ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕ್ರಮದಲ್ಲಿ ಬದಲು

By Ashwath
|
Google Oneindia Kannada News

ಬೆಂಗಳೂರು, ಮೇ.13 : ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನಗಳಲ್ಲಿ ಬದಲಾವಣೆಯಾಗಲಿದೆ.

ಎಸ್‌ಎಸ್‌ಎಲ್‌ಸಿ ಈ ವರ್ಷದ ಪರೀಕ್ಷೆಯಲ್ಲಿ 20 ಅಂಕಗಳ ಪ್ರಾಯೋಗಿಕ ಪರೀಕ್ಷೆಯೂ ಇರಲಿದ್ದು, ಪರೀಕ್ಷಾ ವಿಧಾನ ಪರಿಷ್ಕರಣೆಗೆ ಎಂಇಎಸ್ ಶಿಕ್ಷಕರ ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ ಭಟ್ಟ ಅಧ್ಯಕ್ಷತೆಯಲ್ಲಿ 9 ಸದಸ್ಯರ ಉಪ ಸಮಿತಿಯನ್ನು ರಚಿಸಲಾಗಿದೆ.[ಎಸ್‌ಎಸ್‌ಎಲ್‌ಸಿ ಟಾಪರ್‌ ನಿತ್ಯಾ ಸುರಭಿ ಸಂದರ್ಶನ]

ಉಪ ಸಮಿತಿ ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿದ್ದು, ಅದರ ಆಧಾರದಲ್ಲಿ ಕೆಲವು ಶಿಫಾರಸುಗಳನ್ನು ಪರಿಗಣಿಸಲಾಗಿದೆ . ಅಂತಿಮ ವರದಿ ನೀಡಿದ ಬಳಿಕ ನೂತನ ಪರೀಕ್ಷಾ ವಿಧಾನಗಳನ್ನು ಅಂತಿಮಗೊಳಿಸಲಾವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.[ಮೈಸೂರಿನ ಹುಡುಗಿಗೆ ಆಪಲ್ ಕಂಪೆನಿ ಸೇರುವ ಆಸೆ!]

SSLC

ಹೊಸ ಪಠ್ಯ ಕ್ರಮದಲ್ಲಿ ಪರೀಕ್ಷೆ, ಅಂಕಗಳು ಹೇಗಿರುತ್ತದೆ?
ಹಾಲಿ ಇರುವಂತೆ 625 ಅಂಕಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವಿಷಯದ ಶೇ.80 ರಷ್ಟು ಅಂಕಗಳಿಗೆ ವಿದ್ಯಾರ್ಥಿ‌ಗಳು ಲಿಖಿತ ಪರೀಕ್ಷೆ ಇರಲಿದ್ದು ಉಳಿದ ಶೇ.20 ಅಂಕಗಳಿಗೆ ಶಾಲೆಯೇ ಪ್ರಾಯೋಗಿಕ ಪರೀಕ್ಷೆ ನಡೆಸುತ್ತದೆ . ಶಾಲೆ ನೀಡುವ ಬಾಹ್ಯ ಮೌಲ್ಯ ಮಾಪನವನ್ನು ಸಂಬಂಧಪಟ್ಟ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತದೆ.

ಹೊಸ ಮಾದರಿಯ ಪರೀಕ್ಷೆಯ ತಯಾರಿಗೆ ಗರಿಷ್ಠ 2 ಪೂರ್ವ ಸಿದ್ಧತಾ ಪರೀಕ್ಷೆ ಇರಲಿದ್ದು, ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಈ ಬಾರಿಯ ಪೂರಕ ಪರೀಕ್ಷೆ ಹೊರತು ಪಡಿಸಿ ಹಳೆಯ ವಿಧಾನದಂತೆ ಹೆಚ್ಚುವರಿಯಾಗಿ 4 ಪರೀಕ್ಷೆ ಬರೆಯಲು ಅವಕಾಶವಿದೆ.

ಹೊಸ ಪಠ್ಯಕ್ರಮದ ಬಗ್ಗೆ ವಿದ್ಯಾರ್ಥಿ‌ಗಳು, ಶಿಕ್ಷಕರು ಶಿಕ್ಷಣ ತಜ್ಷರು ಸಲಹೆ ಸೂಚನೆಯನ್ನು ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಕಾರ್ಯದರ್ಶಿ
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ,
6 ನೇ ಅಡ್ಡ ರಸ್ತೆ, ಮಲ್ಲೇಶ್ವರಂ,
ಬೆಂಗಳೂರು - 560003.
ಇ - ಮೇಲ್ : [email protected]

English summary
The Karnataka Secondary Education Examination Board (KSEEB) has started preparations to incorporate continuous and comprehensive evaluation (CCE) in Secondary School Leaving Certificate (SSLC) exam, which may become a grade-based one from 2014. For now, the KSEEB has decided to have a 80:20 ratio for the grade-based SSLC exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X