ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಮುಖ ಕೆವಿ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆ

By Srinath
|
Google Oneindia Kannada News

Chikkamagaluru Kudremukh Kendriya Vidyalaya Shuts - Students fate hangs in air
ಚಿಕ್ಕಮಗಳೂರು, ಏಪ್ರಿಲ್ 25: ಕುದುರೆಮುಖದಲ್ಲಿರುವ ಕೇಂದ್ರೀಯ ವಿದ್ಯಾಲಯದ (ಕೆವಿ) ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಕುದುರೆಮುಖ ಕಬ್ಬಿಣ ಅದಿರು ಕಂಪನಿಯು (KIOCL) ಶಾಲೆಗೆ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿದ್ದರಿಂದ ಶಾಲೆ ಮುಚ್ಚಿದ್ದು, ನೂರಾರು ವಿದ್ಯಾರ್ಥಿಗಳು ಆತಂಕದ ಮಡುವಿನಲ್ಲಿದ್ದಾರೆ.

ಏಪ್ರಿಲ್ 1ರಿಂದ ಶಾಲೆ ಪುನರಾರಂಭವಾಗಬೇಕಿತ್ತು. 1ನೇ ತರಗತಿಯಿಂದ 10ನೆಯ ತರಗತಿವರೆಗೆ ಸುಮಾರು 200 ವಿದ್ಯಾರ್ಥಿಗಳು ಈ ವರ್ಷ ಶಿಕ್ಷಣ ಪಡೆಯುವುದು ದುಸ್ತರವಾಗಿದೆ. ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಈ ನಿರ್ಧಾರವನ್ನು ವಿರೋಧಿಸಿ ಪೋಷಕರ ಒಕ್ಕೂಟ ರಾಜ್ಯ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

ಏಪ್ರಿಲ್ 3ರಂದು ರಿಟ್ ಅರ್ಜಿಯನ್ನು ಆಲಿಸಿದ ಹೈಕೋರ್ಟ್, ಶಾಲೆಯನ್ನು ಜಿಲ್ಲಾಧಿಕಾರಿ ಸುಪರ್ದಿಗೆ ನೀಡುವಂತೆ KIOCLಗೆ ಸೂಚಿಸಿದೆ. ಜತೆಗೆ ಶಾಲೆಯನ್ನು ನಡೆಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಕುದುರೆಮುಖ ಅದಿರು ಕಂಪನಿಯು ಕೇಂದ್ರೀಯ ವಿದ್ಯಾಲಯ ಶಾಲೆಗೆ ಹಣಕಾಸು ನೆರವು ಮುಂದುವರಿಸುವುದಕ್ಕೆ ತನಗೆ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.

English summary
Chikkamagaluru Kudremukh Kendriya Vidyalaya Shuts - Students fate hangs in air. The future of 172 students (from class 1 to 10) is at stake following the HRD chairman’s decision to close the school on the ground of KIOCL stopping financing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X