ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಳ ಹೆಚ್ಚಿತು; ವೈದ್ಯರಿನ್ನು ಕ್ಯಾತೆ ತೆಗೆಯುವಂತಿಲ್ಲ!

By Srinath
|
Google Oneindia Kannada News

ಬೆಂಗಳೂರು, ಮೇ 23: ಆರೋಗ್ಯ ಸಚಿವ ಯುಟಿ ಖಾದರ್ ಅವರು ವೈದ್ಯರಿಗೆ ಚಿಕಿತ್ಸೆ ನೀಡಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಕೆಲಸ ಮಾಡಲು ಸರಿಯಾದ ಸಂಬಳ ಸವಲತ್ತು ಇಲ್ಲ. ಹಾಗಾಗಿ ನಾವು ಹಳ್ಳಿಗಳತ್ತ ತಲೆಹಾಕುವುದಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದ ವೈದ್ಯರಿಗೆ ರಾಜ್ಯ ಸರಕಾರ ಸರಿಯಾದ ಉಪಚಾರ ಮಾಡಿದ್ದು, ಸಂಬಳಗಳನ್ನು ದುಪ್ಪಟ್ಟುಗೊಳಿಸಿದೆ. ಹಾಗಾಗಿ ಸರಕಾರಿ ವೈದ್ಯರಿನ್ನು ಕ್ಯಾತೆ ತೆಗೆಯದೆ ಸೀದಾ ಡ್ಯೂಟಿಗೆ ತೆರಳುತ್ತಾರಾ? ಕಾದುನೋಡಬೇಕು.

ಸರಕಾರಿ ಆಸ್ಪತ್ರೆಗಳಿಗೆ ಮಾಮೂಲಿ ವೈದ್ಯರು/ ತಜ್ಞ ವೈದ್ಯರು ಬರುತ್ತಿಲ್ಲ ಎಂದು ಸದಾ ಗೋಳಾಡುತ್ತಿದ್ದ ಖಾದರ್ ಸಾಹೇಬರು ಸಹ ಕೊನೆಗೂ ವೈದ್ಯರ ಪಟ್ಟಿಗೆ ಮಣಿದಂತಿದೆ. ಹಾಗಾಗಿ, ಎಂಬಿಬಿಎಸ್ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ವೈದ್ಯರನ್ನು ಸರಕಾರಿ ಸೇವೆಯತ್ತ ಸೆಳೆಯಲು ಖಾಸಗಿ ಆಸ್ಪತ್ರೆಗಳಿಗೆ ಸರಿ ಸಮನಾಗಿ ಇವರ ಸಂಬಳಗಳನ್ನೂ ದುಪ್ಪಟ್ಟು ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ.

ಹಾಲಿ ಎಂಬಿಬಿಎಸ್ ಪದವಿ ಪಡೆದಿರುವ 2506 ವೈದ್ಯರು ಸರಕಾರಿ ಸೇವೆಯಲ್ಲಿದ್ದಾರೆ. ಅವರೆಲ್ಲಾ ತಹಸೀಲ್ದಾರ್ ಶ್ರೇಣಿಯಲ್ಲಿ 40 ಸಾವಿರ ಪಗಾರ ಪಡೆಯುತ್ತಿದ್ದಾರೆ. ಆದರೀಗ ಈ ವೈದ್ಯರ ಸಂಬಳಗಳನ್ನು ಉಪವಿಭಾಗಾಧಿಕಾರಿ ಶ್ರೇಣಿಗೆ ಅನುಗುಣವಾಗಿ 60 ಸಾವಿರ ರೂ ಗೆ ಹೆಚ್ಚಿಸಲು ತೀರ್ಮಾಣಿಸಲಾಗಿದೆ. (ಸರಕಾರಿ ಸೇವೆಗ ತಜ್ಞ ವೈದ್ಯರು ಬರುತ್ತಿಲ್ಲ)

karnataka-government-doctors-salaries-to-be-doubled-ut-khader

ಇನ್ನು, ಸ್ನಾತಕೋತ್ತರ ಪದವಿ ಪಡೆದಿರುವ 1457 ವಿಶೇಷ ವೈದ್ಯರುಗಳು ಹಾಲಿ ಉಪ ವಿಭಾಗಾಧಿಕಾರಿ ಶ್ರೇಣಿಯಲ್ಲಿ 60 ಸಾವಿರ ರೂ. ವೇತನ ಪಡೆಯುತ್ತಿದ್ದು, ಅದನ್ನು ಹಿರಿಯ ಕೆಎಎಸ್ ಶ್ರೇಣಿಯ ವೇತನದಂತೆ 1.25 ಲಕ್ಷ ರೂ ಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ ಅವರು ಸುದ್ದಿಗೋಷ್ಠಿಯಲ್ಲಿ ಗುರುವಾರ ಪ್ರಕಟಿಸಿದ್ದಾರೆ.

'ಸದ್ಯಕ್ಕೆ ಈ ಪ್ರಸ್ತಾವನೆಯ ಇನ್ನೂ ಆರ್ಥಿಕ ಇಲಾಖೆಗೆ ಸಲ್ಲಿಸಿಲ್ಲ. ಆರ್ಥಿಕ ಇಲಾಖೆಯ ಅಂಗೀಕಾರದನಂತರ ಸಚಿವ ಸಂಪುಟದ ಮುಂದೆ ಇಟ್ಟು ಅನುಮೋದನೆ ಪಡೆಯಲಾಗುವುದು. ಜತೆಗೆ ಇಲಾಖೆಯಲ್ಲಿ ಈಗಾಗಲೇ ಗುತ್ತಿಗೆ ಆಧಾರದ ಮೇಲೆ 3 ವರ್ಷ ಕೆಲಸ ಮಾಡಿರುವ ವೈದ್ಯರನ್ನು ಕಾಯಂಗೊಳಿಸಲಾಗುವುದು' ಎಂದೂ ಖಾದರ್ ಹೇಳಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ಪ್ರಸ್ತುತ 2332 ಎಂಬಿಬಿಎಸ್ ಹಾಗೂ 1703 ಸ್ನಾತಕೋತ್ತರ ವೈದ್ಯರ ಕೊರತೆ ಇದೆ. ಆವುಗಳ ಜೊತೆಗೆ 2603 ಆರೋಗ್ಯ ಮಹಿಳಾ ಸಹಾಯಕಿಯರ, 1491 ನರ್ಸ್‌ಗಳ ಹಾಗು 4011 ಗ್ರೂಪ್ ಡಿ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುತ್ತದೆ.

ಗ್ರೂಪ್ ಡಿ ಹುದ್ದೆಗಳನ್ನು ಇಲಾಖೆಯಿಂದಲೇ ಭರ್ತಿ ಮಾಡಲಾಗುವುದು. ಉಳಿದ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಇನ್ನು ನಾಲ್ಕು ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದಿರುವುದರಿಂದ ನೇಮಕ ಪ್ರಕ್ರಿಯೆ ಆದಷ್ಟು ಬೇಗ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

English summary
In a bid to retain doctors and attract more specialists to government hospitals, the health department is planning a substantial hike in their salaries. Addressing a press conference in Bangalore, Health Minister U T Khader said the department has proposed to increase the salaries of MBBS doctors from present Rs 40,000 to Rs 60,000 per month. Khader said the proposal has been sent to the finance department and will soon be placed before the cabinet for approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X