ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ತೆರೆ : ಎಲ್ಲೆಲ್ಲಿ ಎಷ್ಟು ಮತದಾನ?

|
Google Oneindia Kannada News

ಬೆಂಗಳೂರು, ಏ. 17 : ಹದಿನಾರನೇ ಲೋಕಸಭೆಗೆ ಕರ್ನಾಟಕದಲ್ಲಿ ಮತದಾನ ಅಂತ್ಯಗೊಂಡಿದೆ. ಸಣ್ಣಪುಟ್ಟ ಘರ್ಷಣೆ ಪ್ರಕರಣಗಳನ್ನು ಹೊರತುಪಡಿಸಿದರೆ, ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದೆ. ಒಟ್ಟಾರೆ ರಾಜ್ಯದಲ್ಲಿ ಶೇ 62 ರಷ್ಟು ಮತದಾನವಾಗಿದೆ. ಆದರೆ, ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿದೆ.

ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ ಮತದಾನ ವಿಳಂಬವಾಗಿ ಆರಂಭವಾದ ಕೆಲವು ಮತಗಟ್ಟೆಗಳಲ್ಲಿ 6 ಗಂಟೆಯ ನಂತರವೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ ಬಿರುಸಿನಿಂದ ಆರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ಮಂದಗತಿಯಲ್ಲಿ ಸಾಗಿತು. ಸಂಜೆಯ ವೇಳೆಗೆ ಚುರುಕು ಪಡೆದರು, ಅಂತಿಮವಾಗಿ ಹೆಚ್ಚು ಮತದಾನವಾಗಲಿಲ್ಲ.

Karnataka

ಬೆಂಗಳೂರಿಗರು ಮತದಾನ ಮಾಡಲು ಜನರು ಬರುವುದಿಲ್ಲ ಎಂಬ ಆರೋಪ ಈ ಬಾರಿಯು ನಿಜವಾಗಿದ್ದು, ಬೆಂಗಳೂರು ದಕ್ಷಿಣ, ಕೇಂದ್ರ ಉತ್ತರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ನಕ್ಸಲ್ ಪೀಡಿತ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಬಿರುಬಿಸಿಲಿನ ಬಳ್ಳಾರಿ, ರಾಯಚೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದ್ದು, ಬೆಂಗಳೂರಿಗರು ತಲೆ ತಗ್ಗಿಸುವಂತಾಗಿದೆ.

ಅಂದಹಾಗೆ 6 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ ಬೆಂಗಳೂರು ಗ್ರಾಮಾಂತರದಲ್ಲಿ ಶೇ.51, ಬೆಂಗಳೂರು ಉತ್ತರದಲ್ಲಿ ಶೇ.49, ಬೆಂಗಳೂರು ಕೇಂದ್ರದಲ್ಲಿ ಶೇ.41 ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ.48ರಷ್ಟು ಮತದಾನವಾಗಿದೆ. ನಾಲ್ಕು ದಿನದ ಸಾಲು ರಜೆ ಪಡೆದ ಟೆಕ್ಕಿಗಳು ಮತದಾನ ಮಾಡಲು ಮಾತ್ರ ಆಸಕ್ತಿ ತೋರಿಲ್ಲ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂದು ಕೈ ಕಟ್ಟಿ ಕುಳಿತರೋ ಏನೋ? ಮತದಾನ ಪ್ರಮಾಣ ಮಾತ್ರ ಕುಸಿದಿದೆ. [ಮತದಾನದ ಚಿತ್ರಗಳನ್ನು ನೋಡಿ]

ಸಾವು-ನೋವು : ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾಗ ತುರುವೇಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗಂಗಯ್ಯ (57) ಮತ್ತು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೂಗಕೋಡಿನಲ್ಲಿ ಬಷೀರ್ ಸಾಬ್ ಜಾರಿಯಾ (52) ಹೃದಯಾಘಾತದಿಂದ ಸಾವನ್ನಪ್ಪಿದರು.

