ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಲಕ್ಷಕ್ಕೆ ಇಬ್ಬರು ಮಕ್ಕಳನ್ನು ಮಾರಿದ ತಂದೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಕಾಸರಗೋಡು, ಮೇ 26 : ತಂದೆಯೇ ಮಕ್ಕಳನ್ನು ಹಣಕ್ಕಾಗಿ ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. 3.25 ಲಕ್ಷ ರೂಗಳಿಗೆ ಒಂದೂವರೆ ವರ್ಷದ ಹಾಗೂ ಆರು ತಿಂಗಳ ಪ್ರಾಯದ ಮಕ್ಕಳನ್ನು ತಂದೆ ಮಾರಾಟ ಮಾಡಿದ್ದರು.

ಮಕ್ಕಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ತಂದೆ ಹೊಸದುರ್ಗ ನಿವಾಸಿ ಸುಲೈಮಾನ್ (48), ಮೂವರು ಮಧ್ಯವರ್ತಿಗಳಾದ ಹೊಸದುರ್ಗ ನಿವಾಸಿಗಳಾದ ರಶೀದ್ (32), ಇರಿಯಾ ನಿವಾಸಿ ಬಶೀರ್(43) ಹಾಗೂ ಅಜನೂರು ನಿವಾಸಿ ಮೊದು (55) ಎಂಬವವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

Kasaragod police

ಒಂದು ವರ್ಷದ ಹಿಂದೆ ಈ ಮಕ್ಕಳ ಮಾರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಸುಲೈಮಾನ್ ಅವರನ್ನು ಬಂಧಿಸಿದ ಪೊಲೀಸರು ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಮಂಗಳೂರಿನ ನ್ಯಾಯವಾದಿಯೊಬ್ಬರ ಮುಖಾಂತರ ಮಕ್ಕಳನ್ನು ಮಾರಾಟ ಮಾಡಲಾಗಿದೆ ಎಂದು ತಂದೆ ವಿಚಾರಣೆ ವೇಳೆ ಹೇಳಿದ್ದು, ಪೊಲೀಸರು ಮಂಗಳೂರಿಗೆ ತೆರಳಿ ಹುಡುಕಾಟ ನಡೆಸಿದರೂ, ನ್ಯಾಯವಾದಿ ಮತ್ತು ಮಕ್ಕಳು ದೊರಕಿಲ್ಲ.

12 ಮಕ್ಕಳ ತಂದೆ : ಮಕ್ಕಳನ್ನು ಮಾರಾಟ ಮಾಡಿದ ಸುಲೈಮಾನ್ ಎರಡು ವಿವಾಹವಾಗಿದ್ದು, ಒಟ್ಟು 12 ಮಕ್ಕಳನ್ನು ಹೊಂದಿದ್ದಾರೆ. ಮೊದಲ ಪತ್ನಿಯಿಂದ 8, ಎರಡನೇ ಪತ್ನಿಯಿಂದ ನಾಲ್ಕು ಮಕ್ಕಳನ್ನು ಪಡೆದಿದ್ದ ಈತ, ಎರಡನೇ ಪತ್ನಿಯ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು 3.25 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದಾರೆ.

ಮಕ್ಕಳನ್ನು ಮಾರಾಟ ಮಾಡಿಸಿದ ನ್ಯಾಯವಾದಿ 25 ಸಾವಿರ ರೂ. ಹಣವನ್ನು ಪಡೆದಿದ್ದಾರೆ. ಕೂಲಿ ಕೆಲಸ ಮಾಡುತ್ತಿರುವ ಸುಲೈಮಾನ್ ಸಂಸಾರ ನಡೆಸುವುದಕ್ಕಾಗಿ ಮಕ್ಕಳನ್ನು ಮಾರಾಟ ಮಾಡಿರುವುದಾಗಿ ಪೊಲೀಸರ ತನಿಖೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

English summary
Kasaragod police have arrested a 48-year-old man from Kanhangad in Kasaragod along with three agents on charges of selling his two infant children for Rs 3.25 lakh with the help of a woman advocate of Mangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X