ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ ಮೋದಿ

|
Google Oneindia Kannada News

ಬೆಂಗಳೂರು, ಆ.22 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ನಿಧನಕ್ಕೆ ಕರ್ನಾಟಕ ಕಂಬನಿ ಮಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಿನ ಸಾಹಿತಿಗಳು, ಪ್ರಧಾನಿ ನರೇಂದ್ರ ಮೋದಿ ಅವರು ಅನಂತಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಂತಮೂರ್ತಿ ಅವರ ನಿಧನದಿಂದಾಗಿ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ. ನಾನು ಅಧಿಕಾರವಹಿಸಿಕೊಂಡಾಗ ಒಳ್ಳೆಯ ಕೆಲಸ ಮಾಡಲು ಹೇಳಿದ್ದರು, ಕೋಮುವಾದ ಬೆಳೆಯದಂತೆ ತಡೆಯಲು ಸಲಹೆ ನೀಡಿದ್ದರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ. [ಸಾಹಿತಿ ಯು.ಆರ್ ಅನಂತಮೂರ್ತಿ ಅಸ್ತಂಗತ]

ಸಾಹಿತಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಪ್ರತಿಪಾದಿಸಿದ ಅನಂತಮೂರ್ತಿ ಅವರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗೆ ಸದಾ ಕಾಲ ಸ್ಪಂದಿಸುತ್ತಿದ್ದರು. ರಾಜ್ಯದ ಹಾಗೂ ಶ್ರೀಸಾಮಾನ್ಯನ ಹಿತ ಕಾಯುವಲ್ಲಿ ವಿಶೇಷ ಕಳಕಳಿ ಹಾಗೂ ಅಪ್ರತಿಮ ಬದ್ಧತೆ ತೋರುತ್ತಿದ್ದ ಅವರು ಈ ನಿಟ್ಟಿನಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯ ಹಾಗೂ ದಿಟ್ಟ ನಿಲುವು ಪ್ರಕಟಿಸುವಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಯು.ಆರ್.ಅನಂತಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿ ಟ್ವಿಟ್ ಮಾಡಿದ್ದಾರೆ.

ಸಂತಾಪ ಸೂಚಿಸಿದ ಮುಖ್ಯಮಂತ್ರಿ

ಸಂತಾಪ ಸೂಚಿಸಿದ ಮುಖ್ಯಮಂತ್ರಿ

ಅನಂತಮೂರ್ತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಸಾಹಿತಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಪ್ರತಿಪಾದಿಸಿದ ಅನಂತಮೂರ್ತಿ ಅವರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗೆ ಸದಾ ಕಾಲ ಸ್ಪಂದಿಸುತ್ತಿದ್ದರು. ರಾಜ್ಯದ ಹಾಗೂ ಶ್ರೀಸಾಮಾನ್ಯನ ಹಿತ ಕಾಯುವಲ್ಲಿ ವಿಶೇಷ ಕಳಕಳಿ ಹಾಗೂ ಅಪ್ರತಿಮ ಬದ್ಧತೆ ತೋರುತ್ತಿದ್ದ ಅವರು ಈ ನಿಟ್ಟಿನಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯ ಹಾಗೂ ದಿಟ್ಟ ನಿಲುವು ಪ್ರಕಟಿಸುವಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ ಎಂದು ಮುಖ್ಯಮಂತ್ರಿಗಳು ಸಂತಾಪದಲ್ಲಿ ತಿಳಿಸಿದ್ದಾರೆ.

ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಯು.ಆರ್.ಅನಂತಮೂರ್ತಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿ ಟ್ವಿಟ್ ಮಾಡಿದ್ದಾರೆ.

