ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಆರು ಐಎಎಸ್ ಅಧಿಕಾರಿಗಳ ವರ್ಗಾವರ್ಗಿ

|
Google Oneindia Kannada News

ಬೆಂಗಳೂರು, ಆ.28 : ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಸರ್ಕಾರಿ ಭೂ ದಾಖಲೆ ತಿದ್ದಿದ ಆರೋಪದ ಮೇಲೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹುದ್ದೆ ನಿರೀಕ್ಷೆಯಲ್ಲಿದ್ದ ಐಎಎಸ್‌ ಅಧಿಕಾರಿ ಎಂ.ಕೆ.ಅಯ್ಯಪ್ಪ ಅವರನ್ನು ಕಬ್ಬು ಅಭಿವೃದ್ಧಿ ಆಯುಕ್ತರ ಹುದ್ದೆಗೆ ನಿಯೋಜಿಸಲಾಗಿದೆ.

ಸರ್ಕಾರ ಬುಧವಾರ ಈ ಕುರಿತು ಆದೇಶ ಹೊರಡಿಸಿದ್ದು, ಕಬ್ಬು ಅಭಿವೃದ್ಧಿ ಆಯುಕ್ತ ಮತ್ತು ಸಕ್ಕರೆ ನಿರ್ದೇಶಕ ಎಸ್‌.ಎಸ್‌. ಪಟ್ಟಣಶೆಟ್ಟಿ ಅವರನ್ನು ಉಡುಪಿ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಹಾಲಿ ಜಿಲ್ಲಾಧಿಕಾರಿಯಾಗಿದ್ದ ಡಾ.ಮುದ್ದುಮೋಹನ್‌ ಅವರನ್ನು ಕೃಷಿ ಮಾರುಕಟ್ಟೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

Karnataka

ಅಧಿಕಾರಿಗಳ ವರ್ಗಾವಣೆ ಪಟ್ಟಿ ಹೀಗಿದೆ
* ಎಂ.ಕೆ.ಅಯ್ಯಪ್ಪ - ಕಬ್ಬು ಅಭಿವೃದ್ಧಿ ಆಯುಕ್ತ ಮತ್ತು ಸಕ್ಕರೆ ನಿರ್ದೇಶಕ
* ಡಾ.ಮುದ್ದುಮೋಹನ್ - ನಿರ್ದೇಶಕ, ಕೃಷಿ ಮಾರುಕಟ್ಟೆ
* ಎಸ್.ಎಸ್.ಪಟ್ಟಣಶೆಟ್ಟಿ - ಜಿಲ್ಲಾಧಿಕಾರಿ, ಉಡುಪಿ
* ಹೇಮಾಜಿ ನಾಯಕ್ - ಜಿಲ್ಲಾಧಿಕಾರಿ, ಚಿತ್ರದುರ್ಗ [ಶಾಲಿನಿ ರಜನೀಶ್ ಸೇರಿ 23 ಐಎಎಸ್ ಆಫೀಸರ್ಸ್ ವರ್ಗ]
* ವಿ.ಪಿ.ಇಕ್ಕೇರಿ - ಹೆಚ್ಚುವರಿ ಆಯುಕ್ತ (ಕಲ್ಯಾಣ) ಬಿಬಿಎಂಪಿ
* ಕೆ.ಎಸ್.ಮಂಜುನಾಥ್ - ಹೆಚ್ಚುವರಿ ಆಯುಕ್ತ (ಆಡಳಿತ) ಬಿಬಿಎಂಪಿ

English summary
The Karnataka government transferred six IAS officers on Wednesday. S.S.Pattanashetty appointed as Deputy Commissioner of Udupi district and M.K.Aiyappa appointed as Commissioner for Cane Development & Director of Sugar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X