{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/agriculture/kodagu-climate-more-suitable-for-apple-cultivation-than-hp-083478.html" }, "headline": "ಕೊಡಗಿನ ಕಿತ್ತಳೆ ಗೊತ್ತು! ಕೊಡಗಿನ ಆ್ಯಪಲ್ ಹೇಗೆ? ", "url":"https://kannada.oneindia.com/agriculture/kodagu-climate-more-suitable-for-apple-cultivation-than-hp-083478.html", "image": { "@type": "ImageObject", "url": "http://kannada.oneindia.com/img/1200x60x675/2014/04/22-apple3.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/04/22-apple3.jpg", "datePublished": "2014-04-22 13:11:41", "dateModified": "2014-04-22T13:11:41+05:30", "author": { "@type": "Person", "name": "Srinath" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Districts", "description": "Kodagu Climate more Suitable for Apple Cultivation than Himachal Pradesh, ಕೊಡಗಿನ ಕಿತ್ತಳೆ ಗೊತ್ತು! ಕೊಡಗಿನ ಆ್ಯಪಲ್ ಹೇಗೆ? ", "keywords": "Kodagu Climate more Suitable for Apple Cultivation than Himachal Pradesh, ಕೊಡಗಿನ ಕಿತ್ತಳೆ ಗೊತ್ತು! ಕೊಡಗಿನ ಆ್ಯಪಲ್ ಹೇಗೆ? ", "articleBody":"ಮಡಿಕೇರಿ, ಏಪ್ರಿಲ್ 22: ಕೊಡಗು - ಹೌದು ಈ ಮಂಜಿನ ಊರು ಬೇಸಿಗೆಯಲ್ಲಿ ತುಸು ಹೆಚ್ಚೇ ಜನರಿಗೆ ಆಪ್ಯಾಯಮಾನವಾಗಿರುತ್ತದೆ. ಬೇಸಿಗೆಯ ಬಿಸಿ ತಾಳಲಾರದೆ ದೂರದೂರುಗಳಿಗೆ ಹೋಗಲು ಸಾಧ್ಯವಾಗದಿದ್ದರೆ ಕೊಡಗು ಕಡೆ ಮುಖ ಮಾಡಿದರೆ ಸಾಕು. ಅಲ್ಲಿನ ತಂಪಾದ ವಾತಾವರಣ ಅಷ್ಟು ಮಸ್ತ್ ಆಗಿರುತ್ತದೆ.ಇಂತಹ ವಾತಾವರಣವೇ ಇದೀಗ ಆ್ಯಪಲ್ ಬೆಳೆಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳಲು ಮುಂದಾಗಿದೆ. ಹೌದು ಕೊಡಗಿನ ಕಿತ್ತಳೆಯ ಹಾಗೆ ಮುಂದಿನ ದಿನಗಳಲ್ಲಿ ಕೊಡಗಿನ ಆ್ಯಪಲ್ ಸಹ ಜಗತ್ಪ್ರಸಿದ್ಧವಾದರೆ ಅಚ್ಚರಿಯಿಲ್ಲ.ಸೇಬು ಕೃಷಿ: ಹಿಮಾಚಲಕ್ಕಿಂತ ಕರ್ನಾಟಕ ಹೆಚ್ಚು ಪ್ರಶಸ್ತ!:ಆ್ಯಪಲ್ ತವರೂರಾದ ಹಿಮಾಚಲ ಪ್ರದೇಶದ ಹಿರಿಯ ವಿಜ್ಞಾನಿ ಡಾ. ಚಿರಂಜಿತ್ ಪರಮಾರ್ ಅವರೇ ಹೇಳಿರುವಂತೆ ಕರ್ನಾಟಕ ಅದರಲ್ಲೂ ಕೊಡಗಿನ ಹಿತಕರ ವಾತಾವರಣವು ಆ್ಯಪಲ್ ಕೃಷಿಗೆ ಹೇಳಿಮಾಡಿಸಿದಂತಿದೆ.ರಾಜ್ಯದಲ್ಲಿ ಕೃಷಿ ಅಧ್ಯಯನ ಪ್ರವಾಸಕ್ಕೆಂದು ಬಂದಿರುವ ಡಾ. ಪರಮಾರ್ ಅವರು ತುಮಕೂರು, ಬೆಂಗಳೂರು, ಉಪ್ಪಿನಂಗಡಿ ಮತ್ತು ಸೋಮವಾರ ಪೇಟೆಯಲ್ಲಿ ಸೇಬು ಕೃಷಿ ಕೈಗೊಳ್ಳಲು ಪ್ರಯತ್ನಗಳು ನಡೆಸಿವೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಸೇಬು ಕೃಷಿ ನಡೆದಿದೆ ಎಂದು ಹೇಳಿದ್ದಾರೆ.ಅಂದಹಾಗೆ ಸೋಮವಾರಪೇಟೆಯ ಅಬ್ಬುಕಟ್ಟೆ ಸಮೀಪ ಈಗಾಗಲೇ ಸೇಬು ಕೃಷಿ ನಡೆಯುತ್ತಿದೆ. ಇಲ್ಲಿನ ಸೇಬು ಹೆಚ್ಚು ರುಚಿಕರವಾಗಿದೆ. ಕೊಡಗಿನ ಸಿಆರ್ ಶಿವಕುಮಾರ್ ಮತ್ತು ಉಪ್ಪಿನಂಗಡಿಯ ಕೃಷ್ಣ ಶೆಟ್ಟಿ ಸೇಬು ಕೃಷಿಯಲ್ಲಿ ತೊಡಗಿತುವುದು ಸ್ವಾಗತಾರ್ಹ ಎಂದು ಡಾ. ಪರಮಾರ್ ಮೆಚ್ಚುಗೆ ಸೂಚಿಸಿದ್ದಾರೆ.ಹಾಗೆ ನೋಡಿದರೆ ಕರ್ನಾಟಕದ ಕೆಲ ಪ್ರದೇಶಗಳು ಹಿಮಾಚಲ ಪ್ರದೇಶಕ್ಕಿಂತ ಹೆಚ್ಚು ಪ್ರಶಸ್ತ ಸ್ಥಳಗಳಾಗಿವೆ. ಇಲ್ಲಿನ ವಾತಾವರಣ ಸೇಬು ಕೃಷಿಗೆ ಹಿತಕರವಾಗಿದೆ. ಹಿಮಾಚಲದಲ್ಲಿ ವರ್ಷಕ್ಕೆ ಒಂದು ಬೆಳೆಯಿದ್ದರೆ ಕರ್ನಾಟಕದ ರೈತರು ವರ್ಷಕ್ಕೆ 2 ಬಾರಿ ಸೇಬು ಬೆಳೆ ಬೆಳೆಯಬಹುದು ಎಂದು ಡಾ. ಪರಮಾರ್ ವಿಶ್ಲೇಷಿಸಿದ್ದಾರೆ." }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಕಿತ್ತಳೆ ಗೊತ್ತು! ಕೊಡಗಿನ ಆ್ಯಪಲ್ ಹೇಗೆ?