ಕುಮಾರಸ್ವಾಮಿ ಸಂತಾಪ

ಕುಮಾರಸ್ವಾಮಿ ಸಂತಾಪ

ಅನಂತಮೂರ್ತಿ ನಿಧನಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಕನ್ನಡ ಸಾರಸ್ವತ ಲೋಕದ ದಿಗ್ಗಜರಾಗಿದ್ದ ಅನಂತಮೂರ್ತಿ ರವರು ತಮ್ಮ ಸಾಹಿತ್ಯದ ಮೂಲಕ ನಾಡಿಗೆ ಕೀರ್ತಿ ತಂದಿದ್ದರು. ವೈಚಾರಿಕ ಬರಹ ಮತ್ತು ನಿಲುವುಗಳ ಮೂಲಕ ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದರು ಎಂದು ಕುಮಾರಸ್ವಾಮಿ ಸಂತಾಪದಲ್ಲಿ ಹೇಳಿದ್ದಾರೆ.

ಹೋರಾಟಗಾರರನ್ನು ಕಳೆದುಕೊಂಡಿದ್ದೇವೆ

ಹೋರಾಟಗಾರರನ್ನು ಕಳೆದುಕೊಂಡಿದ್ದೇವೆ

ಅನಂತಮೂರ್ತಿ ಅವರ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವಾಗಿದೆ. ಅನಂತಮೂರ್ತಿ ವಿಚಾರಧಾರೆಗಳೇ ವೈಶಿಷ್ಟ್ಯ. ಹುಟ್ಟು ಹೋರಾಟಗಾರರನ್ನು ಇಂದು ಕಳೆದುಕೊಂಡಂತಾಗಿದೆ ಎಂದು ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಸಂತಾಪ ಸೂಚಿಸಿದ್ದಾರೆ. ಅವರನ್ನು ಎಡಪಂಥೀಯ ಮತ್ತು ಒಂದು ವರ್ಗದ ಪರ ಎಂದು ಚಿತ್ರಿಸಿದ್ದು ಸತ್ಯಕ್ಕೆ ದೂರವಾದ ಮಾತು ಎಂದು ಪಾಪು ಹೇಳಿದ್ದಾರೆ.

ಎಚ್‌.ಡಿ.ದೇವೇಗೌಡರಿಂದ ಸಂತಾಪ

ಎಚ್‌.ಡಿ.ದೇವೇಗೌಡರಿಂದ ಸಂತಾಪ

ಅನಂತಮೂರ್ತಿ ಅವರು ಹುಟ್ಟು ಹೋರಾಟಗಾರರು. ಅಧರ್ಮದ ವಿರುದ್ಧ ಸೆಟೆದು ನಿಂತವರು. ಸಾಹಿತ್ಯ ಲೋಕಕ್ಕೆ ಮಾತ್ರ ಅಲ್ಲ. ಇಡೀ ದೇಶಕ್ಕೆ ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ.

ವಾಟಾಳ್ ನಾಗರಾಜ್ ಸಂತಾಪ

ವಾಟಾಳ್ ನಾಗರಾಜ್ ಸಂತಾಪ

ಅನಂತಮೂರ್ತಿ ಅವರು ಸಮಾಜವಾದಿ ಸಿದ್ಧಾಂತಕ್ಕೆ ಅಂಟಿಕೊಂಡವರು. ಹೋರಾಟದಲ್ಲೂ ಪಾಲ್ಗೊಂಡಿದ್ದರು. ರಾಜಕೀಯ ಚಿಂತಕರು ಆಗಿದ್ದರು. ಸರಳ ಸಜ್ಜನಿಕೆಯ ನೇರ ಅಭಿವ್ಯಕ್ತಿಯ ದಿಟ್ಟ ನಿಲುವಿನ ಮೇರು ವ್ಯಕ್ತಿತ್ವದವರನ್ನು ಅವರ ನಿಧನದಿಂದಾಗಿ ನಾವು ಕಳೆದುಕೊಂಡಿದ್ದೇವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಂಬನಿ ಮಿಡಿದಿದ್ದಾರೆ.

