರಾಜ್ ಹಿಟ್ನಾಳ್ ಗೆ ಸೋಲು
1.00: ರಾಯಚೂರು: ಮಾವನನ್ನು ಸೋಲಿಸಿದ ಅಳಿಯ. ಶಿವನಗೌಡ ನಾಯಕ್ ವಿರುದ್ಧ ಬಿ.ವಿ ನಾಯಕ್ ಗೆ ಗೆಲುವು.


12.45: ಮುನ್ನಡೆ: ಬಿಜೆಪಿ 5 ಕಾಂಗ್ರೆಸ್ 2 ಜೆಡಿಎಸ್ 1
12.35:
ಚಿತ್ರದುರ್ಗದಲ್ಲಿ ಬಿಜೆಪಿಯ ಜನಾರ್ದನ ಸ್ವಾಮಿ ವಿರುದ್ಧ ಕಾಂಗ್ರೆಸ್ಸಿನ ಬಿ.ಎನ್ ಚಂದ್ರಪ್ಪಗೆ ಗೆಲುವು
12.30: ಬೆಂಗಳೂರು ಸೆಂಟ್ರಲ್ ಸಕತ್ ಕ್ಲೈಮ್ಯಾಕ್ಸ್ ನಲ್ಲಿ ಪಿಸಿ ಮೋಹನ್ ಗೆ ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ವಿರುದ್ಧ ಗೆಲುವು.
12.20:
ಮೈಸೂರಿನ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮುನ್ನಡೆ
12.15:
ಚಾಮರಾಜನಗರ ಕಾಂಗ್ರೆಸ್ಸಿನ ಧ್ರುವನಾರಾಯಣಗೆ ಜಯ.
12.10:
ಬಿಜೆಪಿ ದಕ್ಷಿಣದಲ್ಲಿ ಅನಂತ್ ಕುಮಾರ್ ಸಿಕ್ಸರ್ ಸಾಧನೆ, ಡಬ್ಬಲ್ ಹ್ಯಾಟ್ರಿಕ್, ಭರ್ಜರಿ ಗೆಲುವು
12.08:
ಬಳ್ಳಾರಿಯಲ್ಲಿ ಬಿ.ಶ್ರೀರಾಮುಲುಗೆ 66 ಸಾವಿರ ಮತಗಳ ಅಂತರದ ಗೆಲುವು.
12.07:
ಬೆಳಗಾವಿಯಲ್ಲಿ 61,122 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ ಬಿಜೆಪಿಯ ಸುರೇಶ್ ಅಂಗಡಿ, ಕಾಂಗ್ರೆಸ್ಸಿನ ಲಕ್ಷ್ಮಿ ಹೆಬ್ಬಾಳಕರ್ ಗೆ ಮುಖಭಂಗ.
12.07:
ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ 50 ಸಾವಿರ ಮತಗಳ ಮುನ್ನಡೆ
12.06:
ಚಿಕ್ಕಬಳ್ಳಾಪುರದಲ್ಲಿ 14, 713 ಮತಗಳ ಮುನ್ನಡೆ ಕಾಯ್ದುಕೊಂಡ ವೀರಪ್ಪ ಮೊಯ್ಲಿ
12.05:
ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಅವರು ಕಾಂಗ್ರೆಸ್ಸಿನ ಅಜಯ್ ಕುಮಾರ್ ಸರನಾಯ್ಕ್ ವಿರುದ್ಧ ಗೆಲುವು
11.55: ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪಗೆ 20 ಸಾವಿರ ಮತಗಳ ಮುನ್ನಡೆ
11.52: ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ 25 ಸಾವಿರ ಮತಗಳ ಅಂತರದ ಮುನ್ನಡೆ.
11.50:
ಚಿಕ್ಕಬಳ್ಳಾಪುರ ಕ್ಷೆತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿಗೆ 15,104 ಮತಗಳ ಮುನ್ನಡೆ, ಮಂಡ್ಯದಲ್ಲಿ ಸಿ,ಎಸ್ ಪುಟ್ಟರಾಜು ಅವರಿಗೆ 39 ಸಾವಿರ ಮತಗಳ ಅಂತರದ ಮುನ್ನಡೆ, ಬೀದರ್ ನಲ್ಲಿ ಬಿಜೆಪಿ ಖೂಬಾಗೆ 28 ಸಾವಿರ ಅಂತರದ ಮುನ್ನಡೆ.
