ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಕಳ: ಅಪಘಾತದಲ್ಲಿ ಡಿಸಿಪಿ ಪತ್ನಿ ದುರಂತ ಸಾವು

By Mahesh
|
Google Oneindia Kannada News

ಕಾರ್ಕಳ, ಏ.2: ಉಡುಪಿ ಜಿಲ್ಲೆ ಕಾರ್ಕಳ ಸಮೀಪ ಬುಧವಾರ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ ಸಾವನ್ನಪ್ಪಿದ್ದು, ಪುತ್ರಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರ್ಕಳ ತಾಲೂಕಿನ ನೀರಬೈಲೂರು ಗ್ರಾಮದ ಸಮೀಪ ಇವರು ಪ್ರಯಾಣಿಸುತ್ತಿದ್ದ ಬೊಲೆರೋ ವಾಹನಕ್ಕೆ ಸರ್ಕಾರಿ ಕೆಎಸ್ಸಾರ್ಟಿಸಿ ಬಸ್ ನಡುವೆ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಪೊಲೀಸ್ ಪೇದೆ ನಟರಾಜ್ ಎಂಬುವರು ಕೂಡ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳನ್ನು ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಬೊಲೆರೋ ವಾಹನ (ಕೆಎ 02-ಜಿ -1106) ದಲ್ಲಿ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದರು. ಕೆಎಸ್ಸಾರ್ಟಿಸಿ ಬಸ್(ಕೆಎ-18-ಎಫ್-577) ಕಾರ್ಕಳದಿಂದ ಚಿಕ್ಕಮಗಳೂರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

Karkala: Bangalore West DCP Labhuram’s Wife , and driver killed, in Road Mishap

ಡಿಸಿಪಿ ಲಾಬೂರಾಮ್ ಪತ್ನಿ ಗಾಯತ್ರಿ ಅವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯಲ್ಲಿ ಸಾವನ್ನಪ್ಪಿದ್ದರೆ, ಪೇದೆ ನಟರಾಜ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರಲ್ಲಿ ಡಿಸಿಪಿ ಲಾಬೂ ರಾಮ್ ಅವರ ಇಬ್ಬರು ಪುತ್ರಿಯರು, ಕಾನ್ಸ್ ಟೇಬಲ್ ರಮೇಶ್ ದೇಶಪಾಂಡೆ, ರಮೇಶ್ ದೇಸಾಯಿ ಸೇರಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಡಿಸಿಪಿ ಲಾಬೂರಾಮ್ ಅವರ ಕುಟುಂಬ ಅಲ್ಲಿಂದ ಉಡುಪಿಗೆ ತೆರಳುತ್ತಿತ್ತು. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಗಾಯತ್ರಿ(35) ಅವರು ಮಕ್ಕಳಾದ ಸುನೀತಾ ಹಾಗೂ ಹರೀತಾ ಹಾಗೂ ಪತಿ ಲಾಬೂರಾಮ್ ಅವರನ್ನು ಅಗಲಿದ್ದಾರೆ.

ಬೆಂಗಳೂರಿನ ಪಶ್ಚಿಮ ವಲಯ ಡಿಸಿಪಿ(ಕ್ರೈಂ) ಆಗಿರುವ ರಾಜಸ್ಥಾನ ಮೂಲದ ಲಾಬೂರಾಮ್ ಅವರು ಈ ಮುಂಚೆ ಮಾರ್ಚ್ 2011 ರಿಂದ ಜನವರಿ 2012ರ ತನಕ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಆಗಿ ಕಾರ್ಯ ನಿರ್ವಹಿಸಿದ್ದರು. ನಂತರ ಕಾರ್ಕಳದ ಎಸಿಪಿಯಾಗಿ ಕೂಡಾ ಕರ್ತವ್ಯ ನಿರ್ವಹಿಸಿದ್ದರು.

English summary
A head-on- collision between a KSRTC bus and a police jeep carrying the family of DCP Laburam, near Neerebailur in Karkala taluk has claimed the life of two persons including the wife of the DCP on Wednesday, April 2. Six other passengers in the car were injured in the mishap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X