ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿಯಿಂದ ಮೈಸೂರಿಗೆ 400 ವಿಶೇಷ ಬಸ್

|
Google Oneindia Kannada News

ಬೆಂಗಳೂರು, ಸೆ. 24 : ಮೈಸೂರು ದಸರಾಕ್ಕೆ ಆಗಮಿಸುವ ಪ್ರಯಾಣಿಕರಿಗಾಗಿ ಕೆಎಸ್ಆರ್‌ಟಿಸಿ 400 ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿದೆ. ಈಗಿರುವ ಬಸ್ಸುಗಳ ಜೊತೆಗೆ ವಿಶೇಷ ಬಸ್‌ಗಳು ಸೆ.25ರ ಗುರುವಾರದಿಂದ ಸಂಚಾರ ನಡೆಸಲಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರ ಪ್ರದೇಶಗಳಿಂದ ಮೈಸೂರಿಗೆ ವಿಶೇಷ ಬಸ್‌ಗಳು ಸಂಚಾರ ನಡೆಸಲಿವೆ.

ಸದ್ಯ, ಸಂಚರಿಸುತ್ತಿರುವ ವೇಗದೂತ, ವೈಭವ್, ರಾಜಹಂಸ, ವೋಲ್ವೊ ಹಾಗೂ ವೋಲ್ವೊ ಮಲ್ಟಿ ಆ್ಯಕ್ಸಲ್ ಬಸ್ಸುಗಳ ಜೊತೆಗೆ ಹೆಚ್ಚುವರಿ ಬಸ್‌ಗಳ ಸೇವೆಗಳನ್ನು ಒದಗಿಸಲಾಗುತ್ತಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಎಲ್ಲಾ ಬಸ್ಸುಗಳು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಡಲಿವೆ. [ಮೈಸೂರು ದಸರಾ ಚಿತ್ರಗಳು]

KSRTC

ಬೆಂಗಳೂರಿನಿಂದಿ ಮೈಸೂರಿಗೆ ಈಗಿರುವ ಬಸ್ಸುಗಳ ಜೊತೆಗೆ ಹೆಚ್ಚುವರಿಯಾಗಿ 170 ಬಸ್ಸುಗಳು ಸಂಚರಿಸಲಿದ್ದು, ಇವುಗಳು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸಂಚಾರ ನಡೆಸಲಿವೆ. ನಾಲ್ಕು ಅಥವ ಅದಕ್ಕಿಂತ ಹೆಚ್ಚಿನ ಜನರು ಒಂದೇ ಟಿಕೆಟ್ ಕಾಯ್ದಿರಿಸಿದರೆ ಶೇ 5ರಷ್ಟು, ಮೈಸೂರಿಗೆ ಹೋಗುವು ಮತ್ತು ಬರುವ ಟಿಕೆಟ್ ಒಟ್ಟಿಗೆ ಬುಕ್ ಮಾಡಿಸಿದರೆ, ಶೇ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. [ಬಸ್ ಬುಕ್ ಮಾಡಲು ವೆಬ್ ಸೈಟ್]

ವಿವಿಧ ಸ್ಥಳಗಳಿಂದ ಮೈಸೂರಿಗೆ ಬಸ್ : ಬೆಂಗಳೂರು ಹೊರತು ಪಡಿಸಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಗುಲ್ಬರ್ಗ, ರಾಯಚೂರು, ಹೈದ್ರಾಬಾದ್, ಚೆನ್ನೈ, ಊಟಿ, ಸೇಲಂ, ಮಧುರೈ, ತಿರುಚಿ, ಪಣಜಿ, ಶಿರಡಿ, ಮುಂಬೈಗಳಿಂದಲೂ ಮೈಸೂರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. [ಪೀಣ್ಯ ಬಸ್ ನಿಲ್ದಾಣ ಹೇಗಿದೆ ಗೊತ್ತಾ?]

ಪ್ರವಾಸಿಗರಿಗಾಗಿ ಮೂರು ದರ್ಶಿನಿಗಳು : ಮೈಸೂರು ನಗರದಿಂದ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 250 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಗಿರಿ ದರ್ಶಿನಿ, ಜಲ ದರ್ಶಿನಿ, ದೇವ ದರ್ಶಿನಿ ಎಂಬ ಪ್ಯಾಕೇಜ್ ಸಿದ್ಧಪಡಿಸಲಾಗಿದ್ದು, ಈ ಬಸ್ಸುಗಳ ಮಾಹಿತಿಯನ್ನು ಮೈಸೂರಿನಲ್ಲಿಯೇ ಪಡೆಯಬೇಕಾಗಿದೆ.

ಗಿರಿ ದರ್ಶಿನಿ ಪ್ಯಾಕೇಜ್‌ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟವನ್ನು ನೋಡಬಹುದಾಗಿದೆ. ಜಲ ದರ್ಶಿನಿಯಲ್ಲಿ ಬೈಲುಕುಪ್ಪೆ ಗೋಲ್ಡನ್‌ ಟೆಂಪಲ್, ದಬಾರೆ ಅರಣ್ಯ, ನಿಸರ್ಗಧಾಮ, ರಾಜಾ ಸೀಟ್, ಹಾರಂಗಿ ಜಲಾಶಯ, ಕೆಆರ್‌ಎಸ್ ನೋಡಬಹುದಾಗಿದೆ. ಉಳಿದಂತೆ ದೇವ ದರ್ಶಿನಿಯಲ್ಲಿ ನಂಜನಗೂಡು, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ ಮುಂತಾದ ದೇವಾಲಯಗಳ ದರ್ಶನ ಮಾಡಬಹುದಾಗಿದೆ.

English summary
Karnataka State Road Transport Corporation (KSRTC) has made arrangements for operating 400 special buses in addition to the existing buses to provide transport facilities to public for attend Mysore Dasara 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X