ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಠೇವಣಿಯೂ ಉಳಿಸಿಕೊಳ್ಳಲಾಗದ ಕ್ಷೇತ್ರಗಳು

|
Google Oneindia Kannada News

ವಿಜೇತ ಅಭ್ಯರ್ಥಿಗಳ ವರ್ಚಸ್ಸು, ದೇಶಾದ್ಯಂತ ವ್ಯಾಪಕವಾಗಿದ್ದ ನರೇಂದ್ರ ಮೋದಿ ಅಲೆಯಿಂದಾಗಿ ಪ್ರಮುಖವಾಗಿ ಜಾತ್ಯಾತೀತ ಜನತಾದಳ ಹಲವಾರು ಕ್ಷೇತ್ರಗಳಲ್ಲಿ ಠೇವಣಿಯನ್ನೂ ಉಳಿಸಿಕೊಳ್ಳಲಾಗದಂತ ದಯನೀಯ ಸ್ಥಿತಿಗೆ ಈ ಬಾರಿಯ ಚುನಾವಣೆಯಲ್ಲಿ ತಲುಪಿತ್ತು.

ಕೊನೆಯ ಕ್ಷಣದವರೆಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸದೇ ಇದ್ದದ್ದು ಮತ್ತು ಮೈಸೂರು ಕರ್ನಾಟಕ ಭಾಗದಲ್ಲಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತೋರಿದ ಮುಂಜಾಗೃತ ಕ್ರಮವನ್ನು ರಾಜ್ಯದ ಇತರ ಭಾಗದ ಕ್ಷೇತ್ರಗಳಿಗೂ ತೋರಿಸದೇ ಇದ್ದದ್ದು ಜೆಡಿಎಸ್ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ. (ಸದ್ಯಕ್ಕೆ ರಾಜಕೀಯ ನಿವೃತ್ತಿ ಹೊಂದಲ್ಲ: ದೇವೇಗೌಡ)

ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದನ್ನು ಬಿಟ್ಟರೆ, ಬೆರಣಿಳಿಕೆಯಷ್ಟು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ರಾಷ್ಟೀಯ ಪಕ್ಷಗಳಿಗೆ ಕೊಂಚ ಪೈಪೋಟಿ ನೀಡಿತ್ತು. ಮಾಜಿ ಉಪಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಪರಾಭವಗೊಂಡಿದ್ದು ಪಕ್ಷಕ್ಕಾದ ತೀವ್ರ ಹಿನ್ನಡೆ.

ಠೇವಣಿ ಕಳೆದುಕೊಳ್ಳುವುದೆಂದರೆ ಏನು? ಕ್ಷೇತ್ರದ ಯಾವುದೇ ಅಭ್ಯರ್ಥಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಆರನೇ ಒಂದು ಭಾಗದಷ್ಟು ಮತವನ್ನು ಪಡೆಯಲು ವಿಫಲವಾದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳು ಭಾರತೀಯ ಚುನಾವಣಾ ಆಯೋಗದ ಕಾನೂನಡಿಯಲ್ಲಿ ಠೇವಣಿಯನ್ನು ಕಳೆದುಕೊಳ್ಳಲಿದ್ದಾರೆ.

ಜೆಡಿಎಸ್ ಠೇವಣಿಯನ್ನೂ ಉಳಿಸಿಕೊಳ್ಳಲಾಗದ ಕ್ಷೇತ್ರಗಳು ಯಾವುವು? ಸ್ಲೈಡಿನಲ್ಲಿ..

ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಜೆಡಿಎಸ್ ಇಲ್ಲಿಂದ ರೂತ್ ಮನೋರಮಾ ಕಣಕ್ಕಿಳಿಸಿತ್ತು. ಒಟ್ಟು ಚಲಾವಣೆಯಾದ 11,13,726 ಮತಗಳಲ್ಲಿ ಜೆಡಿಎಸ್ ಅಭ್ಯರ್ಥಿ 25,677 ಮತಗಳನ್ನು ಪಡೆದಿದ್ದರು. ವಿಜೇತ ಅಭ್ಯರ್ಥಿ - ಅನಂತ್ ಕುಮಾರ್ (ಬಿಜೆಪಿ)

ಬೆಂಗಳೂರು ಕೇಂದ್ರ

ಬೆಂಗಳೂರು ಕೇಂದ್ರ

ಜೆಡಿಎಸ್ ಅಭ್ಯರ್ಥಿಯಾಗಿ ನಂದಿನಿ ಆಳ್ವ ಕಣದಲ್ಲಿದ್ದರು. ಅಳಿಯ ಮತ್ತು ಬಾಲಿವುಡ್ ನಟ ವಿವೇಕ್ ಒಬೆರಾಯ್ ಪ್ರಚಾರ ನಡೆಸಿದ್ದರೂ ನಂದಿನಿ ಆಳ್ವ 20,387 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 10,74,589 ವಿಜೇತ ಅಭ್ಯರ್ಥಿ - ಪಿ ಸಿ ಮೋಹನ್ (ಬಿಜೆಪಿ)

ಬೆಂಗಳೂರು ಉತ್ತರ

ಬೆಂಗಳೂರು ಉತ್ತರ

ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ 13,56,718 ಮತಗಳಲ್ಲಿ ಅಜೀಂ 92,681 ಮತಗಳನ್ನು ಪಡೆದರು. ವಿಜೇತ ಅಭ್ಯರ್ಥಿ - ಡಿ ವಿ ಸದಾನಂದ ಗೌಡ (ಬಿಜೆಪಿ)