11.45:
ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಶಿಗೆ ಕಾಂಗ್ರೆಸ್ಸಿನ ವಿನಯ್ ಕುಲಕರ್ಣಿ ವಿರುದ್ಧ ಜಯ.
11.40: ಹಾಸನದಲ್ಲಿ ದೇವೇಗೌಡರಿಗೆ 34 ಸಾವಿರ ಮತಗಳ ಅಂತರದ ಮುನ್ನಡೆ.
11.30: ಬೆಂಗಳೂರು ದಕ್ಷಿಣ ಬಿಜೆಪಿಯ ಅನಂತ್ ಕುಮಾರ್ ಗೆ 1,04,360 ಮತಗಳ ಮುನ್ನಡೆ, 'ಆಧಾರ' ಕಳೆದುಕೊಂಡ ನಿಲೇಕಣಿ.
11.25:
ರಾಯಚೂರು: ಕಾಂಗ್ರೆಸ್ ಬಿವಿ ನಾಯಕ್ ಮುನ್ನಡೆ, ಬೀದರ್ ಬಿಜೆಪಿ ಭಗವಾನ್ ಖೂಬಾ 24,070 ಮತಗಳ ಮುನ್ನಡೆ, ಹಾವೇರಿಯಲ್ಲಿ ಬಿಜೆಪಿಯ ಶಿವಕುಮಾರ ಉದಾಸಿ 48 ಸಾವಿರ ಅಂತರದ ಮುನ್ನಡೆ,
11.22:
ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿಗೆ 15 ಸಾವಿರ ಮತದಾನದ ಅಂತರದ ಮುನ್ನಡೆ, ತುಮಕೂರಿನಲ್ಲಿ ಕಾಂಗ್ರೆಸ್ ಮುದ್ದಹನುಮೇಗೌಡ ಅವರಿಗೆ 24,598 ಮುನ್ನಡೆ, ಬಿಜೆಪಿ ಜೆ.ಎಸ್ ಬಸವರಾಜ್ ಗೆ ಹಿನ್ನಡೆ,
11.20:
ಬಳ್ಳಾರಿಯಲ್ಲಿ ಶ್ರೀರಾಮುಲು 47 289 ಅಂತರದ ಮುನ್ನಡೆ, ಉತ್ತರ ಕನ್ನಡದಲ್ಲಿ 1 ಲಕ್ಷ 3 ಸಾವಿರ ಅಂತರದ ಮುನ್ನಡೆ ಪಡೆದ ಅನಂತ ಕುಮಾರ್ ಹೆಗ್ಡೆ
11.15:
ಮೋದಿ ಹೆಸರು ಜಪಿಸುತ್ತಾ ಗೆಲುವು ಸಾಧಿಸಿದ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರದಲ್ಲಿ ಹಸನ್ಮುಖಿ ಸದಾನಂದ ಗೌಡರಿಗೆ ಜಯ
11.10:
ಮೈಸೂರು ಪ್ರತಾಪ್ ಸಿಂಹಗೆ 33,750 ಮತಗಳ ಮುನ್ನಡೆ
11.07: ಕರ್ನಾಟಕದಲ್ಲಿ ಮೂಲೆ ಗುಂಪಾದ ಪೂರಕೆ ಪಕ್ಷ, ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಕಳಪೆ ಸಾಧನೆ.

11.05: ಮುನ್ನಡೆ ಪಡೆದವರು: ಚಿಕ್ಕೋಡಿಯಲ್ಲಿ ಕಾಂಗ್ರೆಸ್ಸಿನ ಹುಕ್ಕೇರಿಗೆ 22,500 ಮತಗಳ ಅಂತರ, ಹಾಸನದಲಿ ದೇವೇಗೌಡಗೆ 22,044 ಮತಗಳ ಅಂತರ, ಬೆಳಗಾವಿಯಲ್ಲಿ ಸುರೇಶ್ ಅಂಗಡಿಗೆ 55 ಸಾವಿರ ಮತಗಳ ಅಂತರದ ಮುನ್ನಡೆ
11.05:
ಧಾರವಾಡದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಶಿ ಗೆಲುವು ಬಹುತೇಕ ಖಚಿತ, ಘೋಷಣೆಯಷ್ಟೇ ಬಾಕಿ.
