ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆ ಕ್ಷಣದಲ್ಲಿ ಮಲ್ಲಿಕಾರ್ಜುನ ಕೈ ತಪ್ಪಿದ ಗೆಲುವು

|
Google Oneindia Kannada News

ದಾವಣಗೆರೆ, ಮೇ 19 : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ ಅವರು ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಆದರೆ, ಬಿಜೆಪಿಯಲ್ಲಿ ತೀರಾ ಕಡಮೆ ಮತಗಳ ಅಂತರದಲ್ಲಿ ಗೆದ್ದವರು ಜಿ.ಎಂ.ಸಿದ್ದೇಶ್ವರ್. ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ ಅವರು ಸಿದ್ದೇಶ್ವರ್ ಅವರಿಗೆ ಅಷ್ಟು ಪ್ರಬಲ ಪೈಪೋಟಿ ನೀಡಿದ್ದರು.

ಲೋಕಸಭೆ ಚುನಾವಣೆಯ ಸಿದ್ಧತೆ ಆರಂಭಿಸಿದ ಬಿಜೆಪಿ ದಾವಣಗೆರೆ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳಿಲ್ಲದಂತೆ ಆಯ್ಕೆ ಮಾಡಿದ ಅಭ್ಯರ್ಥಿ ಹಾಲಿ ಸಂಸದ ಜಿಎಂ ಸಿದ್ದೇಶ್. ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಸಿದ್ದೇಶ್ ಅವರನ್ನು 2014ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಘೋಷಿಸಲಾಯಿತು. [ಕರ್ನಾಟಕದಲ್ಲಿ ಗೆದ್ದವರು, ಸೋತವರು]

GM Siddeshwara

ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶವನ್ನು ದಾವಣಗೆರೆಯಲ್ಲಿ ಆಯೋಜಿಸುವ ಮೂಲಕ ಸಿದ್ದೇಶ್ವರ್ ಗೆಲುವಿಗಾಗಿ ಬಿಜೆಪಿ ಭದ್ರ ಅಡಿಪಾಯವನ್ನು ಹಾಕಿತ್ತು. 5,18,894 ಮತಗಳನ್ನು ಪಡೆದ ಸಿದ್ದೇಶ್ವರ್ ಅವರು, 17,607 ಮತಗಳ ಅಂತದಿಂದ ಜಯಗಳಿಸುವ ಮೂಲಕ ಹ್ಯಾಟಿಕ್ ಬಾರಿಸಿದರು. [ಜಿಎಂ ಸಿದ್ದೇಶ್ವರ್ ಸಂಕ್ಷಿಪ್ತ ಪರಿಚಯ]

2009ರ ಚುನಾವಣೆಯಲ್ಲಿ ಸಿದ್ದೇಶ್ವರ್ ಅವರಿಗೆ ಎದುರಾಳಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ ಈ ಬಾರಿಯೂ ಸಹ ಕಣಕ್ಕಿಳಿದಿದ್ದರು. ಸಚಿವ ಶಾಮನೂರು ಶಿವಶಂಕರಪ್ಪ ಪುತ್ರ ಮಲ್ಲಿಕಾರ್ಜುನ ಕೊನೆ ಕ್ಷಣದ ವರೆಗೆ ನೇರ ಪೈಪೋಟಿ ನೀಡಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು 65 ಸಾವಿರ, 1 ಲಕ್ಷ, 2 ಲಕ್ಷ, ಮೂರು ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಆದರೆ, ಬಿಜೆಪಿಯಲ್ಲಿಯೇ ತೀರಾ ಕಡಮೆ ಮತಗಳ ಅಂತರದಲ್ಲಿ ಗೆದ್ದವರು ದಾವಣಗೆರೆಯ ಜಿ.ಎಂ.ಸಿದ್ದೇಶ್ವರ್, ಕೇವಲ 17,607 ಮತಗಳ ಅಂತರದಿಂದ ಗೆದ್ದ ಸಿದ್ದೇಶ್ವರ್ ಅವರಿಗೆ ಮಲ್ಲಿಕಾರ್ಜುನ್ ಅಷ್ಟರ ಮಟ್ಟಿಗೆ ಪೈಪೋಟಿ ನೀಡುವಲ್ಲಿ ಸಫಲರಾಗಿದ್ದಾರೆ. ಅಭ್ಯರ್ಥಿಗಳು ಪಡೆದ ಮತಗಳ ಮಾಹಿತಿ ಹೀಗಿದೆ.

ದಾವಣಗೆರೆ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಜಿ.ಎಂ.ಸಿದ್ದೇಶ್ವರ್ 1
ಬಿಜೆಪಿ 5,18,894
ಮಲ್ಲಿಕಾರ್ಜುನ
2
ಕಾಂಗ್ರೆಸ್ 5,01,287
ಮಹಿಮ ಪಟೇಲ್
3
ಜೆಡಿಎಸ್ 46,911
ಎಚ್.ಕೆ.ರಾಮಚಂದ್ರಪ್ಪ
4
ಸಿಪಿಐ
8084
English summary
Lok Sabha Election results 2014, Karnataka : BJP candidate GM Siddeshwara wins in Davanagere Lok Sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X