ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

28 ಕ್ಷೇತ್ರಗಳಿಗೆ ಅಖಾಡದಲ್ಲಿ 435 ಅಭ್ಯರ್ಥಿಗಳು

|
Google Oneindia Kannada News

ಬೆಂಗಳೂರು, ಮಾ. 31: ಲೋಕಸಭೆ ಚುನಾವಣೆ ಅಖಾಡಕ್ಕಿಳಿದಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭ್ಯವಾಗಿದ್ದು, ರಾಜ್ಯದ 28 ಕ್ಷೇತ್ರಗಳಲ್ಲಿ ಅಂತಿಮವಾಗಿ 23 ಮಹಿಳೆಯರು ಸೇರಿದಂತೆ 435 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು. ಏ.17ರಂದು ಮತದಾನ ನಡೆಯಲಿದೆ.

ಲೋಕಸಭೆ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರಗಳನ್ನು ವಾಪಸ್ ಪಡೆಯಲು ಮಾ.29ರ ಶನಿವಾರ ಕೊನೆಯ ದಿನವಾಗಿತ್ತು. ಅಂದು 109 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದು, ಕಣದಿಂದ ಹಿಂದೆ ಸರಿದಿದ್ದಾರೆ. ಅಂತಿಮವಾಗಿ 435 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

Anil Kumar Jha

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ನಾಯ್ಕ, ತುಮಕೂರು ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಇಮ್ತಿಯಾಜ್ ಅಹ್ಮದ್‌ ನಾಮಪತ್ರಗಳನ್ನು ವಾಪಸ್ ಪಡೆದ ಪ್ರಮುಖರು. 435 ಅಭ್ಯರ್ಥಿಗಳ ಪೈಕಿ 28 ಸಂಸದರನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. ಏ.17ರಂದು ಮತದಾನ ನಡೆಯಲಿದ್ದು, ಮೇ 16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಲೋಕಸಭೆ ಚುನಾವಣೆ ಕದನಕ್ಕೆ ವೇದಿಕೆ ಸಿದ್ಧವಾಗಿದ್ದು, ಒಬ್ಬರು ಮಾಜಿ ಪ್ರಧಾನಿ ಮತ್ತು ಐವರು ಮಾಜಿ ಮುಖ್ಯಮಂತ್ರಿಗಳು ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದ್ದಾರೆ. ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ 26 ಅಭ್ಯರ್ಥಿಗಳು ಕಣದಲ್ಲಿದ್ದು, ಗುಲ್ಬರ್ಗದಲ್ಲಿ ಅತಿ ಕಡಿಮೆ ಅಂದರೆ 8 ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ. [ಗೌಡರಿಗೆ ಕೈ ಕೊಟ್ಟ ಶಿವಾನಂದ ನಾಯ್ಕ್]

ಪಕ್ಷಗಳ ಬಲಾಬಲ : ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಪಕ್ಷದ 28, ಪ್ರತಿಪಕ್ಷ ಬಿಜೆಪಿಯ 28 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, ಜೆಡಿಎಸ್‌ 25 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆಗೆ ಇಳಿದಿದೆ. ಆಮ್‌ ಆದ್ಮಿ ಪಕ್ಷ, ಬಿಎಸ್ಪಿ, ಸಂಯುಕ್ತ ಜನತಾದಳ, ಸಿಪಿಐ(ಎಂ) ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

English summary
Elections 2014 : A total of 109 candidates on Saturday, March 29 withdrew their nomination papers for the Lok Sabha elections in Karnataka, leaving 435 contestants in the fray. Election will be held on April 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X