ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡೆ ಶೂಟೌಟ್ ಐಜಿಪಿ ವಜೀರ್ ಅಹಮದ್ ಕೊನೆಗೂ ವರ್ಗ

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 1- ಎಸ್ಸೈ ಮಲ್ಲಿಕಾರ್ಜುನ ಬಂಡೆ ಶೂಟೌಟ್ ಪ್ರಕರಣದಲ್ಲಿ ವಿವಾದಕ್ಕೀಡಾಗಿದ್ದ ಐಜಿಪಿ ಮೊಹಮದ್ ವಜೀರ್ ಅಹಮದ್ ಅವರನ್ನು ಲೋಕಸಭೆ ಚುನಾವಣೆ ನೆಪದಲ್ಲಿ ಕೊನೆಗೂ ವರ್ಗಾವಣೆ ಮಾಡಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ. ಜತೆಗೆ ಇನ್ನೂ 11 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಆದೇಶ ಹೊರಡಿಸಿದೆ. ನಿನ್ನೆಯಷ್ಟೇ 6 ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಲಾಗಿತ್ತು.

ಲೋಕಸಭೆ ಚುನಾವಣೆ ಅಂಗವಾಗಿ ಇನ್ನೂ ಸಾಕಷ್ಟು ಐಎಎಸ್/ ಐಪಿಎಸ್ ಮತ್ತು ತಹಸೀಲ್ದಾರ್ ಹಂತದ ಅಧಿಕಾರಿಗಳು ವರ್ಗಾವಣೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಚುನಾವಣಾ ಆಯೋಗವು ಒಟ್ಟು 183 ಅಧಿಕಾರಿಗಳ ಪಟ್ಟಿ ಮಾಡಿದ್ದು, ಅವರನ್ನೆಲ್ಲಾ ತಕ್ಷಣ ವರ್ಗಾವಣೆ ಮಾಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಆದರೆ ರಾಜ್ಯ ಸರಕಾರಕ್ಕೆ ಈ ಅಧಿಕಾರಿಗಳನ್ನು ವರ್ಗಾಯಿಸುವ ಮನಸ್ಸಿಲ್ಲ. ಹಾಗಾಗಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸ್ವತಃ ಆಯೋಗವೇ ಅಧಿಕಾರಿಗಳ ವರ್ಗಾವಣೆಗೆ ಆದೇಶ ನೀಡಲಿದೆ ಎಂದು ತಿಳಿದುಬಂದಿದೆ.

Lok Sabha election effect- 12 IPS 6 IAS officers transferred by Siddaramaiah govt,

ಇಂದು ವರ್ಗಾವಣೆಗೊಂಡ IPS ಅಧಿಕಾರಿಗಳು:
1. ಅಮರ್ ಕುಮಾರ್ ಪಾಂಡೆ - ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ,
2. ಟಿ ಸುನಿಲ್‌ ಕುಮಾರ್ - ಎಡಿಜಿಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ
3. ಮೊಹಮದ್ ವಜೀರ್ ಅಹಮದ್ - ಐಜಿಪಿ, ತರಬೇತಿ (ಬೆಂಗಳೂರು)
4 ಸಿಎಚ್ ಪ್ರತಾಪ್‌ ರೆಡ್ಡಿ - ಐಜಿಪಿ, ಗೃಹ ಇಲಾಖೆ ಕಾರ್ಯದರ್ಶಿ
5. ಡಾ. ಸುರೇಶ್ ಕೊಹ್ನಿ ಮೊಹಮ್ಮದ್ - ಐಜಿಪಿ, ಈಶಾನ್ಯ ವಲಯ, ಗುಲ್ಬರ್ಗ
6. ಕೆಎಸ್ಆರ್ ಚರಣ್‌ ರೆಡ್ಡಿ - ಐಜಿಪಿ, ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ತಂಡ
ಹಾಗೂ ಜಲಸಂಪನ್ಮೂಲ ಇಲಾಖೆ ಜಾಗೃತ ವಿಭಾಗದ ಹೆಚ್ಚುವರಿ ಐಜಿಪಿ
7. ಸೀಮಂತ್‌ ಕುಮಾರ್ ಸಿಂಗ್ - ಐಜಿಪಿ, ಪಶ್ಚಿಮ ವಲಯ, ಮಂಗಳೂರು
8. ಡಾ. ರಾಮ್‌ ನಿವಾಸ್ ಸೇಪಥ್ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಾಪುರ
9. ಅಜಯ್ ಹಿಲೋರಿ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೋಲಾರ ಹಾಗೂ ಹೆಚ್ಚುವರಿ ಎಸ್ಪಿ, ಕೆಜಿಎಫ್
10. ಡಾ. ರೋಹಿಣಿ ಕಾಟೋಚ್ ಸೇಪಥ್ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಪ್ಪಳ
11. ಎಸ್ ಡಿ ಶರಣಪ್ಪ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರು
12. ಕೆಟಿ ಬಾಲಕೃಷ್ಣ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ

ಶುಕ್ರವಾರ ವರ್ಗಗೊಂಡ ಆರು ಐಎಎಸ್ ಅಧಿಕಾರಿಗಳು:
1. ಬಿಎನ್ ಕೃಷ್ಣಯ್ಯ - ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರು
2. ಮುದ್ದು ಮೋಹನ್ - ಉಡುಪಿ ಜಿಲ್ಲಾಧಿಕಾರಿ
3. ಡಾ. ಎಂಟಿ ರೇಜು - ಉತ್ತರ ಕನ್ನಡ ಜಿಲ್ಲಾಧಿಕಾರಿ
4. ಡಾ. ಎಂಎನ್ ಅಜಯ್‌ ನಾಗಭೂಷಣ್ - ಮಂಡ್ಯ ಜಿಲ್ಲಾಧಿಕಾರಿ
5. ಪಾಂಡುರಂಗ ಬೊಮ್ಮಯ್ಯ ನಾಯಕ್ - ಪಶುಸಂಗೋಪನೆ ಹಾಗೂ ಪಶುವೈದ್ಯ ಸೇವೆಗಳ ಆಯುಕ್ತ
6. ಮೊಹಮದ್ ಸಲಾಹುದ್ದೀನ್- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಳ್ಳಾರಿ ಜಿ.ಪಂ.

English summary
Lok Sabha polls 2014 effect: In a major bureaucratic reshuffle, the Karnataka state government today (Mar 1) changed 12 IPS and 6 IAS officers from their present posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X