ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ : ಸುಟ್ಟ ಗಾಯವಾಗಿದ್ದ ಶಿವಾನಂದ ಶ್ರೀ ಇನ್ನಿಲ್ಲ

|
Google Oneindia Kannada News

ಕೊಪ್ಪಳ, ಜ. 20 : ಶರಣೆಯೊಬ್ಬರು ಮೈಮೇಲೆ ಸೀಮೆ­ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ ಶಿವಾನಂದ ಸ್ವಾಮೀಜಿ ಅವರು ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೋಮವಾರ ಸ್ವಾಮೀಜಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಯಲಬುರ್ಗಾ ತಾಲ್ಲೂಕಿನ ಮರಕಟ್ಟೆ ಗ್ರಾಮದಲ್ಲಿರುವ ಗದಗದ ಶಿವಾನಂದ ಸ್ವಾಮಿ ಶಾಖಾ ಮಠದ ಶಿವಾನಂದ ಸ್ವಾಮೀಜಿ (80) ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಬಾಗಲ­ಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮಠಕ್ಕೆ ತರಲಾಗುತ್ತದೆ ಎಂದು ತಿಳಿದುಬಂದಿದೆ.

Shivananda Swamiji

ಮಠದಲ್ಲಿ ಕೆಲಸ ಮಾಡುತ್ತಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಂಚಲಿ ಗ್ರಾಮದ ಪ್ರಭಾವತಿ ದೇವಿ ಅವರು ಸೋಮವಾರ ಬೆಳಗ್ಗೆ ಬೆಂಕಿ ಹಚ್ಚಿಕೊಂಡು ಸ್ವಾಮೀಜಿಗಳ ಮೇಲೆ ಬಿದ್ದಿದ್ದರು. ಪ್ರಭಾವತಿ ಮಠದಲ್ಲಿಯೇ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡ ಸ್ವಾಮೀಜಿಯನ್ನು ಕುಮಾರೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. [ಸ್ವಾಮೀಜಿ ಜೊತೆ ಬೆಂಕಿ ಹಚ್ಚಿಕೊಂಡ ಮಹಿಳೆ]

ಶಿವಯ್ಯ ತಾತ ಎಂದು ಕರೆಲಾಗುತ್ತಿದ್ದ ಶಿವಾನಂದ ಸ್ವಾಮೀಜಿ ಅವರು ಸುಮಾರು 40 ವರ್ಷಗಳ ಹಿಂದೆ ಗದಗದ ಶಿವಾನಂದ ಸ್ವಾಮಿ ಮಠದ ಶಾಖಾ ಮಠವನ್ನು ಮರಕಟ್ಟೆ ಗ್ರಾಮದಲ್ಲಿ ಸ್ಥಾಪಿಸಿ ವಾಸವಾಗಿದ್ದರು. ಸ್ವಾಮೀಜಿ ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕೆಂಚನಹಳ್ಳಿ ಗ್ರಾಮದವರು. ಪ್ರಭಾವತಿ ದೇವಿ ಸುಮಾರು 10 ವರ್ಷಗಳಿಂದ ಮಠದಲ್ಲಿ ಕೆಲಸ ಮಾಡುತ್ತಿದ್ದರು. [ಬೀದರ್ ಚೌಳಿ ಮಠದ ಮತ್ತೊಬ್ಬ ಸ್ವಾಮೀಜಿ ಸಾವು]

ಉತ್ತರಾಧಿಕಾರಿ ವಿವಾದ : ಶಿವಾನಂದ ಸ್ವಾಮೀಜಿ ಅವರ ಕಾಲುಗಳು ಊನ ಗೊಂಡಿದ್ದವು. ಅವರ ಓಡಾಟಕ್ಕೂ ಬೇರೆಯವರ ಸಹಾಯಬೇಕಿತ್ತು. ತಮ್ಮ ಉತ್ತರಾ­ಧಿಕಾರಿಯನ್ನಾಗಿ ಗದಗದ ಶಿವಾನಂದ ಸ್ವಾಮಿ ಮಠದ ಬಸವರಾಜ ಸ್ವಾಮಿ ಅವರನ್ನು ನೇಮಿಸುವಂತೆ ಶ್ರೀಗಳು ಐದು ವರ್ಷಗಳ ಹಿಂದೆ ಉಯಿಲು ಬರೆಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಭಾವತಿ ಅವರು 10 ವರ್ಷಗಳಿಂದ ಮಠದ ಸೇವೆ ಮಾಡಿಕೊಂಡಿದ್ದೇನೆ. ಮಠದ ಹಕ್ಕು ತಮಗೆ ಸಿಗಬೇಕು ಎಂದು ಸ್ವಾಮೀಜಿಗಳ ಮೇಲೆ ಒತ್ತಡ ಹೇರಿದ್ದರು. ಈ ಘಟನೆ ಬಳಿಕ ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. ಇದೇ ಪ್ರಭಾವತಿ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

English summary
Koppal district Shivanand Mutt Shivananda Swamiji (80) no more. Swamiji injured in fire accident on Monday and admitted to Kumareshwara hospital Balgalkot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X