ಬಾಗಲಕೋಟೆ

ಬಾಗಲಕೋಟೆ

ಜೆಡಿಎಸ್ ಕ್ಷೇತ್ರದಿಂದ ಹುನಸ್ಯಾಲ್ ರವಿ ಅವರನ್ನು ಕಣಕ್ಕಿಳಿಸಿತ್ತು. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ 10,69,622 ಮತಗಳಲ್ಲಿ ಜೆಡಿಎಸ್ ಅಭ್ಯರ್ಥಿ 7,237 ಮತಗಳನ್ನಷ್ಟೇ ಪಡೆದಿದ್ದರು. ವಿಜೇತ ಅಭ್ಯರ್ಥಿ - ಪಿ ಸಿ ಗದ್ದಿಗೌಡರ್ (ಬಿಜೆಪಿ)

ಬಳ್ಳಾರಿ

ಬಳ್ಳಾರಿ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್ ರವಿನಾಯಕ ಪಡೆದ ಮತ 12,613. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 10,45, 772. ವಿಜೇತ ಅಭ್ಯರ್ಥಿ - ಬಿ ಶ್ರೀರಾಮುಲು (ಬಿಜೆಪಿ)

ಬೆಳಗಾವಿ

ಬೆಳಗಾವಿ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಭಗವಾನ್ ನಸೀರ್ ಪಾಪುಲ್ ಸಾಬ್ ಪಡೆದ ಮತ 5,477. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 10,78, 547. ವಿಜೇತ ಅಭ್ಯರ್ಥಿ - ಸುರೇಶ್ ಅಂಗಡಿ (ಬಿಜೆಪಿ)

ಬೀದರ್

ಬೀದರ್

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಕಾಶೆಂಪರ್ ಪಡೆದ ಮತ 58,728. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 9,62,201. ವಿಜೇತ ಅಭ್ಯರ್ಥಿ - ಭಗವಂತ ಖೂಬಾ (ಬಿಜೆಪಿ)

ಬಿಜಾಪುರ

ಬಿಜಾಪುರ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ ಶಿವರಾಂ ಪಡೆದ ಮತ 57,551. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 9,66,757. ವಿಜೇತ ಅಭ್ಯರ್ಥಿ - ರಮೇಶ್ ಜಿಗಜಿಣಗಿ (ಬಿಜೆಪಿ)

ಚಾಮರಾಜನಗರ

ಚಾಮರಾಜನಗರ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೋಟೆ ಎಂ ಶಿವಣ್ಣ ಪಡೆದ ಮತ 58,760. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 11,33,029. ವಿಜೇತ ಅಭ್ಯರ್ಥಿ - ಧೃವನಾರಾಯಣ (ಕಾಂಗ್ರೆಸ್)

ಉಡುಪಿ - ಚಿಕ್ಕಮಗಳೂರು

ಉಡುಪಿ - ಚಿಕ್ಕಮಗಳೂರು

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಧನಂಜಯ ಕುಮಾರ್ ಪಡೆದ ಮತ 14,895. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 10,34,108. ವಿಜೇತ ಅಭ್ಯರ್ಥಿ - ಶೋಭಾ ಕರಂದ್ಲಾಜೆ (ಬಿಜೆಪಿ)

ದಾವಣಗೆರೆ

ದಾವಣಗೆರೆ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಹಿಮಾ ಪಟೇಲ್ ಪಡೆದ ಮತ 46,911. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 11,14,868. ವಿಜೇತ ಅಭ್ಯರ್ಥಿ - ಜಿ ಎಂ ಸಿದ್ದೇಶ್ವರ್ (ಬಿಜೆಪಿ)

ಧಾರವಾಡ

ಧಾರವಾಡ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂಕಾಪುರ ಹನುಮಂತಪ್ಪ ಮಲ್ಲಪ್ಪ ಪಡೆದ ಮತ 8,836. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 10,41,226. ವಿಜೇತ ಅಭ್ಯರ್ಥಿ - ಪ್ರಹ್ಲಾದ್ ಜೋಶಿ (ಬಿಜೆಪಿ)

ಗುಲ್ಬರ್ಗ

ಗುಲ್ಬರ್ಗ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ ಜಿ ಸಾಗರ್ ಪಡೆದ ಮತ 15,690. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 9.97,638. ವಿಜೇತ ಅಭ್ಯರ್ಥಿ - ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)

ಹಾವೇರಿ

ಹಾವೇರಿ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಪಡೆದ ಮತ 9,814. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 11, 15,968. ವಿಜೇತ ಅಭ್ಯರ್ಥಿ - ಶಿವಕುಮಾರ್ ಉದಾಸಿ (ಬಿಜೆಪಿ)

ರಾಯಚೂರು

ರಾಯಚೂರು

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ ಬಿ ನಾಯಕ್ ಪಡೆದ ಮತ 21,706. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 9,68,889. ವಿಜೇತ ಅಭ್ಯರ್ಥಿ - ಬಿ ವಿ ನಾಯಕ (ಕಾಂಗ್ರೆಸ್)

ಚಿಕ್ಕೋಡಿ

ಚಿಕ್ಕೋಡಿ

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ ಪಡೆದ ಮತ 39,992. ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತ 10,71,103. ವಿಜೇತ ಅಭ್ಯರ್ಥಿ - ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್)

English summary
List of sixteen constituency in Karnakta where Janata Dal Secular lost deposit in 16th Lok Sabha Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X