ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಾಪುರದಲ್ಲಿ ಏಳು ಶಾಸಕರ ಶ್ರಮವೂ ಫಲನೀಡಲಿಲ್ಲ

|
Google Oneindia Kannada News

ಬಿಜಾಪುರ, ಮೇ 20 : ಬಿಜಾಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಸೋಲುಣಿಸುವ ಕಾಂಗ್ರೆಸ್ ಕಾರ್ಯತಂತ್ರ ವಿಫಲವಾಗಿದೆ. 69,819 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಜಿಗಜಿಣಗಿ ಎರಡನೇ ಬಾರಿ ಸಂಸತ್ ಪ್ರವೇಶಿಸಿದ್ದಾರೆ. ಸದ್ಯ, ಅವರಿಗೆ ಸಚಿವರಾಗುವ ಯೋಗವೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಮೇಶ ಚಂದ್ರಪ್ಪ ಜಿಗಜಿಣಿಗಿ 2009ರಲ್ಲಿ ಬಿಜಾಪುರ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದರು. ಈ ಬಾರಿ ಜಿಗಜಿಣಗಿ ಸೋಲಿಸಬೇಕು ಎಂದು ಪಣತೊಟ್ಟಿದ್ದ ಕಾಂಗ್ರೆಸ್, ಪ್ರಕಾಶ್ ಕೆ.ರಾಥೋಡ್ ಅವರನ್ನು ಕಣಕ್ಕಿಳಿಸಿತ್ತು. ಆದರೆ, 4,01,938 ಮತಗಳನ್ನು ಪಡೆದ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಜಿಲ್ಲೆಯಲ್ಲಿ ಕಾಂಗ್ರೆಸ್‌ನ 7 ಶಾಸಕರ ಒಗ್ಗಟ್ಟಿನ ಶ್ರಮವೂ ರಾಥೋಡ್ ಅವರ ಗೆಲುವಿಗೆ ಸಹಕಾರ ನೀಡಲಿಲ್ಲ.

Ramesh Jigajinagi

ಈ ಚುನಾವಣೆಯಲ್ಲಿ ಕಾಂಗ್ರೆಸ್ ರಮೇಶ ಜಿಗಜಿಣಗಿ ಕಳೆದ ಅವಧಿಯಲ್ಲಿ ಕೆಲಸವನ್ನೇ ಮಾಡಲಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಲೋಕಸಭೆಯಲ್ಲಿ ಒಮ್ಮೆಯೂ ಮಾತನಾಡಲಿಲ್ಲ ಎಂದು ಟೀಕಿಸುತ್ತಾ ಪ್ರಚಾರ ಮಾಡಿದ್ದರು. ನರೇಂದ್ರ ಮೋದಿ ವಿಜಾಪುರದಲ್ಲಿ ಪ್ರಚಾರ ನಡೆಸಿದ್ದು ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ್ ಪಕ್ಷಕ್ಕೆ ಮರಳಿದ್ದು, ಜಿಗಜಿಣಗಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವು. [ಬಿಜಾಪುರದಲ್ಲಿನ ಕಾಂಗ್ರೆಸ್ ಬಲಾಬಲ]

ಒಟ್ಟು 20 ಸುತ್ತಿನ ಮತ ಎಣಿಕೆಯಲ್ಲಿ ರಮೇಶ ಜಿಗಜಿಣಗಿ ಮುನ್ನಡೆ ಕಾಯ್ದುಕೊಂಡಿದ್ದರು. 8 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಥೋಡ್ ಗೆ ಬಬಲೇಶ್ವರ ಹಾಗೂ ವಿಜಾಪುರ ನಗರ ಕ್ಷೇತ್ರಗಳಲ್ಲಿ ಅಲ್ಪ ಮುನ್ನಡೆ ಸಿಕ್ಕಿದ್ದು ಬಿಟ್ಟರೆ ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತು.

ಏ.17ರಂದು ನಡೆದ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರದಲ್ಲಿ ಶೇ 60ರಷ್ಟು ಮತದಾನವಾಗಿತ್ತು. ಒಟ್ಟು ಚಲಾವಣೆಯಾದ 9,66,707ಮತಗಳಲ್ಲಿ ಬಿಜೆಪಿಯ ರಮೇಶ ಜಗಜಿಣಗಿ 4,71,757 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಪ್ರಕಾಶ ರಾಠೋಡ 4,0,1,938 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಬಿಜಾಪುರ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ರಮೇಶ್ ಜಿಗಜಿಣಗಿ
1
ಬಿಜೆಪಿ 4,71,757
ಪ್ರಕಾಶ್ ಕೆ.ರಾಥೋಡ್
2
ಕಾಂಗ್ರೆಸ್ 4,01,938
ಕೆ.ಎಸ್.ಶಿವರಾಂ
3
ಜೆಡಿಎಸ್ 57,551
ಶ್ರೀಧರ್ ನಾರಾಯಣಕರ್
4
ಎಎಪಿ
4,717
English summary
Lok Sabha Election results 2014, Karnataka : Ramesh Jigajinagi(BJP) wins in Bijapur Lok Sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X