11.03: ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ಸಿನ ರಿಜ್ವಾನ್ ಅಹ್ಮದ್ ಗೆ 3,282 ಮತಗಳ ಮುನ್ನಡೆ.
11.00: ದಾವಣಗೆರೆ:
ಕಾಂಗ್ರೆಸ್ಸಿನ ಎಸ್ ಎಸ್ ಮಲ್ಲಿಕಾರ್ಜುನಗೆ 22.212 ಅಂತರದ ಮುನ್ನಡೆ
10.57:
ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ 60ಕ್ಕೂ ಅಧಿಕ ಮತಗಳ ಅಂತರದ ಮುನ್ನಡೆ, ಕಾಂಗ್ರೆಸ್ಸಿನ ಅಜಯ್ ಕುಮಾರ್ ಸರನಾಯಕ್ ಗೆ ಹಿನ್ನಡೆ
10.56:
ಹಾಸನದ ಜೆಡಿಎಸ್ ಅಭ್ಯರ್ಥಿ ಎಚ್ ಡಿ ದೇವೇಗೌಡರಿಗೆ 18,737 ಮತಗಳ ಮುನ್ನಡೆ
10.55:
ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲುಗೆ 23,277 ಮತಗಳ ಮುನ್ನಡೆ
10.52:
ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ 30,127 ಮತಗಳ ಮುನ್ನಡೆ, ಕಾಂಗ್ರೆಸ್ಸಿನ ಸಲೀಂ ಅಹ್ಮದ್ ಗೆ ಹಿನ್ನಡೆ,
10.50:
ಮಂಡ್ಯದ ಮೇಲುಕೋಟೆಯ ಮತಗಟ್ಟೆಯೊಂದರಲ್ಲಿ ಎಣಿಕೆ ಸ್ಥಗಿತ, ಜೆಡಿಎಸ್ ಕಾರ್ಯಕರ್ತರ ಆಕ್ರೋಶ.
10.45: ಮಂಡ್ಯದಲ್ಲಿ ರಮ್ಯಾಗೆ 4246 ಅಂತರದಿಂದ ಹಿನ್ನಡೆ ಸಿ.ಎ‌ಸ್ ಪುಟ್ಟರಾಜುಗೆ ಮುನ್ನಡೆ
10.40: ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ಗೆ 1.20 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ವಿರುದ್ಧ ಗೆಲುವು, ಮೂರನೇ ಸ್ಥಾನಕ್ಕೆ
10.30: ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ 17,000 ಮತಗಳ ಮುನ್ನಡೆ,
10.25: ಕೋಲಾರ ಜೆಡಿಎಸ್ ಅಭ್ಯರ್ಥಿ ಕೇಶವ್ ಗೆ ಮುನ್ನಡೆ, ಕೆ.ಎಚ್ ಮುನಿಯಪ್ಪಗೆ ಹಿನ್ನಡೆ
10.20: ಪಕ್ಷಗಳ ಬಲಾಬಲ: ಬಿಜೆಪಿ 16, ಕಾಂಗ್ರೆಸ್ 10, ಜೆಡಿಎಸ್ 2
10.10:
ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹಗೆ 3,000 ಮತಗಳ ಮುನ್ನಡೆ
10.07:
ಚಿಕ್ಕೋಡಿ ಕಾಂಗ್ರೆಸ್ ಪ್ರಕಾಶ್ ಹುಕ್ಕೇರಿ, ಬೆಂಗಳೂರು ಕೇಂದ್ರ ಪಿಸಿ ಮೋಹನ್ ಮೊದಲ ಬಾರಿಗೆ ಮುನ್ನಡೆ
10.05:
ಯಡಿಯೂರಪ್ಪ ಅವರಿಗೆ 1,14,000 ಮತಗಳ ಮುನ್ನಡೆ, ಗೆಲುವು ಖಚಿತ, ಅಧಿಕೃತ ಘೋಷಣೆ ಬಾಕಿ.