ಮತದಾನ ಮಾಡಿದ ನಂತರ ಮಂಗಳೂರಿನ ಮೂಡುಶೆಡ್ಡೆಯಲ್ಲಿ ಗಂಗಮ್ಮ (80), ಕೆಂಗೇರಿಯ ಉರ್ದು ಶಾಲೆಯಲ್ಲಿ ನಂಜುಂಡಪ್ಪ, ಯಾದಗಿರಿ ಜಿಲ್ಲೆಯ ಸುರಪುರದ ದೇವಪುರ ಗ್ರಾಮದಲ್ಲಿ ಮಾನಪ್ಪ ಬಾವಿ (50) ಮತ್ತು ಮೈಸೂರಿನಲ್ಲಿ ಅಗ್ರಹಾರದ ನಿವಾಸಿ ನಂಜಮ್ಮ (60) ಮೃತಪಟ್ಟಿದ್ದಾರೆ.

ಕೋಲಾರ, ರಾಮನಗರ, ಚಾಮರಾಜನರ, ಬೆಳಗಾವಿ, ನೆಲಮಂಗಲ ಮುಂತಾದ ಕಡೆಗಳಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ್ದನ್ನು ಹೊರತುಪಡಿಸಿದರೆ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮತದಾನ ನಡೆಯಿತು. [ಶಾಂತಿಯುತ ಮತದಾನ]

ಒಟ್ಟು 28 ಕ್ಷೇತ್ರಗಳಲ್ಲಿ ಕಣದಲ್ಲಿದ್ದ 434 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಇಂದು ನಿರ್ಧರಿಸಿದ್ದು, ಎಲ್ಲಾ ಅಭ್ಯರ್ಥಿಗಳ ಹಣೆಬರಹ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಭದ್ರವಾಗಿದೆ. ಮೇ 16ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಮತಎಣಿಕೆ ನಡೆಯಲಿದೆ. ಆದ್ದರಿಂದ ಇಂದು ಮತ ಚಲಾಯಿಸಿದ ನೀವು ಒಂದು ತಿಂಗಳು ಫಲಿತಾಂಶಕ್ಕಾಗಿ ಕಾಯುವುದು ಅನಿವಾರ್ಯ.

ಜಿಲ್ಲಾವಾರು ಮತದಾನದ ಪ್ರಮಾಣ ಹೀಗಿದೆ

ಚಿಕ್ಕೋಡಿ - ಶೇ.65
ಬೆಳಗಾವಿ-ಶೇ.68
ಬಾಗಲಕೋಟೆ -ಶೇ.65
ಬಿಜಾಪುರ-ಶೇ.50
ಗುಲ್ಬರ್ಗಾ-ಶೇ.50
ರಾಯಚೂರು-ಶೇ.55
ಬೀದರ್-ಶೇ.48
ಕೊಪ್ಪಳ-ಶೇ.56.37
ಬಳ್ಳಾರಿ-ಶೇ.66
ಹಾವೇರಿ-ಶೇ.63
ಧಾರವಾಡ-ಶೇ.58
ಉತ್ತರ ಕನ್ನಡ-ಶೇ.64
ದಾವಣಗೆರೆ -ಶೇ.44
ಶಿವಮೊಗ್ಗ-ಶೇ.62
ಉಡುಪಿ-ಚಿಕ್ಕಮಗಳೂರು-ಶೇ.70
ಹಾಸನ- ಶೇ.65
ದಕ್ಷಿಣ ಕನ್ನಡ -ಶೇ.73
ಚಿತ್ರದುರ್ಗ-ಶೇ.43
ತುಮಕೂರು-ಶೇ.64
ಮಂಡ್ಯ-ಶೇ.68
ಮೈಸೂರು-ಶೇ.63
ಚಾಮರಾಜನಗರ-ಶೇ.65
ಬೆಂಗಳೂರು ಗ್ರಾಮಾಂತರ-ಶೇ.51
ಬೆಂಗಳೂರು ಉತ್ತರ- ಶೇ.49
ಬೆಂಗಳೂರು ಕೇಂದ್ರ- ಶೇ.41
ಬೆಂಗಳೂರು ದಕ್ಷಿಣ- ಶೇ.48
ಚಿಕ್ಕಬಳ್ಳಾಪುರ-ಶೇ.65
ಕೋಲಾರ-ಶೇ.65

English summary
Elections 2014 : Single phase polling for 28 Lok Sabha seats in Karnataka concludes. Total 62 percent voting reported. officials said, polling had been peaceful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X