ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು

|
Google Oneindia Kannada News

ಬೆಂಗಳೂರು, ಸೆ. 20: ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮತ್ತು ಸದ್ಯದ ರಾಜಕೀಯ ಬೆಳವಣಿಗೆ ಕುರಿತು ಬೆಂಗಳೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ಅಂತ್ಯವಾಗಿದ್ದು ಹಲವು ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಚಿವರಿಗೆ ಮುಖ್ಯಮಂತ್ರಿ ಕ್ಲಾಸ್‌ ತೆಗೆದುಕೊಂಡಿದ್ದು ಹಲವಾರು ಸೂಚನೆಗಳನ್ನು ನೀಡಿದ್ದಾರೆ.(ಕೆಪಿಸಿಸಿ ಕಚೇರಿಯಲ್ಲಿ ಶಿಕ್ಷಕರಿಗೆ ಸಚಿವ ಕಿಮ್ಮನೆ ಪಾಠ)

ಕಪಚಚ

ಸಭೆಯ ನಂತರ ಅಕರ್ಕಾವತಿ ವಿವಾದ ಕುರಿತು ಮಾತನಾಡಿದ ಸಿದ್ದರಾಮಯ್ಯ, ನಾನು ಒಂದೇ ಒಂದು ಎಕರೆ ಡಿನೋಟಿಫೈ ಮಾಡಿಲ್ಲ. ಇದೆಲ್ಲ ಬಿಜೆಪಿಯವರ ಸುಳ್ಳು ಆರೋಪ ಎಂದು ಹೇಳಿದರು. ಈ ಮೂಲಕ ಪಕ್ಷದ ಕಾರ್ಯಕರ್ತರಿಗೆ ಘಟನಾವಳಿಗಳ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದ ಸಿಎಂ
ಪ್ರಧಾನಿ ನರೇಂದ್ರ ಮೋದಿ ಸೆ. 24ರಂದು ತುಮಕೂರಿಗೆ ಆಗಮಿಸಲಿದ್ದು ಪುಡ್‌ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ಈ ಮೊದಲು ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲ್ಲ ಎಂದು ಹೇಳಿದ್ದೆ. ಆದರೆ ಇದೊಂದು ಸರ್ಕಾರಿ ಕಾರ್ಯಕ್ರಮವಾದ್ದರಿಂದ ಭಾಗವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.(ಸಿದ್ದು ಸಹಚರರಿಗೆ ಪರಮೇಶ್ವರ್ ಲವ್ ಲೆಟರ್! )

ಕೆಪಿಸಿಸಿ ಸಭೆಯ ಪ್ರಮುಖ ನಿರ್ಣಯಗಳು
* ಜಿಲ್ಲಾ ಮಟ್ಟದಲ್ಲಿ ವಾಸ್ತವ್ಯ ಹೂಡುವಂತೆ ಉಸ್ತುವಾರಿ ಸಚಿವರಿಗೆ ಖಡಕ್‌ ಸೂಚನೆ
* ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲು ನಾಯಕರ ತಾಕೀತು
* ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ತಮ್ಮೊಂದಿಗೆ ಕಾರಿನಲ್ಲಿ ಕರೆದೊಯ್ದು ಪ್ರವಾಸ ಮಾಡಲು ಆದೇಶ
* ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡದಿರಲು ಸಚಿವರಿಗೆ ಸಲಹೆ
* ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಈಗಿನಿಂದಲೇ ಪಕ್ಷ ಬಲಪಡಿಸಲು ಕ್ರಮ ತೆಗೆದುಕೊಳ್ಳಬೇಕು
* ಜನರ ಸಮಸ್ಯೆ ಸ್ಪಂದಿಸಿ, ಕ್ವೇತ್ರದಲ್ಲೇ ಹೆಚ್ಚು ಕಾಲ ಕಳೆಯಲು ತಿಳಿವಳಿಕೆ

English summary
Bangalore: KPCC meet ends with a bundle of decisions which are related to ministers and particularly district in charge ministers. To giving more time to constituency, friendly with people, to spend time with district presidents of party and to rebuild party in booth level, these are all decisions taken by KPCC meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X