10.00: ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಗೆ ಭರ್ಜರಿ ಜಯ, ಕಾಂಗ್ರೆಸ್ಸಿನ ಜನಾರ್ದನ ಪೂಜಾರಿಗೆ ಭಾರಿ ಮುಖಭಂಗ.
9.58:
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ದೇವೇಗೌಡರಿಗೆ 9,898 ಮತಗಳ ಮುನ್ನಡೆ
9.57 :
ಬೆಂಗಳೂರು ಗ್ರಾಮಾಂತರ: ಡಿಕೆ ಸುರೇಶ್ ಗೆ 20 ಸಾವಿರ ಮತಗಳ ಮುನ್ನಡೆ
9.55:
ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗ್ಡೆಗೆ ಮುನ್ನಡೆ 41,800 ಮತಗಳಿಂದ ಮುನ್ನಡೆ
9.50: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ, ಸಿಹಿ ಹಂಚಿಕೆ, ಪಟಾಕಿ ಸಿಡಿತ, ಭರ್ಜರಿ ಕುಣಿತ, ಕೇಸರಿ ಬಾವುಟ ಹಾರಾಟ.
9.48:
ಬಳ್ಳಾರಿಯಲ್ಲಿ ನೋಟಾಕ್ಕೂ ಬೆಲೆ, ಮುನ್ನಡೆಯಲ್ಲಿ ಬಿಜೆಪಿಯ ಬಿ.ಶ್ರೀರಾಮುಲು, ಕಾಂಗ್ರೆಸ್ ಹನುಮಂತಪ್ಪ ಹಿನ್ನಡೆ ಮೂರನೇ ಸ್ಥಾನದಲ್ಲಿ ನೋಟಾ.
9.45: ಈ ಸಮಯಕ್ಕೆ ಬಲಾಬಲ: ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2
9.42:
ಚಿತ್ರದುರ್ಗ: ಕಾಂಗ್ರೆಸ್ಸಿನ ಬಿ.ಎನ್ ಚಂದ್ರಪ್ಪಗೆ 28,000 ಮತಗಳ ಮುನ್ನಡೆ
9.40:
ಚಾಮರಾಜನಗರ ಕಾಂಗ್ರೆಸ್ ಧ್ರುವನಾರಾಯಣಗೆ 38,000 ಅಂತರದ ಮುನ್ನಡೆ
9.34:
ಶಿವಮೊಗ್ಗದಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಜೆಡಿಎಸ್ ಗೀತಾ ಶಿವರಾಜ್ ಕುಮಾರ್, ಯಡಿಯೂರಪ್ಪಗೆ 60,000ಕ್ಕೂ ಅಧಿಕ ಮತಗಳ ಮುನ್ನಡೆ
9.32:
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿಗೆ ಮುನ್ನಡೆ
9.30: ಧಾರವಾಡ:
ಬಿಜೆಪಿ ಪ್ರಹ್ಲಾದ್ ಜೋಶಿಗೆ 18,000 ಮತಗಳ ಮುನ್ನಡೆ
9.27: ಉಡುಪಿ ಚಿಕ್ಕಮಗಳೂರು :
ಬಿಜೆಪಿ ಶೋಭಾ ಕರಂದ್ಲಾಜೆಗೆ 21,807 ಮತಗಳಿಂದ ಮುನ್ನಡೆ, ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆಗೆ ಹಿನ್ನಡೆ
9.25: ಬೆಂಗಳೂರು ದಕ್ಷಿಣ:
ಬಿಜೆಪಿಯ ಅನಂತಕುಮಾರ್ ಗೆ 27,689 ಮತಗಳ ಮುನ್ನಡೆ, ಕಾಂಗ್ರೆಸ್ಸಿನ ನಂದನ್ ನಿಲೇಕಣಿ ಹಿನ್ನಡೆ
9.22: ಮುನ್ನಡೆ:
