ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಭರ್ಜರಿ ಜಯ: ಮಲ್ಲೇಶ್ವರದಲ್ಲಿ ಸಂಭ್ರಮಾಚರಣೆ

By Ashwath
|
Google Oneindia Kannada News

ಬೆಂಗಳೂರು, ಮೇ.16: ಮಲ್ಲೇಶ್ವರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಸಂಭ್ರಮ ಮುಗಿಲು ಮುಟ್ಟಿತ್ತು. ಬೆಳಗ್ಗೆ ಏಳು ಗಂಟೆಯಿಂದಲೇ ಆಗಮಿಸಿದ ಕಾರ್ಯ‌ಕರ್ತರು ಬಿಜೆಪಿ ರಾಷ್ಟ್ರದಲ್ಲಿ ಸ್ಪಷ್ಟವಾಗಿ ಮುನ್ನಡೆಗಳಿಸುವುದು ತಿಳಿಯುತ್ತಿದ್ದಂತೆ ಅವರ ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ. ಕಾರ್ಯಕರ್ತರು ನೃತ್ಯ ಮಾಡಿ ಪಟಾಕಿ ಹಚ್ಚಿ ಬಿಜೆಪಿ ವಿಜಯೋತ್ಸವವನ್ನು ಆಚರಿಸಿದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌‌. ಬಿಜೆಪಿ ವಕ್ತಾರರಾದ ಸಿಟಿ. ರವಿ, ಸುರೇಶ್‌ ಕುಮಾರ್‌ ಕಾರ್ಯಕರ್ತರ ಜೊತೆಗೆ ತಾವು ನೃತ್ಯ ಮಾಡುವ ಮೂಲಕ ಗೆಲುವಿನ ಸಂಭ್ರಮಾಚರಣೆ ಆಚರಿಸಿಕೊಂಡರು.ಕಚೇರಿಯ ಹೊರಗಡೆ ಪ್ರತಿ ಕ್ಷಣ ಕ್ಷಣದ ಮಾಹಿತಿ ವೀಕ್ಷಣೆಗೆ ಮೂರು ದೊಡ್ಡ ಟಿವಿಗಳನ್ನು ಅಳವಡಿಸಲಾಗಿತ್ತು. ಬಿಜೆಪಿ ಮಲ್ಲೇಶ್ವರ ಕಚೇರಿಯ ಮುಂಭಾಗದಲ್ಲಿ ಬಿಜೆಪಿ ಕಾರ್ಯ‌ಕರ್ತರ ಸಂಭ್ರಮಾಚರಣೆಯ ದೃಶ್ಯ ಮುಂದಿನ ಸ್ಲೈಡ್‌‌ಗಳಲ್ಲಿ.

 ಬೈಕಿನಲ್ಲಿ ಮೋದಿ!

ಬೈಕಿನಲ್ಲಿ ಮೋದಿ!

ಬೈಕಿನಲ್ಲಿ ಮೋದಿ ವೇಷಧಾರಿ ಬಿಜೆಪಿ ಅಭಿಮಾನಿ

 ಬಿಜೆಪಿ ನಾಯಕರ ಸಂಭ್ರಮ

ಬಿಜೆಪಿ ನಾಯಕರ ಸಂಭ್ರಮ

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌‌, ಬಿಜೆಪಿ ವಕ್ತಾರ ಸಿ.ಟಿ. ರವಿ ಕಾರ್ಯ‌ಕರ್ತರೊಂದಿಗೆ ಹೆಜ್ಜೆ ಹಾಕುತ್ತಿರುವುದು.

 ಲೈವ್‌ ಸುದ್ಡಿ

ಲೈವ್‌ ಸುದ್ಡಿ

ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಪ್ರತಿ ಕ್ಷಣ ಕ್ಷಣದ ಮಾಹಿತಿ ವೀಕ್ಷಣೆಗೆ ಮೂರು ದೊಡ್ಡ ಟಿವಿಗಳನ್ನು ಅಳವಡಿಸಲಾಗಿತ್ತು

 ಕಾರ್ಯ‌ಕರ್ತರ ಸಂಭ್ರಮ

ಕಾರ್ಯ‌ಕರ್ತರ ಸಂಭ್ರಮ

ಬಿಜೆಪಿ ಕಾರ್ಯ‌ಕರ್ತರು ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸುತ್ತಿರುವುದು.

ಕಾರ್ಯ‌ಕರ್ತರೊಂದಿಗೆ ಸುರೇಶ್‌ ಕುಮಾರ್‌

ಕಾರ್ಯ‌ಕರ್ತರೊಂದಿಗೆ ಸುರೇಶ್‌ ಕುಮಾರ್‌

ಬಿಜೆಪಿ ವಕ್ತಾರ ಸುರೇಶ್‌ಕುಮಾರ್‌ ಕಾರ್ಯ‌ಕರ್ತರೊಂದಿಗೆ ಸಂಭ್ರಮಾಚರಣೆ ಆಚರಿಸುತ್ತಿರುವುದು.

 ಮಹಿಳಾ ಕಾರ್ಯ‌ಕರ್ತ‌ರ ಸಂಭ್ರಮ

ಮಹಿಳಾ ಕಾರ್ಯ‌ಕರ್ತ‌ರ ಸಂಭ್ರಮ

ಬಿಜೆಪಿ ಮಹಿಳಾ ಕಾರ್ಯ‌ಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿರುವುದು.

ಪಟಾಕಿ ಸಂಭ್ರಮ

ಪಟಾಕಿ ಸಂಭ್ರಮ

ರಾಷ್ಟ್ರದಲ್ಲಿ ಸ್ಪಷ್ಟವಾಗಿ ಬಿಜೆಪಿ ಮುನ್ನಡೆಗಳಿಸುವುದು ತಿಳಿಯುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

English summary
With the trend coming out in favour of Bharatiya Janata Party from across the country, the party workers in Malleswaram bjp office plunged into celebrations well before the announcement of results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X