ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಭೂ ಕಂದಾಯ ವಿಧೇಯಕಕ್ಕೆ ಮೇಲ್ಮನೆ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಜು. 23 : ನಗರ ಪ್ರದೇಶದಲ್ಲಿ ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ ಅನಧಿಕೃತವಾಗಿ ವಾಸದ ಮನೆ ನಿರ್ಮಿಸಿರುವುದನ್ನು ಸಕ್ರಮಗೊಳಿಸಲು ಅನುಕೂಲವಾಗುವಂತೆ ಕರ್ನಾಟಕ ಭೂ ಕಂದಾಯ (2ನೇ ತಿದ್ದುಪಡಿ) ವಿಧೇಯಕ-2012ಕ್ಕೆ ವಿಧಾನ ಪರಿಷತ್‌ ಮಂಗಳವಾರ ಅಂಗೀಕಾರ ನೀಡಿದೆ.

ಎರಡು ವರ್ಷಗಳ ಹಿಂದೆ ರಾಜ್ಯಪಾಲರು ಪುನರ್ ಪರಿಶೀಲನೆಗೆ ವಾಪಸ್ ಕಳುಹಿಸಿದ್ದ ವಿಧೇಯಕಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಮಾಡಿ ಸಕ್ರಮಕ್ಕೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ವಿಧಾನಪರಿಷತ್ತಿನಲ್ಲಿ ವಿಧೇಯಕ ಮಂಡಿಸಿದ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಅಕ್ರಮ-ಸಕ್ರಮದ ಕುರಿತು ವಾದ-ಪ್ರತಿವಾದ ನಡೆದು ಕೆಲವೊಂದು ಕ್ರಮಗಳನ್ನು ಕೈಗೊಳ್ಳುವ ಜತೆಗೆ ಆದೇಶ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸುವ ಭರವಸೆಯನ್ನು ಸದನದಕ್ಕೆ ನೀಡಿದರು.

Legislative Council

ಈ ವಿಧೇಯಕದ ಅನ್ವಯ 2012ರ ಜ.1ರ ಮೊದಲು ಮನೆ ನಿರ್ಮಿಸಿರುವ ಪ್ರಕರಣಗಳಲ್ಲಿ 20/30 ಅಡಿ ವಿಸ್ತೀರ್ಣ ಮೀರದಂತೆ ಸಕ್ರಮಕ್ಕೆ ಅವಕಾಶ ಕಲ್ಪಿಸಿದ್ದು, ಭೂ ಕಂದಾಯ ಅಧಿನಿಯಮ 1964ರ ನಿಯಮ 12 ಕ್ಕೆ 94ಸಿಸಿ ಎಂದು ಹೊಸದಾಗಿ ತಿದ್ದುಪಡಿ ತರುವ ಮೂಲಕ ನಗರ ಪ್ರದೇಶದ ಬಡವರ ಪಾಲಿಗೆ ವರದಾನವಾಗುವ ನಿರ್ಧಾರ ಕೈಗೊಳ್ಳಲಾಗಿದೆ. [ಗ್ರಾಮೀಣ ಅಕ್ರಮ-ಸಕ್ರಮ ಗಡುವು ವಿಸ್ತರಣೆ]

ಯಾವುದು ಸಕ್ರಮವಿಲ್ಲ : ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕೆರೆ, ರಾಜಕಾಲುವೆಗೆ ಸೇರಿದ ಜಾಗಗಳಲ್ಲಿ ಅಕ್ರಮ ಮನೆಗಳನ್ನು ನಿರ್ಮಿಸಿಕೊಂಡಿರುವ ನೂರಾರು ಪ್ರಕರಣಗಳಿದ್ದು, ಅಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದರೂ ಸಕ್ರಮ ಮಾಡುವುದಿಲ್ಲ ಎಂದು ಸಚಿವರು ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಾಯ್ದೆಯ ಅನ್ವಯ ಅರಣ್ಯ ಭೂಮಿ, ಉದ್ಯಾನ, ಆಟದ ಮೈದಾನ, ಸಿಎ ನಿವೇಶನ, ಮಳೆನೀರು ಚರಂಡಿ, ಕೆರೆ ಏರಿ ಪ್ರದೇಶ, ನದಿ ದಡ, ಹೈಟೆನ್‌ಷನ್ ವಿದ್ಯುತ್ ಲೈನ್ ಕೆಳಭಾಗ, ಸ್ಮಾರಕ, ವಿಮಾನ ನಿಲ್ದಾಣ, ಕರಾವಳಿ ವಲಯ ನಿಯಂತ್ರಣದಿಂದ ಆವೃತವಾಗಿರುವ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿದ್ದರೆ ಸಕ್ರಮ ಮಾಡಿಕೊಳ್ಳಲು ಅವಕಾಶ ಸಿಗುವುದಿಲ್ಲ.

ಕಾಯ್ದೆ ಬಗ್ಗೆ ಪರಿಷತ್ತಿಗೆ ವಿವರಣೆ ನೀಡಿದ ಕಂದಾಯ ಸಚಿವರು, ಬಿಬಿಎಂಪಿ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗೆ ತಿದ್ದುಪಡಿ ಕಾಯಿದೆ ಅನ್ವಯವಾಗಲಿದೆ. ಸಕ್ಷಮ ಪ್ರಾಧಿಕಾರದಿಂದ ಸೂಕ್ತ ದಾಖಲೆ ಹಾಗೂ ಶುಲ್ಕ ಪಾವತಿ ಬಳಿಕ ಸಕ್ರಮಗೊಂಡ ನಂತರ ಈ ಸ್ವತ್ತನ್ನು 15 ವರ್ಷ ಅನ್ಯರಿಗೆ ಮಾರಾಟ, ಪರಭಾರೆ ಮಾಡದಂತೆ ಷರತ್ತು ಹಾಕಲಾಗಿದೆ ಎಂದರು.

English summary
The Karnataka Legislative Council on Tuesday passed a bill that seeks to regularize unauthorized residential houses constructed on the government land in urban areas. Revenue Minister V.Srinivas Prasad tabled the bill in Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X