ಕೊಪ್ಪಳದಲ್ಲಿ ಬಿಜೆಪಿಯ ಸಂಗಣ್ಣ ಕರಡಿ, ಬಾಗಲಕೋಟೆಯಲ್ಲಿ ಬಿಜೆಪಿಯ ಪಿ.ಸಿ ಗದ್ದಿಗೌಡರ್
9.20:
ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ 90,284 ಮತಗಳ ಮುನ್ನಡೆ, ಕಾಂಗ್ರೆಸ್ಸಿನ ಜನಾರ್ದನ ಪೂಜಾರಿಗೆ ಹಿನ್ನಡೆ
9.15:
ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪಗೆ 35,000 ಮತಗಳ ಅಂತರದ ಮುನ್ನಡೆ
9.14:
ಬೆಳಗಾವಿ ಬಿಜೆಪಿ ಸುರೇಶ್ ಅಂಗಡಿಗೆ 19,084 ಮತಗಳ ಮುನ್ನಡೆ
9.12:
ಬೀದರ್ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಮುನ್ನಡೆ, ಕಾಂಗ್ರೆಸ್ಸಿನ ಧರಂ ಸಿಂಗ್ ಹಿನ್ನಡೆ
9.10: ಮೊದಲ ಸುತ್ತಿನ ನಂತರ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2
9.08:
ಹಾಸನದಲ್ಲಿ ಮೊದಲ ಬಾರಿಗೆ ಎಚ್ ಡಿ ದೇವೇಗೌಡರಿಗೆ ಹಿನ್ನಡೆ, ಬಿಜೆಪಿ ಸಿ.ಎಚ್ ವಿಜಯ ಶಂಕರ್ ಗೆ ಮುನ್ನಡೆ
9.05: ಈ ಸಮಯದ ಮುನ್ನಡೆ : ಬಿಜೆಪಿ 18, ಕಾಂಗ್ರೆಸ್ 9, ಜೆಡಿಎಸ್ 1
9.01:
ಬಳ್ಳಾರಿ: ಬಿಜೆಪಿಯ ಶ್ರೀರಾಮುಲು 3 ಸಾವಿರ ಮತಗಳ ಮುನ್ನಡೆ, ಗುಲ್ಬರ್ಗ:ಕಾಂಗ್ರೆಸ್ಸಿನ ಮಲ್ಲಿಕಾರ್ಜುನ್ ಖರ್ಗೆ 2,787 ಮತಗಳಿಂದ ಮುನ್ನಡೆ
9.00:
ಮೊದಲ ಬಾರಿಗೆ ಮುನ್ನಡೆ ಪಡ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ, ಮೈಸೂರಿನ ಅಭ್ಯರ್ಥಿ ಎಚ್. ವಿಶ್ವನಾಥ್
8.55: 50, 542 ಮತಗಳ ಭಾರಿ ಅಂತರದ ಮುನ್ನಡೆ ಪಡೆದ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು
8.50: ಶಿವಮೊಗ್ಗ: ಯಡಿಯೂರಪ್ಪ 15 ಸಾವಿರ ಅಂತರದಿಂದ ಮುನ್ನಡೆ, ಜೆಡಿಎಸ್ ಗೀತಾ ಶಿವರಾಜ್ ಕುಮಾರ್ ಗೆ ಹಿನ್ನಡೆ
8.48:
ಬಿಜೆಪಿ ಮುನ್ನಡೆ: ದಾವಣಗೆರೆ: ಎಸ್ಎಸ್ ಮಲ್ಲಿಕಾರ್ಜುನ, ಧಾರವಾಡ: ಪ್ರಹ್ಲಾದ್ ಜೋಶಿ.
8.45: 19 ಕ್ಷೇತ್ರ ಮುನ್ನಡೆ: ಬಿಜೆಪಿ 10, ಕಾಂಗ್ರೆಸ್ 6, ಜೆಡಿಎಸ್ 3
8.42:
ಹಿನ್ನೆಡೆ : ಮಂಡ್ಯದಲ್ಲಿ ರಮ್ಯಾ, ಮೈಸೂರು ವಿಶ್ವನಾಥ್, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಯ ಬಿ.ಎನ್ ಬಚ್ಚೇಗೌಡ.
