ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪೂರ್ಣ ಸ್ವಚ್ಛತೆಗಾಗಿ ನಿರ್ಮಲ ಭಾರತ್ ಅಭಿಯಾನ

|
Google Oneindia Kannada News

ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಲ ಭಾರತ್ ಅಭಿಯಾನವನ್ನು ಆರಂಭಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಯೋಗದಲ್ಲಿ ಈ ಯೋಜನೆ ಅನ್ವಯ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಲು ಸಹಾಯ ನೀಡಲಾಗುತ್ತದೆ.

ಅಭಿಯಾನದ ಅಡಿಯಲ್ಲಿ ಗ್ರಾಮೀಣ ಸ್ವಚ್ಛತೆಯನ್ನು ಸಾಧಿಸಲು ಪಂಚಾಯತ್ ರಾಜ್ ಸಂಸ್ಥೆಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಿದ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ನಿರ್ಮಲ ಗ್ರಾಮ ಪುರಸ್ಕಾರವನ್ನು ನೀಡುತ್ತದೆ.

2005ರ ಅಕ್ಟೋಬರ್‌ 2ರಿಂದ ಕರ್ನಾಟಕದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಸಂಪೂರ್ಣ ಸ್ವಚ್ಛತಾ ಆಂದೋಲನಾವಾಗಿದ್ದ ಇದು 2012ರ ಏಪ್ರಿಲ್‌ನಿಂದ ನಿರ್ಮಲ ಭಾರತ್ ಅಭಿಯಾನವಾಗಿ ಬದಲಾವಣೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಕೊಳಕು, ಗಲೀಜು, ವಾಸನೆ ಮುಂತಾದವುಗಳನ್ನು ತೊಡೆದು ಹಾಕಿ, ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಲು ಈ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. [ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ನೋಡಿ]

Nirmal Bharat Abiyan

ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸುವ ಉದ್ದೇಶದೊಂದಿಗೆ ಫನ ಹಾಗೂ ದ್ರವ ತ್ಯಜ್ಯಗಳ ನಿರ್ವಹಣೆಗೆ ಅಭಿಯಾನದಡಿ ಹೆಚ್ಚಿನ ಮಹತ್ವ ನೀಡಲಾಗಿದೆ. ಗ್ರಾಮಗಳನ್ನು ಕಸ ಹಾಗೂ ಕೊಳಚೆಗಳಿಂದ ಮುಕ್ತವಾಗಿಸಲು ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಅನುದಾನವನ್ನು ಯೋಜನೆಯಡಿ ಒದಗಿಸಲಾಗುತ್ತದೆ.

ನಿರ್ಮಲ ಭಾರತ್ ಅಭಿಯಾನದ ಉದ್ದೇಶಗಳು

* ಗ್ರಾಮೀಣ ಪ್ರದೇಶದ ಜನರಿಗೆ ಶುಚಿತ್ವದ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು
* ಸ್ವಚ್ಛ ಪರಿಸರಕ್ಕಾಗಿ ಜನರಿಂದಲೇ ಬೇಡಿಕೆ ಸೃಷ್ಟಿಸುವುದು
* ಎಲ್ಲಾ ಕುಟುಂಬಗಳು ಶೌಚಾಲಯಗಳನ್ನು ಹೊಂದುವಂತೆ, ಬಳಸುವಂತೆ ಉತ್ತೇಜಿಸುವುದು
* ವೈಯಕ್ತಿಕ, ಕುಟುಂಬ ಹಾಗೂ ಸಮುದಾಯ ಸ್ವಚ್ಛತೆಯನ್ನು ಪ್ರೋತ್ಸಾಹಿಸುವುದು
* ಎಲ್ಲಾ ಶಾಲೆ ಮತ್ತು ಅಂಗನವಾಡಿಗಳಲ್ಲಿ ನೈರ್ಮಲದ ಸೌಲಭ್ಯಗಳನ್ನು ನಿರ್ಮಿಸುವುದು, ಮಕ್ಕಳಲ್ಲಿ ನೈರ್ಮಲ್ಯದ ಅಭ್ಯಾಸಗಳನ್ನು ರೂಢಿಸುವುದು
* ಗ್ರಾಮ ಹಾಗೂ ಸಮುದಾಯ ಮಟ್ಟದಲ್ಲಿಯೇ ತ್ಯಾಜ್ಯಗಳ ಸೂಕ್ತ ವಿಲೇವಾರಿ ಹಾಗೂ ಸಮರ್ಪಕ ನಿರ್ವಹಣೆಯನ್ನು ಅಭಿವೃದ್ಧಿಪಡಿಸುವುದು

