ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ತಾಣಗಳಲ್ಲಿ ಕೆಎಸ್‌ಆರ್‌ಟಿಸಿ ಬುಕ್ಕಿಂಗ್‌ ಇಲ್ಲ

By Ashwath
|
Google Oneindia Kannada News

ಬೆಂಗಳೂರು. ಜೂ. 7: ಇನ್ನು ಮುಂದೆ ನೀವು ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟನ್ನು ಕೆಎಸ್‌ಆರ್‌‌ಟಿಸಿ ಅಧಿಕೃತ ವೆಬ್‌‌ಸೈಟ್‌ನಲ್ಲೇ ಬುಕ್‌ ಮಾಡಬೇಕು. ಖಾಸಗಿ ತಾಣಗಳಲ್ಲಿ ಟೆಕೆಟ್‌ ಬುಕ್ಕಿಂಗ್‌ ಸೇವೆ ಲಭ್ಯವಿದ್ದರೂ ಸದ್ಯದಲ್ಲೇ ಈ ಸೇವೆಯನ್ನು ಸ್ಥಗಿತಗೊಳಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಒಂದು ವರ್ಷದ ಹಿಂದೆ ರೆಡ್‌ಬಸ್‌ ಜೊತೆಗೂಡಿ ಕೆಎಸ್‌ಆರ್‌ಟಿಸಿ ಆನ್‌‌‌ಲೈನ್‌‌ ಟಿಕೆಟ್‌ ವಿತರಣಾ ಸೇವೆಯನ್ನು ಆರಂಭಿಸಿತ್ತು. ಕಳೆದ ತಿಂಗಳಿನಿಂದ ರೆಡ್‌ಬಸ್‌ ತಾಣದಲ್ಲಿ ಲಭ್ಯವಿದ್ದ ಈ ಸೇವೆಯನ್ನು ಕೆಎಸ್‌ಆರ್‌ಟಿಸಿ ಸ್ಥಗಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ಉಳಿದ ಖಾಸಗಿ ತಾಣಗಳಲ್ಲಿರುವ ಈ ಸೇವೆಯನ್ನು ಸ್ಥಗಿತಗೊಳಿಸಲು ಕೆಎಸ್‌ಆರ್‌ಟಿಸಿ ಚಿಂತನೆ ನಡೆಸಿದೆ.

ರೆಡ್‌ಬಸ್‌ ಸೇರಿದಂತೆ ಆನ್‌ಲೈನ್‌ ಟಿಕೆಟ್‌ ಸೇವೆ ನೀಡುವ ಕಂಪೆನಿಗಳು ಹೆಚ್ಚಾಗಿ ಖಾಸಗಿ ಕಂಪೆನಿಗಳಿಗೆ ಅನುಕೂಲ ಕಲ್ಪಿಸುತ್ತಿರುವ ಹಿನ್ನಲೆಯಲ್ಲಿ ಅವರೊಂದಿಗಿನ ಒಪ್ಪಂದ ರದ್ದುಮಾಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ ಎಂದು ನೆಕ್ಸ್ಟ್‌‌ಬಿಗ್‌‌ವಾಟ್‌‌‌ ತಾಣ ವರದಿ ಮಾಡಿದೆ.

ksrtc
ರೆಡ್‌ಬಸ್‌‌ನಲ್ಲಿ ಪ್ರತಿದಿನ 1,500- 2000 ಕೆಎಸ್‌‌ಆರ್‌‌‌ಟಿಸಿ ಟಿಕೆಟ್‌ಗಳು ಬುಕ್ಕಿಂಗ್‌ ಆಗುತ್ತಿದ್ದರೆ ಕೆಎಸ್‌ಆರ್‌ಟಿಸಿಯ ವೆಬ್‌ಸೈಟ್‌‌ನಲ್ಲಿ ಪ್ರತಿದಿನ 15 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಬುಕ್ಕಿಂಗ್‌‌‌ ಆಗುತ್ತಿದೆ. ಪ್ರಸ್ತುತ ಶೇ.50ರಷ್ಟು ಟೆಕೆಟ್‌ಗಳು ಆನ್‌‌ಲೈನ್‌ನಲ್ಲೇ ಬುಕ್‌‌‌ ಆಗುತ್ತಿರುವ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಟೆಕೆಟ್‌‌ ವಿಚಾರದಲ್ಲಿ ಖಾಸಗಿ ಕಂಪೆನಿಗಳ ಜೊತೆ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದ್ದು ಡಿಜಿಟಲ್‌ ಕ್ಷೇತ್ರದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಮುಂದಾಗುತ್ತಿದೆ. ಈಗಾಗಲೇ ಆಂಡ್ರಾಯ್ಡ್‌ ಮತ್ತು ವಿಂಡೋಸ್‌ ಓಎಸ್‌ನಲ್ಲಿ ಆಪ್‌‌ಗಳನ್ನು ಬಿಡುಗಡೆ ಮಾಡಿದೆ.

ನಷ್ಟದಲ್ಲಿ ಕೆಎಸ್‌ಆರ್‌ಟಿಸಿ:
ಕೆಎಸ್‌ಆರ್‌ಟಿಸಿ 2012-13ರಲ್ಲಿ 1.74 ಕೋಟಿ ಆದಾಯ ಗಳಿಸಿದ್ದ ಕೆಎಸ್‌‌ಆರ್‌ಟಿಸಿ 2013-14ರಲ್ಲಿ 86.33 ಕೋಟಿ ನಷ್ಟ ಅನುಭವಿಸಿದೆ.

ಸುದ್ದಿ ಕೃಪೆ:nextbigwhat.com

English summary
The stand off between online ticketing websites and state owned transport corporations have gotten a little messier. Online bus ticketing in Karnataka and possibly in other states are likely to go through a tough time in the coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X