ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರವೇಯಿಂದ ಮತ್ತೆ ಯಳ್ಳೂರು ಚಲೋ ಚಳವಳಿ

By Ashwath
|
Google Oneindia Kannada News

ಬೆಂಗಳೂರು,ಆ.6:ಬೆಳಗಾವಿ ಗಡಿಯಲ್ಲಿ ಎಂಇಎಸ್‌ ಮತ್ತು ಶಿವಸೇನೆ ಪುಂಡಾಟ ಖಂಡಿಸಿ ಕರ್ನಾಟಕ ರಕ್ಷಣ ವೇದಿಕೆ ಮತ್ತೊಮ್ಮೆ "ಯಳ್ಳೂರು ಚಲೋ" ಚಳವಳಿಗೆ ಕರೆ ನೀಡಿದೆ.

ನಗರದ ಸಿಟಿಡೆಲ್‌ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ " ಆ.10 ರಂದು ಬೆಳಗಾವಿಯಲ್ಲಿ ಬೃಹತ್‌ ಬಹಿರಂಗ ಸಭೆ ನಡೆಸಲಿದ್ದೇವೆ. ಈ ಸಭೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕರವೇ ಕಾರ್ಯಕರ್ತರು ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.[ಹುಬ್ಬಳ್ಳಿಯಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಬಂಧನ]

ಗಡಿ ಭಾಗದಲ್ಲಿ ಎಂಇಎಸ್‌ ಮತ್ತು ಶಿವಸೇನೆ ಪದೇ ಪದೇ ಖ್ಯಾತೆ ತೆಗೆದು ಕನ್ನಡಿಗರಿಗೆ ಹಿಂಸೆ ನೀಡುತ್ತಿದೆ. ಇನ್ನು ಮುಂದೆ ಕನ್ನಡಿಗರ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಟಿ.ನಾರಾಯಣಗೌಡ ಎಂಇಎಸ್‌ ಮತ್ತು ಶಿವಸೇನೆಗೆ ಎಚ್ಚರಿಕೆ ನೀಡಿದರು.[ಬೆಳಗಾವಿ: ಸಿದ್ದು ಸರ್ಕಾರ ವಿರುದ್ಧ ಕನ್ನಡಿಗರ ಆಕ್ರೋಶ]

t narayna gowda

ಕನ್ನಡ ಮತ್ತು ಕರ್ನಾಟಕವನ್ನು ಸುಟ್ಟು ಹಾಕುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಉದ್ದಟತನದ ಮಾತನಾಡಿದ್ದಾರೆ. ಬೆಳಗಾವಿ ಯಾವತ್ತೂ ಕರ್ನಾಟಕದ ಭಾಗ. ಅದನ್ನು ಕಿತ್ತುಕೊಳ್ಳಲು ಯಾರಿಗೂ ಬಿಡುವುದಿಲ್ಲ ಎಂದು ಅವರು ಹೇಳಿದರು.[ಬೆಂಗಳೂರು ಬಂದ್‌‌ನಲ್ಲಿ ಕರವೇ ನಾರಾಯಣ ಗೌಡ ಏಕಿಲ್ಲ?]

ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನೆ ಮತ್ತು ಎಂಇಎಸ್‌ ಪುಂಡಾಟ ಹೆಚ್ಚಾಗುತ್ತಿದೆ. ಇವುಗಳಿಗೆ ಮೂಗುದಾರ ಹಾಕಬೇಕು. ಪದೇ ಪದೇ ಖ್ಯಾತೆ ತೆಗೆಯುತ್ತಿರುವ ಇವುಗಳನ್ನು ನಿಷೇಧಿಸುವಂತೆ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

English summary
Karnataka Rakshana Vedike to hold nassive protest rally in Belgavi on August 10. Karnataka Rakshana Vedike Chief Narayana Gowda aid "Government should rein in MES and Shiv Sena"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X