8.45: 19 ಕ್ಷೇತ್ರ ಮುನ್ನಡೆ: ಬಿಜೆಪಿ 10, ಕಾಂಗ್ರೆಸ್ 6, ಜೆಡಿಎಸ್ 3
8.42: ಹಿನ್ನೆಡೆ :
ಮಂಡ್ಯದಲ್ಲಿ ರಮ್ಯಾ, ಮೈಸೂರು ವಿಶ್ವನಾಥ್, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಯ ಬಿ.ಎನ್ ಬಚ್ಚೇಗೌಡ.
8.40:
ಶಿವಮೊಗ್ಗ ಬಿಎಸ್ ಯಡಿಯೂರಪ್ಪ ಮುನ್ನಡೆ, ಉತ್ತರ ಕನ್ನಡ ಅನಂತಕುಮಾರ್ ಹೆಗಡೆ ಮುನ್ನಡೆ, ಚಿಕ್ಕಬಳ್ಳಾಪುರ ಎಚ್ ಡಿ ಕುಮಾರಸ್ವಾಮಿ ಮುನ್ನಡೆ
8.30: ದಕ್ಷಿಣ ಕನ್ನಡ :
22.286 ಮತಗಳಿಂದ ಬಿಜೆಪಿ ನಳಿನ್ ಕುಮಾರ್ ಕಟೀಲು ಮುನ್ನಡೆ, ಕಾಂಗ್ರೆಸ್ಸಿನ ಜನಾರ್ದನ ಪೂಜಾರಿಗೆ ಹಿನ್ನಡೆ
8.25: ಬೆಂಗಳೂರು ಉತ್ತರ ಬಿಜೆಪಿ ಡಿವಿ ಸದಾನಂದ ಗೌಡ ಮುನ್ನಡೆ; ಬೆಂಗಳೂರು ಸೆಂಟ್ರಲ್ ಕ್ಷೇತ್ರ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಮುನ್ನಡೆ ; ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್ ನ ಡಿಕೆ ಸುರೇಶ್ ಮುನ್ನಡೆ, ಬೆಂಗಳೂರು ದಕ್ಷಿಣ ಬಿಜೆಪಿಯ ಅನಂತ ಕುಮಾರ್ ಮುನ್ನಡೆ
8.20 : ಮುನ್ನಡೆ ಪಡೆದವರು:
ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ(ಕಾಂಗ್ರೆಸ್), ರಾಯಚೂರು: ಶಿವನಗೌಡ ನಾಯಕ್(ಬಿಜೆಪಿ), ಬಳ್ಳಾರಿ: ಶ್ರೀರಾಮುಲು(ಬಿಜೆಪಿ), ಹಾಸನದಲ್ಲಿ ಎಚ್ ಡಿ ದೇವೇಗೌಡ(ಜೆಡಿಎಸ್), ದಕ್ಷಿಣ ಕನ್ನಡದಲ್ಲಿ ನಳಿನ್ , ಚಿತ್ರದುರ್ಗದಲ್ಲಿ ಬಿ.ಎನ್ ಚಂದ್ರಪ್ಪ(ಕಾಂಗ್ರೆಸ್) , ತುಮಕೂರು: ಜಿಎಸ್ ಬಸವರಾಜು(ಬಿಜೆಪಿ) ಮುನ್ನಡೆ, ಚಾಮರಾಜನಗರ ಎ.ಆರ್ ಕೃಷ್ಣಮೂರ್ತಿ(ಬಿಜೆಪಿ), ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ (ಕಾಂಗ್ರೆಸ್), ಬೆಳಗಾವಿ ಲಕ್ಷ್ಮಿ ಹೆಬ್ಬಾಳಕರ್(ಕಾಂಗ್ರೆಸ್)
8.15: ಕರ್ನಾಟಕ 12 ಕ್ಷೇತ್ರ ಮುನ್ನಡೆ : ಬಿಜೆಪಿ 7, ಕಾಂಗ್ರೆಸ್ 4, ಜೆಡಿಎಸ್ 1
8.09:
ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು 10,778 ಮತಗಳಿಂದ ಮುನ್ನಡೆ
8.08:
ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ(ಬಿಜೆಪಿ) ಮುನ್ನಡೆ
8.07:
ಮಂಗಳೂರಿನ ಸೆಕ್ಷನ್ 144 ಜಾರಿ, ಫಲಿತಾಂಶದ ನಂತರ ಸಂಭ್ರಮಾಚರಣೆಗೆ ಸಂಜೆ 6 ಗಂಟೆ ತನಕ ಕಡಿವಾಣ.
