ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ನಿಮಿತ್ತ ಅಧಿಕಾರಿಗಳು ಅಲ್ಲಿಂದ-ಇಲ್ಲಿಗೆ

By Mahesh
|
Google Oneindia Kannada News

Karnataka KAS, IPS officers Transfer
ಬೆಂಗಳೂರು, ಮಾ.4: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹದಿನಾಲ್ಕು ಮಂದಿ ಕೆಎಎಸ್ ಅಧಿಕಾರಿಗಳನ್ನು ಅವರ ಹೆಸರಿನ ಮುಂದಿನ ಸ್ಥಳಕ್ಕೆ ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಇತ್ತೀಚೆಗೆ 13 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗ ಮಾಡಲಾಗಿತ್ತು. ಮೂಲಗಳ ಪ್ರಕಾರ ವರ್ಗಾವಣೆ ಮಾಡಲಿರುವ ಅಧಿಕಾರಿಗಳ ಸಂಖ್ಯೆ ನೂರರ ಬದಲಿಗೆ ಸಾವಿರ ದಾಟುವ ಸಾಧ್ಯತೆಯೂ ಇದೆಯಂತೆ.

ಆಡಳಿತ ಯಂತ್ರ ಚುರುಕುಗೊಳಿಸುವುದು, ಅಧಿಕಾರಿಗಳಿಗೆ ಬಡ್ತಿ ನೀಡುವುದು ಸಾಮಾನ್ಯ ವಿಷಯವಾಗಿದೆ. ಅಧಿಕಾರಿಗಳ ಸೇವೆ ರಾಜ್ಯದ ಎಲ್ಲಾ ಭಾಗದ ಜನಕ್ಕೂ ಸಿಗುವಂತಾಗಲಿ ಎಂಬುದು ನಮ್ಮ ಆಶಯ ಎಂಬ ಹಳೆ ಡೈಲಾಗ್ ಜತೆಗೆ ಚುನಾವಣೆ ಸಂದರ್ಭದಲ್ಲಿ ಸಮರ್ಥ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಲ್ಲಿ ನೇಮಿಸುವುದು ಎಲ್ಲಾ ಸರ್ಕಾರಗಳು ಮಾಡಿಕೊಂಡು ಬಂದಿರುವ ರೂಢಿಗತ ಕ್ರಮ ಎಂಬುದನ್ನು ಜನತೆ ನೆನಪಿಟ್ಟುಕೊಂಡರೆ ಸಾಕು.

ಕೆಎಎಸ್ ಅಧಿಕಾರಿಗಳು: ಎಂ.ಕೆ.ಶ್ರೀರಂಗಯ್ಯ-ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ, ಕೆ.ಪಿ.ಹೊನಕೇರಿ-ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ, ಕವಿತಾ ಎಸ್.ಮನ್ನಿಕೇರಿ- ಬಿಜಾಪುರ ಅಪರ ಜಿಲ್ಲಾಧಿಕಾರಿ, ಕೆ.ಶ್ರೀನಿವಾಸ-ಧಾರವಾಡ ಅಪರ ಜಿಲ್ಲಾಧಿಕಾರಿ, ಅರ್ಚನಾ ಎಂ.ಎಸ್-ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ.

ಶಿವಾನಂದ ಕಡಸಿ-ಮೈಸೂರು ಅಪರ ಜಿಲ್ಲಾಧಿಕಾರಿ, ಗಂಗೂಬಾಯಿ ಆರ್. ಮಾನಕರ-ಯಾದಗಿರಿ ಅಪರ ಜಿಲ್ಲಾಧಿಕಾರಿ, ಎನ್.ಎಂ.ನಾಗರಾಜ್-ಶಿವಮೊಗ್ಗ ಅಪರ ಜಿಲ್ಲಾಧಿಕಾರಿ, ಎನ್.ತಿಪ್ಪೇಸ್ವಾಮಿ-ಬೆಳಗಾವಿ ಇಳಕಲ್ ಡ್ಯಾಂ ವಿಶೇಷ ಭೂ ಸ್ವಾಧೀನಾಧಿಕಾರಿ.

