ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬಾಯಿ ಮುಚ್ಕೊಂಡು ಕುತ್ಕೊಳ್ಳಿ" ಅಂದ್ರು ಈಶ್ವರಪ್ಪ

|
Google Oneindia Kannada News

ಬೆಂಗಳೂರು, ಜು. 23 : ಬುಧವಾರದ ವಿಧಾನಪರಿಷತ್ತಿನ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ ಒಂದು ಮಾತು ಸದನದಲ್ಲಿ ಬಿಸಿ-ಬಿಸಿ ಚರ್ಚೆಗೆ ಕಾರಣವಾಯಿತು. "ಉತ್ತರ ಕೊಡಿ ಅಥವ ಬಾಯಿ ಮುಚ್ಕೊಂಡು ಕುತ್ಕೊಳ್ಳಿ" ಎಂಬ ಈಶ್ವರಪ್ಪ ಮಾತನ್ನು ಕಡತದಿಂದ ತೆಗೆದುಹಾಕುವಂತೆ ಸಭಾಪತಿಗಳು ಸೂಚಿಸಿದರು.

ಮುಂಗಾರು ಅಧಿವೇಶನದ ಬುಧವಾರ ಕಲಾಪ ಆರಂಭವಾದಾಗ ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ರಾಮಕೃಷ್ಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಕಾಲಾವಕಾಶ ಕೇಳಿದರು. ಪ್ರಶ್ನೆ ಗಾರ್ಮೆಂಟ್ಸ್ ನೌಕರರಿಗೆ ಸಂಬಂಧಿಸಿದ್ದು, ಆದ್ದರಿಂದ ಶೀಘ್ರವೇ ಉತ್ತರ ಬೇಕು ಎಂದ ಅವರು ಪಟ್ಟು ಹಿಡಿದರು.

ks eshwarappa

ಎಷ್ಟು ದಿನದಲ್ಲಿ ಉತ್ತರ ನೀಡುತ್ತೀರಿ ಎಂದು ಸರಿಯಾಗಿ ತಿಳಿಸಿ ಎಂದು ರಾಮಕೃಷ್ಣ ಅವರನ್ನು ಒತ್ತಾಯಿಸಿದರು. ಆಗ ಸಚಿವರ ಬೆಂಬಲಕ್ಕೆ ನಿಂತ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಜು.30ರಂದು ಅಧಿವೇಶನ ಮುಗಿಯುವ ಮುನ್ನ ಉತ್ತರ ಕೊಡುತ್ತಾರೆ ಎಂದು ಹೇಳಿದರು. [ಉಪ ಚುನಾವಣೆಗೆ ಒಂದು ವಾರದಲ್ಲಿ ಬಿಜೆಪಿ ಪಟ್ಟಿ]

ಈ ಚರ್ಚೆಯಲ್ಲಿ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ "ಉತ್ತರ ಕೊಡುವುದಾದದರೆ ಕೊಡಿ, ಇಲ್ಲದಿದ್ದರೆ ಬಾಯಿ ಮುಚ್ಕೊಂಡು ಕುತ್ಕೊಳ್ಳಿ" ಎಂದು ಹೇಳಿದರು. ಇದು ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಗದ್ದಲಕ್ಕೆ ಕಾರಣವಾಯಿತು.

ಕೆ.ಎಸ್.ಈಶ್ವರಪ್ಪ ಮೇಲೆ ಕೋಪಗೊಂಡ ಆಡಳಿತ ಪಕ್ಷದ ಸದಸ್ಯರು, ಸಂವಿಧಾನಕ್ಕೆ ವಿರುದ್ಧವಾಗಿ ಈಶ್ವರಪ್ಪ ಅವರು ಮಾತನಾಡುತ್ತಿದ್ದಾರೆ. ಇಂತಹ ಪದ ಪ್ರಯೋಗವನ್ನು ಕಡತದಿಂದ ತೆಗೆದುಹಾಕಬೇಕು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಭಾಪತಿಗಳು ಪದವನ್ನು ತೆಗೆದುಹಾಕುವಂತೆ ಸೂಚಿಸಿದರು.

English summary
27 days Karnataka Assembly Monsoon session July 23, Wednesday highlights. What happened in the Assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X