By Srinath
|
Google Oneindia Kannada News

ಮಡಿಕೇರಿ, ಏಪ್ರಿಲ್ 22: ಕೊಡಗು - ಹೌದು ಈ ಮಂಜಿನ ಊರು ಬೇಸಿಗೆಯಲ್ಲಿ ತುಸು ಹೆಚ್ಚೇ ಜನರಿಗೆ ಆಪ್ಯಾಯಮಾನವಾಗಿರುತ್ತದೆ. ಬೇಸಿಗೆಯ ಬಿಸಿ ತಾಳಲಾರದೆ ದೂರದೂರುಗಳಿಗೆ ಹೋಗಲು ಸಾಧ್ಯವಾಗದಿದ್ದರೆ ಕೊಡಗು ಕಡೆ ಮುಖ ಮಾಡಿದರೆ ಸಾಕು. ಅಲ್ಲಿನ ತಂಪಾದ ವಾತಾವರಣ ಅಷ್ಟು ಮಸ್ತ್ ಆಗಿರುತ್ತದೆ.

ಇಂತಹ ವಾತಾವರಣವೇ ಇದೀಗ ಆ್ಯಪಲ್ ಬೆಳೆಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳಲು ಮುಂದಾಗಿದೆ. ಹೌದು ಕೊಡಗಿನ ಕಿತ್ತಳೆಯ ಹಾಗೆ ಮುಂದಿನ ದಿನಗಳಲ್ಲಿ ಕೊಡಗಿನ ಆ್ಯಪಲ್ ಸಹ ಜಗತ್ಪ್ರಸಿದ್ಧವಾದರೆ ಅಚ್ಚರಿಯಿಲ್ಲ.