ತಬಸ್ಸುಮ್ ಝಾಹೆರಾ-ದಾವಣಗೆರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಡಾ.ವಿ.ವೆಂಕಟೇಶ ಮೂರ್ತಿ-ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿ, ಭೀಮಾ ಶಂಕರ್- ಗುಲ್ಬರ್ಗ ಜಿಲ್ಲೆ ಸೇಡಂ ಉಪ ವಿಭಾಗಾಧಿಕಾರಿ, ಅನಿತಾ ಲಕ್ಷ್ಮಿ-ತುಮಕೂರು ಜಿಲ್ಲೆಯ ಮಧುಗಿರಿ ಉಪ ವಿಭಾಗಾ ಧಿಕಾರಿ, ಬಿ.ಬಿ.ಸರೋಜಾ-ಚಿತ್ರದುರ್ಗ ಉಪವಿಭಾ ಗಾಧಿಕಾರಿ ಸ್ಥಾನಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ವಿ ಪೊನ್ನುರಾಜ್ ವರ್ಗ: ಸರ್ವೆ ಮತ್ತು ಭೂ ದಾಖಲೆಗಳ ಆಯುಕ್ತರಾಗಿದ್ದ ವಿ. ಪೊನ್ನುರಾಜ್ ಅವರನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಲಿ ವೆಚ್ಚ ನಿರ್ವಹಣೆ ವಿಭಾಗದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಲು ನೇಮಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕೆ.ಆರ್ ನಿರಂಜನ್ ಅವರನ್ನು ಬಿಬಿಎಂಪಿ ಚುನಾವಣೆ ವಿಶೇಷ ಆಯುಕ್ತರನ್ನಾಗಿಸಿ ವರ್ಗಾವಣೆ ಮಾಡಲಾಗಿದೆ.

ಐಪಿಎಸ್ ಅಧಿಕಾರಿಗಳು: ಎಸ್.ಡಿ.ಶರಣಪ್ಪ-ದಕ್ಷಿಣ ಕನ್ನಡ(ಮಂಗಳೂರು) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸೀಮಂತ್ ‌ಕುಮಾರ್ ಸಿಂಗ್-ಮಂಗಳೂರು ಪಶ್ಚಿಮ ವಲಯ ಐಜಿಪಿ, ಮುಹಮ್ಮದ್ ವಝೀರ್ ಅಹ್ಮದ್-ಬೆಂಗಳೂರಿನ ತರಬೇತಿ ವಿಭಾಗದ ಪೊಲೀಸ್ ಮಹಾ ನಿರೀಕ್ಷಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಅಮರ್‌ಕುಮಾರ್ ಪಾಂಡೆ-ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಟಿ.ಸುನೀಲ್‌ಕುಮಾರ್-ಬೆಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ. ಸಿ.ಎಚ್.ಪ್ರತಾಪ್ ರೆಡ್ಡಿ-ಪೊಲೀಸ್ ಮಹಾನಿರೀಕ್ಷಕ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ, ಡಾ.ಸುರೇಶ್ ಕೆ.ಮುಹಮ್ಮದ್-ಗುಲ್ಬರ್ಗ ಈಶಾನ್ಯ ವಲಯ ಐಜಿಪಿ, ಕೆ.ಎಸ್.ಆರ್.ಚರಣ್ ರೆಡ್ಡಿ-ಲೋಕಾಯುಕ್ತ ವಿಶೇಷ ತನಿಖಾ ದಳದ ಐಜಿಪಿ.

ಡಾ.ರಾಮ್ ನಿವಾಸ್ ಸೇಪತ್-ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಜಯ್ ಹಿಲ್ಲೋರಿ-ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.

ಡಾ.ರೋಹಿಣಿ ಕಟೋಚ್ ಸೇಪತ್-ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೆ.ಟಿ.ಬಾಲಕೃಷ್ಣ-ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಅಕಾಡೆಮಿ ನೇಮಕಾತಿ ಕಿರಿಕ್ : ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಅರೆಭಾಷಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ಸರ್ಕಾರ ದಿಢೀರ್ ತಡೆ ನೀಡಲಾಗಿದೆ.

ಕಳೆದ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ರಾಜ್ಯದ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದ್ದರು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಕೊಡವ ಸಾಹಿತಿ, ಶಿಕ್ಷಣ ತಜ್ಞ ಇಟ್ಟೀರ ಬಿದ್ದಪ್ಪ ಮತ್ತು ಅರೆಭಾಷಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ವಕೀಲ, ಲೇಖಕ ಕೆ.ಆರ್. ವಿದ್ಯಾಧರ್ ಅವರನ್ನು ನೇಮಕ ಮಾಡಲಾಗಿತ್ತು. ಸಂಸದ ವಿಶ್ವನಾಥ್ ಈ ಹಿನ್ನೆಲೆಯಲ್ಲಿ ಸಚಿವೆ ಉಮಾಶ್ರೀ ಪ್ರಕಟಿಸಿದ್ದ ಕೊಡವ ಮತ್ತು ಅರೆಭಾಷಾ ಅಕಾಡೆಮಿ ಅಧ್ಯಕ್ಷರು, ಸದಸ್ಯರ ತಂಡದ ನೇಮಕಕ್ಕೆ ತಡೆ ನೀಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ಮುಖ್ಯಮಂತ್ರಿಗಳ ಸೂಚನೆಯನ್ವಯ ನೂತನ ನೇಮಕಾತಿಗೆ ತಡೆ ನೀಡಲಾಗಿದೆ.

English summary
After major bureaucratic shake up, the Congress Government in Karnataka transferred 14 KAS officers. V Ponnuraj has been transferred to State Chief Election office. Recently Karnataka government transferred 13 IPS officers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X