8.05:
13,000 ಚುನಾವಣಾ ಸಿಬ್ಬಂದಿಗಳು 28 ಕ್ಷೇತ್ರಗಳಲ್ಲಿ ಇವಿಎಂನಲ್ಲಿ ದಾಖಲಾಗಿರುವ ಮತ ಎಣಿಸುತ್ತಿದ್ದಾರೆ.
8.04:
ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲು ಮುನ್ನಡೆ
8.03:
ಮೈಸೂರು: ಪ್ರತಾಪ್ ಸಿಂಹಗೆ ಆರಂಭಿಕ ಮುನ್ನಡೆ, ಎಚ್ ವಿಶ್ವನಾಥ್ ಹಿನ್ನಡೆ
8.00:
ಮತ ಎಣಿಕೆ ಆರಂಭ, ಮೊದಲಿಗೆ ಅಂಚೆ ಮತಗಳ ಎಣಿಕೆ.
7.55:
ರಾಯಚೂರು ಮತಕೇಂದ್ರ ಹೊರಗಡೆ ಗಲಾಟೆ, ಪೊಲೀಸರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ.
7.50: ಬಳ್ಳಾರಿ ಸೇರಿದಂತೆ ದೇಶದೆಲ್ಲೆಡೆ ಅಂಚೆ ಮತ ಎಣಿಕೆ ಆರಂಭ.
7.35 :
ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ಸೇರಿ 5,50,000 ಮಂದಿ ಭದ್ರತಾ ಸಿಬ್ಬಂದಿ ರಕ್ಷಣೆಯಲ್ಲಿ ಮತ ಎಣಿಕೆ ಕಾರ್ಯ ನಡೆಸಲಾಗುತ್ತಿದೆ.
7.30: ಬೆಂಗಳೂರಿನ ಎಸ್ಎಸ್ಎಂಆರ್ ವಿ ಪಿಯು ಕಾಲೇಜು, ಸರ್ಕಾರಿ ಆರ್.ಸಿ.ಕಾಲೇಜು, ವಿಎಚ್ಡಿ ಹೋಮ್ಸೈನ್ಸ್ ಕಾಲೇಜು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ ಸೇರಿದಂತೆ ರಾಜ್ಯದ 30 ಕಡೆಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. [ಕರ್ನಾಟಕ : ಗೆದ್ದವರು ಸೋತವರು ]

ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್ಪಿ ಜತೆಗೆ ಜನ ಸಾಮಾನ್ಯರ ಪಕ್ಷ (ಎಎಪಿ) ಕೂಡಾ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ರಾಜ್ಯದ ಮತ್ತೊಂದು ಪ್ರಮುಖ ಪಕ್ಷ ಜೆಡಿಎಸ್ 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. 2014ರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಸಿಪಿಐ-3, ಸಿಪಿಎಂ-2, ಹಾಗೂ ಎನ್ ಸಿಪಿ ಯಿಂದ ಒಬ್ಬ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದರು. ನೋಂದಾಯಿತ ಆದರೆ ಮಾನ್ಯತೆ ಹೊಂದಿಲ್ಲದ ಪಕ್ಷಗಳಿಂದ 124 ಅಭ್ಯರ್ಥಿಗಳು ಹಾಗೂ 195 ಪಕ್ಷೇತರರು, 21 ಮಹಿಳಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆಯಲ್ಲಿದ್ದರು.

English summary
Karnataka Election Verdict 2014 : Trends, Results, Party wise swing for 28 LS constituencies. Polling for the 16th Lok Sabha held in Karnataka on April 17. Today May 16 is Results Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X