ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾನ್ಸ್‌ ಬಾರ್‌ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್

|
Google Oneindia Kannada News

ಬೆಂಗಳೂರು, ಜು. 10 : ಪರವಾನಗಿ ಹೊಂದಿದ ಬಾರ್‌ ಅಂಡ್‌ ರೆಸ್ಟೊರೆಂಟ್‌ ಗಳಲ್ಲಿ ಯುವತಿಯರ ನೃತ್ಯಕ್ಕೆ ಇದ್ದ ನಿರ್ಬಂಧ ಸಡಿಲಿಸುವಂತೆ ಹೈಕೋರ್ಟ್‌ ಬುಧವಾರ ಆದೇಶಿಸಿದೆ. ಇದರಿಂದಾಗಿ ಇನ್ನು ಮುಂದೆ ಬಾರ್‌ ಅಂಡ್‌ ರೆಸ್ಟೋರೆಂಟ್ ಗಳು ತಮ್ಮ ಆವರಣಗಳಲ್ಲಿ ನೃತ್ಯ ಆಯೋಜಿಸಲು ಅನುಮತಿ ನೀಡುವಂತೆ ಪೊಲೀಸ್‌ ಇಲಾಖೆಗೆ ಮನವಿ ಮಾಡಬಹುದಾಗಿದೆ.

ಬುಧವಾರ ಬಾರ್ ಅಂಡ್‌ ರೆಸ್ಟೋರೆಂಟ್ ಗಳಲ್ಲಿ ವೃತ್ತಿಪರ ನೃತ್ಯಗಾರ್ತಿಯರ ನೃತ್ಯಗಳನ್ನು ಆಯೋಜಿಸಲು ಕಾನೂನು­ಬದ್ಧ ಅವ­ಕಾಶ ಕಲ್ಪಿಸಬೇಕೆಂದು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರ ನ್ಯಾಯ­ಪೀಠ ಈ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

Bar

ಆದೇಶವೇನಿತ್ತು : ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ನಿಬಂಧನೆಗಳು) ನಿಯಮ 1967ರ 11 (1)ರ ಅಡಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಗಳ ಮೇಲೆ ಹೇರಲಾಗಿದ್ದ ನಿಯಮಗಳಲ್ಲಿ 'ನೃತ್ಯ ಆಯೋಜನೆ' ಮಾಡಬಾರದು ಎಂಬುದು ಪ್ರಮುಖವಾಗಿತ್ತು. ಬಾರ್‌ ಅಂಡ್ ರೆಸ್ಟೋರೆಂಟ್‌ ಗಳ ಆವರಣದಲ್ಲಿ ಜೂಜು, ನೃತ್ಯ ಆಯೋಜನೆ, ಔತಣ­ಕೂಟ ಅಥವಾ ಮನೋರಂಜನಾ ಸಮಾ­ರಂಭ­ಗಳನ್ನು ನಡೆಸುವುದಕ್ಕೆ ನಿರ್ಬಂಧವಿತ್ತು.

ಬುಧವಾರ ಹೈಕೋರ್ಟ್ ತನ್ನ ಆದೇಶದಲ್ಲಿ 'ನೃತ್ಯ ಆಯೋಜನೆ' ಮಾಡಬಾರದು ಎಂಬ ಅಂಶವನ್ನು ತೆಗೆದು­ಹಾಕುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರಿಂದಾಗಿ ಇನ್ನು ಮುಂದೆ ಬಾರ್‌ ಅಂಡ್‌ ರೆಸ್ಟೋರೆಂಟ್‌ ಗಳು ತಮ್ಮ ಆವರಣಗಳಲ್ಲಿ ನೃತ್ಯ ಆಯೋಜಿಸಲು ಅನುಮತಿ ನೀಡುವಂತೆ ಪೊಲೀಸ್‌ ಇಲಾಖೆಗೆ ಮನವಿ ಮಾಡಬಹುದಾಗಿದೆ. ಅನುಮತಿ ನೀಡುವುದು ಪೊಲೀಸರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.

ಅರ್ಜಿದಾರರ ವಾದ : ಡ್ಯಾನ್ಸ್‌ಗೆ ನಿಷೇಧ ಹೇರಿದ್ದ ನಿಯಮ ಪ್ರಶ್ನಿಸಿ ಛೀಪ್‌ ಇನ್‌ ರೆಂಜೆನ್ಸಿ ಬಾರ್‌ ಹಾಗೂ ರೆಸ್ಟೋರೆಂಟ್‌ ಮತ್ತು ಇಬ್ಬರು ವೃತ್ತಿಪರ ನೃತ್ಯಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ನೃತ್ಯವು ಮನುಷ್ಯನ ಅಭಿವ್ಯಕ್ತಿ ಮಾಧ್ಯಮದ ಮುಖ್ಯಪ್ರಕಾರವಾಗಿದೆ. [ಡಾನ್ಸ್ ಬಾರ್ : ಸುಪ್ರೀಂಗೆ ಮಹಾರಾಷ್ಟ್ರ ಸೆಡ್ಡು]

ಸರ್ಕಾರ ಇದಕ್ಕೆ ನಿರ್ಬಂಧ ಹೇರಿದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾ­ಗುತ್ತದೆ. ವೃತ್ತಿಪರ ನೃತ್ಯಗಾರರಿಗೆ ನೃತ್ಯ ಪ್ರದರ್ಶನವೇ ಜೀವನಾಧಾರವಾಗಿದೆ. ಇದನ್ನು ನಿಷೇಧಿಸಿದರೆ ಈ ನೃತ್ಯಗಾರ್ತಿಯರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ವಾದ ಆಲಿಸಿದ ನ್ಯಾಯಪೀಠ, ಮದ್ಯ ಮಾರಾಟ ಮತ್ತು ಪೂರೈಕೆಗೆ ಪರವಾನಗಿ ನೀಡಿದ ಪ್ರದೇಶಗಳಲ್ಲಿ ಕರ್ನಾಟಕ ಅಬಕಾರಿ (ಸಾಮಾನ್ಯ ನಿಬಂಧನೆಗಳು) ನಿಯಮ 11(1)-1967ರ ಅಡಿ 'ಡ್ಯಾನ್ಸ್‌'ಗೆ ನಿಷೇಧ ಹೇರಿರುವುದನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. [ಬೆಂಗಳೂರಿನಲ್ಲಿ 'ಮದ್ಯ'ರಾತ್ರಿ ಅವಧಿ ಒಂದು ವರ್ಷ ವಿಸ್ತರಣೆ]

ಅಲ್ಲದೆ, ಅರ್ಜಿದಾರರು ಡ್ಯಾನ್ಸ್‌ ಬಾರ್‌ ಆರಂಭಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಎರಡು ತಿಂಗಳ ಒಳಗೆ ಪರಿಗಣಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

English summary
The Karnataka high court on Wednesday struck down a provision under Rule-11(1) of the Karnataka Excise Licences (General Conditions) Rules, 1967, prohibiting "dance" as a kind of entertainment on the premises where sale of liquor is permitted. Justice Ashok B Hinchigeri passed the order while disposing of a petition filed by Chef Inn Regency, Bar & Restaurant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X