ಸ್ಪೀಕರ್ ಕಾಗೋಡು ತಿಮ್ಮಪ್ಪ ಸಂತಾಪ

ಸ್ಪೀಕರ್ ಕಾಗೋಡು ತಿಮ್ಮಪ್ಪ ಸಂತಾಪ

ಅನಂತಮೂರ್ತಿ ಅವರ ನಿಧನದಿಂದಾಗಿ ಕರ್ನಾಟಕದ ಪ್ರಗತಿಪರ ಬರಹಗಾರನನ್ನು ಕಳೆದುಕೊಂಡಿದ್ದೇವೆ. ಬೆಂಗಳೂರು ಅಥವಾ ಶಿವಮೊಗ್ಗದಲ್ಲಿ ಅವರ ಹೆಸರು ಅಜರಾಮರವಾಗಿ ಇರಿಸುವಂಥ ಯೋಜನೆ ಹಾಕಿಕೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸಂತಾಪ ಸೂಚಿಸಿದ್ದಾರೆ.

ಪ್ರಕಾಶ್ ಬೆಳವಾಡಿ ಸಂತಾಪ

ಪ್ರಕಾಶ್ ಬೆಳವಾಡಿ ಸಂತಾಪ

ಸಣ್ಣ-ಸಣ್ಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದವರು ಅನಂತಮೂರ್ತಿ. ಅವರಿಗೆ ಹಿರಿ ಕಿರಿಯ ಸಾಹಿತಿಗಳೆಂಬ ತಾರತಮ್ಯವಿರಲಿಲ್ಲ. ಎಲ್ಲರ ಜತೆಗೂ ಹೊಂದಾಣಿಕೆಯಿಂದ ನಡೆದುಕೊಳ್ಳುತ್ತಿದ್ದರು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ವರ್ತಿಸುತ್ತಿದ್ದರು ಎಂದು ರಂಗಕರ್ಮಿ ಪ್ರಕಾಶ್ ಬೆಳವಾಡಿ ನೆನಪು ಮಾಡಿಕೊಂಡಿದ್ದಾರೆ.

ಅವರ ಪುಸ್ತಕಗಳ ಮೂಲಕ ಪರಿಚಯವಾದರು

ಅವರ ಪುಸ್ತಕಗಳ ಮೂಲಕ ಪರಿಚಯವಾದರು

ಅನಂತಮೂರ್ತಿ ಅವರ ಪುಸ್ತಕಗಳ ಮೂಲಕ ಅವರನ್ನು ಪರಿಚಯ ಮಾಡಿಕೊಂಡೆ ನಂತರ ಅವರ ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತು. ಅವರ ವಿಚಾರಧಾರೆ, ಚಿಂತನೆ ಅಗಾಧವಾದದ್ದು ಎಂದು ಹಿರಿಯ ನಟ ಅನಂತನಾಗ್ ನೆನಪು ಮಾಡಿಕೊಂಡಿದ್ದಾರೆ.

ಪ್ರಹ್ಲಾದ್ ಜೋಶಿ ಸಂತಾಪ

ಪ್ರಹ್ಲಾದ್ ಜೋಶಿ ಸಂತಾಪ

ಅನಂತಮೂರ್ತಿಯವರ ನಿಧನದಿಂದ ಕನ್ನಡ ಸಾರಸ್ವತ ಲೋಕವು ಬಡವಾಗಿದೆ
ಇವರ ಸಂಸ್ಕಾರ, ಭಾರತಿಪುರ, ಭವ ಮತ್ತು ಅವಸ್ಥೆ ಮುಂತಾದ ಪುಸ್ತಕಗಳು ಸಾಹಿತ್ಯಲೋಕದಲ್ಲಿ ಸಂಚಲನವನ್ನು ಉಂಟು ಮಾಡಿದ್ದವು. ಇವರ ನಿಧನದಿಂದ ಇಂದು ಕರ್ನಾಟಕ ಒಬ್ಬ ಅಪ್ರತಿಮ ಸಮಾಜ ಚಿಂತಕರನ್ನು ಕಳೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದ್ದಾರೆ.

English summary
Jnanpith awardee and renowned Kannada writer U.R.Anantha Murthy died at a Manipal hospital Bangalore on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X