ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗ: ಖರ್ಗೆ ಸಾಹೇಬ್ರಿಗೆ ಸತತ 2ನೇ ಗೆಲುವು

|
Google Oneindia Kannada News

ಗುಲ್ಬರ್ಗ, ಮೇ 16: ಗುಲ್ಬರ್ಗ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ಹಾಲಿ ಸಂಸದ ಮತ್ತು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಜಯಗಳಿಸಿದ್ದಾರೆ.

ಖರ್ಗೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಹಿರಿಯ ಧುರೀಣ ಮತ್ತು ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಅವರನ್ನು 74,733 ಮತಗಳ ಅಂತರದಿಂದ ಸೋಲಿಸಿ ಸತತವಾಗಿ ಎರಡನೇ ಬಾರಿಗೆ ಲೋಕಸಭೆಗೆ ಪ್ರವೇಶ ಪಡೆದಿದ್ದಾರೆ. (ಕರ್ನಾಟಕ ಸೀಟುಗಳಿಗೆ ಮತ ಎಣಿಕೆ : ಹಿನ್ನಡೆ ಮುನ್ನಡೆ)

ಜೆಡಿಎಸ್ ನಿಂದ ಕ್ಷೇತ್ರದಲ್ಲಿ ಡಿ ಜಿ ಸಾಗರ್ ಕಣದಲ್ಲಿದ್ದರು. ಖರ್ಗೆ ಗೆಲುವಿನ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಅಕೌಂಟ್ ತೆರೆದಿದೆ. 2009ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ರೇವೂ ನಾಯಕ್ ಬೆಳಮಗಿ ಅವರನ್ನು ಸುಮಾರು 13ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

Lok Sabha Election results 2014, Karnataka : Mallikarjun Kharge (Congress) wins Gulbarga constituency.

ಏಪ್ರಿಲ್ 17ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ದಾಖಲೆಯ ಶೇ. 57.90 ಮತದಾನವಾಗಿತ್ತು. ಕಣದಲ್ಲಿ ಒಟ್ಟು ಎಂಟು ಮಂದಿ ಅಭ್ಯರ್ಥಿಗಳಿದ್ದರು. (ಕರ್ನಾಟಕ ಲೋಕಸಭೆ : ಗೆದ್ದವರು ಸೋತವರು)

2009ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ 13,491 ಅಲ್ಪಮತಗಳ ಅಂತರದಿಂದ ರೇವೂನಾಯಕ್ ಬೆಳಮಗಿ ವಿರುದ್ದ ಜಯ ಸಾಧಿಸಿದ್ದರು.

ಕಾಂಗ್ರೆಸ್, ಬಿಜೆಪಿ ಹೊರತಾಗಿ ಜೆಡಿಎಸ್ ಅಭ್ಯರ್ಥಿಯೂ ಸೇರಿದಂತೆ ಕಣದಲ್ಲಿದ್ದ ಎಲ್ಲಾ ಇತರ ಅಭ್ಯರ್ಥಿಗಳು ಠೇವಣಿ ಕಳೆದು ಕೊಂಡಿದ್ದಾರೆ.

ಗುಲ್ಬರ್ಗ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಮಲ್ಲಿಕಾರ್ಜುನ ಖರ್ಗೆ 1 ಕಾಂಗ್ರೆಸ್ 507193
ರೇವೂ ನಾಯಕ್ ಬೆಳಮಗಿ 2 ಬಿಜೆಪಿ 432460
ಡಿ ಜಿ ಸಾಗರ್ 3 ಜೆಡಿಎಸ್ 15690
ದನ್ನಿ ಮಹಾದೇವ್ 4 ಬಿಎಸ್ಪಿ
11428
English summary
Lok Sabha Election results 2014, Karnataka : Senior Congress Leader and Union Railway Minister Mallikarjun Kharge (Congress) wins Gulbarga constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X