ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್‌ಸಿ ಹಗರಣ ಮಂಗಳಾ ಶ್ರೀಧರ್ ಪಾತ್ರವೇನು?

|
Google Oneindia Kannada News

ಬೆಂಗಳೂರು, ಆ.19 : 2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಕೆಪಿಎಸ್‌ಸಿ ಸದಸ್ಯೆ ಮಂಗಳಾ ಶ್ರೀಧರ್ 20 ಅಭ್ಯರ್ಥಿಗಳೊಂದಿಗೆ ನಿರಂತರವಾಗಿ ದೂರವಾಣಿ ಮಾತುಕತೆ ನಡೆಸಿದ್ದರು ಎಂಬ ಅಂಶ ಚಾರ್ಚ್‌ಶೀಟ್‌ ಮೂಲಕ ಬಯಲಾಗಿದೆ.

ಕೆಪಿಎಸ್‌ಸಿ ಪರೀಕ್ಷೆಗಳು ನಡೆದ ನಂತರ ನೇಮಕಾತಿವರೆಗೆ ಮಂಗಳಾ ಶ್ರೀಧರ್ ಅವರು, 20 ಅಭ್ಯರ್ಥಿಗಳಿಗೆ ಸುಮಾರು 450 ಕರೆ ಮಾಡಿದ್ದಾರೆ ಎಂದು ಸಿಐಡಿ ಪೊಲೀಸರು ದಾಖಲಿಸಿರುವ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಮಂಗಳಾ ಶ್ರೀಧರ್ ಅವರ ಮೂವರು ಸಹಾಯಕರು ಇದಕ್ಕೆ ಸಹಕಾರ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

KPSC

ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಗಳಾ ಶ್ರೀಧರ್ ಅವರು ಕೆಪಿಎಸ್‌ಸಿ ಸದಸ್ಯೆಯಾಗುವ ಮುನ್ನ ಬಿಬಿಎಂಪಿ ಚುನಾವಣೆಗೂ ಸ್ಪರ್ಧಿಸಿದ್ದರು. 2012 ಡಿಸೆಂಬರ್ 24ರಂದು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಂಗಳಾ ಶ್ರೀಧರ್ ಅವರನ್ನು ಕೆಪಿಎಸ್‌ಸಿ ಸದಸ್ಯೆಯಾಗಿ ನೇಮಕ ಮಾಡಿದ್ದರು. [ಕೆಪಿಎಸ್ಸಿ ಹಗರಣ ಎಚ್ಡಿಕೆ ನೀಡಿದ ದಾಖಲೆಗಳು]

ಅಭ್ಯರ್ಥಿಗಳು ಹೇಳುವುದೇನು? : ಮಂಗಳಾ ಶ್ರೀಧರ್ ತಮಗೆ ಕರೆ ಮಾಡಿದ್ದರು ಎಂದು ಹೆಸರು ಹೇಳಲು ಇಚ್ಛಿಸಿದ ಕೆಲವು ಅಭ್ಯರ್ಥಿಗಳು ಹೇಳಿದ್ದಾರೆ. ಮುಖ್ಯ ಪರೀಕ್ಷೆ ಮುಗಿದ ಬಳಿಕ ಸುಮಾರು ಹತ್ತು ಬಾರಿ ಕರೆ ಮಾಡಿದ್ದ ಅವರು ಅಸಿಸ್ಟೆಂಟ್ ಕಮೀಷನರ್ ಆಗಲು 75 ಲಕ್ಷ ಲಂಚ ನೀಡಬೇಕಾಗುತ್ತದೆ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ. [ನೇಮಕಾತಿ ರದ್ದು ಸಿಡಿದೆದ್ದ ವಿದ್ಯಾರ್ಥಿಗಳು]

ಕೆಪಿಎಸ್‌ಸಿ ನೇಮಕಾತಿ ರದ್ದುಗೊಳಿಸಿರುವ ಸರ್ಕಾರದ ಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಹಗರಣ ಬಯಲಿಗೆ ಎಳೆದಿರುವ ಡಾ.ಮೈತ್ರಿ ಅವರು ಮಂಗಳಾ ಶ್ರೀಧರ್‌ ಅವರ ಆಪ್ತ ಸಹಾಯಕ ಅಶೋಕ ಕುಮಾರ್‌ ಅವರಿಗೆ 17 ಬಾರಿ ದೂರವಾಣಿ ಕರೆ ಮಾಡಿ­ದ್ದಾರೆ ಎಂದು ಇತ್ತೀಚೆಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

English summary
Mangala Sridhar the suspended KPSC member charge-sheeted by the CID in the cash-for-jobs scam, was in telephonic contact with at least 20 candidates before and after the exams for the recruitment for 362 gazetted probationers Group A and B posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X