ನಿರ್ಮಲ ಭಾರತ್ ಅಭಿಯಾನದಡಿ ಸರ್ಕಾರ ಮನೆ, ಶಾಲೆ ಮತ್ತು ಸಮುದಾಯದ ಮಟ್ಟದಲ್ಲಿ ಶೌಚಾಲಯವನ್ನು ನಿರ್ಮಿಸಲು ಪ್ರೋತ್ಸಾಹಧನವನ್ನು ನೀಡುತ್ತದೆ. 4,700 ರಿಂದ 3.50 ಲಕ್ಷದವರೆಗೆ ಶೌಚಾಲಯ ನಿರ್ಮಾಣ ಮಾಡಲು ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಗೃಹ ಶೌಚಾಲಯಗಳು : ಸಣ್ಣ ರೈತರು, ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳು, ಅಂಗವಿಕಲರು, ಭೂ ರಹಿತ ಕಾರ್ಮಿಕರು, ಮಹಿಳಾ ಮುಖ್ಯಸ್ಥ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನ ಎಲ್ಲಾ ಗ್ರಾಮೀಣ ಕುಟುಂಬಗಳೂ ಸೇರಿದಂತೆ ಗ್ರಾಮೀಣ ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಿಕೊಂಡು ಬಳಕೆ ಮಾಡಿದರೆ ಅಂತಹ ಕುಟುಂಬಗಳಿಗೆ ನಿರ್ಮಲ ಭಾರತ್ ಅಭಿಯಾನದ ಅಡಿಯಲ್ಲಿ ರೂ. 4700/- ಗಳ ನಗದು ಪ್ರೋತ್ಸಾಹಧನ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸಹಭಾಗಿತ್ವದ ಅಡಿಯಲ್ಲಿ 26 ಮಾನವ ದಿನಗಳ ಕೂಲಿ ಗರಿ‍ಷ್ಠ ರೂ.5,400ನ್ನು ಒದಗಿಸುತ್ತದೆ. ಇದರಿಂದ ಗ್ರಾಮೀಣ ಕುಟುಂಬಗಳ ಶೌಚಾಲಯ ನಿರ್ಮಾಣಕ್ಕೆ ಒಟ್ಟು ರೂ.10,100 ಗಳ ಪ್ರೋತ್ಸಾಹಧನದ ಸೌಲಭ್ಯ ಲಭ್ಯವಾಗಲಿದೆ.

ಶಾಲಾ ಮತ್ತು ಅಂಗನವಾಡಿ : ಶಾಲೆ ಮತ್ತು ಅಂಗನವಾಡಿಗಳಲ್ಲಿ ಸ್ವಚ್ಛತೆಯ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 70:30 ಅನುಪಾತದಲ್ಲಿ ಅನುದಾನವನ್ನು ಒದಗಿಸುತ್ತದೆ. ಶಾಲಾ ಶೌಚಾಲಯದ ಫಟಕ ವೆಚ್ಚ ರೂ.35,000 ಗಳಾಗಿದ್ದು, ಅಂಗನವಾಡಿ ಶೌಚಾಲಯದ ಫಟಕ ವೆಚ್ಚ ರೂ. 8,000ವಾಗಿದೆ.

ಸಮುದಾಯ ಶೌಚಾಲಯ : ಹೆಚ್ಚಿನ ಜನಸಂದಣಿ ಸೇರುವ ಸ್ಥಳಗಳಲ್ಲಿ ಹಾಗೂ ಗ್ರಾಮದ ಕುಟುಂಬಗಳಿಗೆ ನಿರ್ಮಿಸಿಕೊಳ್ಳಲು ಸ್ಥಳವಿಲ್ಲದೆ ಕಡೆಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿಕೊಡಲು ನಿರ್ಮಲ ಭಾರತ್ ಅಭಿಯಾನದ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ರೂ.1.80 ಲಕ್ಷ ಗಳನ್ನು ನೀಡಲಾಗುತ್ತಿದೆ.

ನಿರ್ಮಲ ಗ್ರಾಮ ಪುರಸ್ಕಾರ : ನಿರ್ಮಲ ಭಾರತ್ ಅಭಿಯಾನದ ಅಡಿಯಲ್ಲಿ ಗ್ರಾಮೀಣ ಸ್ವಚ್ಛತೆಯನ್ನು ಸಾಧಿಸಲು ಪಂಚಾಯತ್ ರಾಜ್ ಸಂಸ್ದೆಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಿದ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ನೀಡುತ್ತದೆ.

English summary
Nirmal Bharat Abhiyan (NBA) previously called Total Sanitation Campaign (TSC) is a Community-led total sanitation program initiated by Government of India in 1999. It is a demand-driven and people-centered sanitation program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X