ಸೇಬು ಕೃಷಿ: ಹಿಮಾಚಲಕ್ಕಿಂತ ಕರ್ನಾಟಕ ಹೆಚ್ಚು ಪ್ರಶಸ್ತ!:

kodagu-climate-more-suitable-for-apple-cultivation-than-hp
ಆ್ಯಪಲ್ ತವರೂರಾದ ಹಿಮಾಚಲ ಪ್ರದೇಶದ ಹಿರಿಯ ವಿಜ್ಞಾನಿ ಡಾ. ಚಿರಂಜಿತ್ ಪರಮಾರ್ ಅವರೇ ಹೇಳಿರುವಂತೆ ಕರ್ನಾಟಕ ಅದರಲ್ಲೂ ಕೊಡಗಿನ ಹಿತಕರ ವಾತಾವರಣವು ಆ್ಯಪಲ್ ಕೃಷಿಗೆ ಹೇಳಿಮಾಡಿಸಿದಂತಿದೆ.

ರಾಜ್ಯದಲ್ಲಿ ಕೃಷಿ ಅಧ್ಯಯನ ಪ್ರವಾಸಕ್ಕೆಂದು ಬಂದಿರುವ ಡಾ. ಪರಮಾರ್ ಅವರು ತುಮಕೂರು, ಬೆಂಗಳೂರು, ಉಪ್ಪಿನಂಗಡಿ ಮತ್ತು ಸೋಮವಾರ ಪೇಟೆಯಲ್ಲಿ ಸೇಬು ಕೃಷಿ ಕೈಗೊಳ್ಳಲು ಪ್ರಯತ್ನಗಳು ನಡೆಸಿವೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಸೇಬು ಕೃಷಿ ನಡೆದಿದೆ ಎಂದು ಹೇಳಿದ್ದಾರೆ.

ಅಂದಹಾಗೆ ಸೋಮವಾರಪೇಟೆಯ ಅಬ್ಬುಕಟ್ಟೆ ಸಮೀಪ ಈಗಾಗಲೇ ಸೇಬು ಕೃಷಿ ನಡೆಯುತ್ತಿದೆ. ಇಲ್ಲಿನ ಸೇಬು ಹೆಚ್ಚು ರುಚಿಕರವಾಗಿದೆ. ಕೊಡಗಿನ ಸಿಆರ್ ಶಿವಕುಮಾರ್ ಮತ್ತು ಉಪ್ಪಿನಂಗಡಿಯ ಕೃಷ್ಣ ಶೆಟ್ಟಿ ಸೇಬು ಕೃಷಿಯಲ್ಲಿ ತೊಡಗಿತುವುದು ಸ್ವಾಗತಾರ್ಹ ಎಂದು ಡಾ. ಪರಮಾರ್ ಮೆಚ್ಚುಗೆ ಸೂಚಿಸಿದ್ದಾರೆ.

ಹಾಗೆ ನೋಡಿದರೆ ಕರ್ನಾಟಕದ ಕೆಲ ಪ್ರದೇಶಗಳು ಹಿಮಾಚಲ ಪ್ರದೇಶಕ್ಕಿಂತ ಹೆಚ್ಚು ಪ್ರಶಸ್ತ ಸ್ಥಳಗಳಾಗಿವೆ. ಇಲ್ಲಿನ ವಾತಾವರಣ ಸೇಬು ಕೃಷಿಗೆ ಹಿತಕರವಾಗಿದೆ. ಹಿಮಾಚಲದಲ್ಲಿ ವರ್ಷಕ್ಕೆ ಒಂದು ಬೆಳೆಯಿದ್ದರೆ ಕರ್ನಾಟಕದ ರೈತರು ವರ್ಷಕ್ಕೆ 2 ಬಾರಿ ಸೇಬು ಬೆಳೆ ಬೆಳೆಯಬಹುದು ಎಂದು ಡಾ. ಪರಮಾರ್ ವಿಶ್ಲೇಷಿಸಿದ್ದಾರೆ.

English summary
Kodagu Climate more Suitable for Apple Cultivation than Himachal Pradesh. Senior scientist and expert on apple cultivation from Himachal Pradesh Dr Chiranjit Parmar expressed confidence that in Karnataka, especially Kodagu, apple cultivation will be successful as the weather here is suitable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X