ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದ 'ಗುರು' ಪೂರ್ಣಿಮೆಗೆ ಕನ್ನಡ ಸೇನೆ ಅಡ್ಡಿ

By Mahesh
|
Google Oneindia Kannada News

ರಾಮನಗರ, ಜು.12: ಬಿಡದಿಯ ನಿತ್ಯಾನಂದ ಆಶ್ರಮದಲ್ಲಿ ನಡೆದಿರುವ 'ಗುರು ಪೂರ್ಣಿಮಾ' ಕಾರ್ಯಕ್ರಮ ವಿರೋಧಿಸಿ ಕನ್ನಡ ಕಾರ್ಯಕರ್ತರು ಅಡ್ಡಿಪಡಿಸಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ.

'ನಿತ್ಯಾನಂದ ಆಶ್ರಮದಲ್ಲಿ ನಿರಂತರವಾಗಿ ತಮಿಳರನ್ನು ಓಲೈಕೆ ಮಾಡಿ ಕನ್ನಡಿಗರನ್ನು ಕಡೆಗಣಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ನಡೆಸುವ ಯಾವುದೇ ಧಾರ್ಮಿಕ ವಿಧಿ ವಿಧಾನಗಳು ಕನ್ನಡ ಧಾರ್ಮಿಕ ಪರಂಪರೆಗೆ ಬದ್ಧವಾಗಿಲ್ಲ, ನಮ್ಮ ಸಂಸ್ಕೃತಿಗೆ ಬೆಲೆ ಕೊಡದ ನಿತ್ಯಾನಂದ ಹಾಗೂ ಆತನ ಬೆಂಬಲಿಗರನ್ನು ಬಹಿಷ್ಕರಿಸಬೇಕು' ಎಂದು ಆರೋಪಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಶನಿವಾರ ಬೆಳಗ್ಗೆ ಆಶ್ರಮದ ಮುಂಭಾಗ ಪ್ರತಿಭಟನೆ ನಡೆಸಿದರು. ಮುಂಜಾನೆ ಸೇನೆಯ ನೂರಾರು ಕಾರ್ಯಕರ್ತರು ಆಶ್ರಮದ ಮುಂದೆ ಜಮಾಯಿಸಿ ಆಶ್ರಮದಲ್ಲಿ ವಿಶೇಷ ಪೂಜೆ ಮಾಡಬಾರದು ಎಂದು ಆಶ್ರಮದೊಳಗೆ ನುಗ್ಗಲು ಯತ್ನಿಸಿದರು.

Kannada activists protest against Bidadi Nithyananda Ashram

ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ಆಶ್ರಮಕ್ಕೆ ತೆಗೆದುಕೊಂಡು ಹೋಗಲಾಗುತ್ತಿದ್ದ ಫ್ಲೆಕ್ಸ್ ಮುಂತಾದ ಪ್ರಚಾರ ಸಾಮಾಗ್ರಿಗಳನ್ನು ಕರ್ನಾಟಕ ಚಳವಳಿ ವೇದಿಕೆಯ ಪದಾಧಿಕಾರಿಗಳು ವಶಪಡಿಸಿಕೊಂಡು ಸುಟ್ಟು ಹಾಕಿದರು.[ನಾನು ಲಿಂಗಾಯತನೆಂದ ನಿತ್ಯಾನಂದ ಸ್ವಾಮಿ]

ಆದರೆ, ಕನ್ನಡ ಕಾರ್ಯಕರ್ತರ ದಾಳಿಯ ಸುಳಿಫ್ಲೆಕ್ಸ್ ವು ಪಡೆದುಕೊಂಡಿದ್ದ ನಿತ್ಯಾನಂದ ಆಶ್ರಮವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ರಕ್ಷಣೆ ಕೋರಿದ್ದರು. ಹೀಗಾಗಿ ಆಶ್ರಮಕ್ಕೆ ನುಗ್ಗಲು ಯತ್ನಿಸಿದ ಕನ್ನಡ ಕಾರ್ಯಕರ್ತರು ಹಾಗೂ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಮಧುಗೌಡರನ್ನು ಬಂಧಿಸಲಾಗಿದೆ.

'ಆಶ್ರಮದಲ್ಲಿ ಕನ್ನಡಿಗರನ್ನು ಕಡೆಗಣಿಸುವ ಕಾರ್ಯಕ್ರಮಗಳು ನಡೆಯಬಾರದು. ಒಂದು ವೇಳೆ ಅಂತಹ ಕಾರ್ಯಕ್ರಮಗಳು ನಡೆದರೆ ಉಗ್ರ ಹೋರಾಟ ಮಾಡಲಾಗುತ್ತದೆ' ಎಂದು ಪ್ರತಿಭಟನೆಕಾರರು ಎಚ್ಚರಿಸಿದ್ದಾರೆ.

ಈ ವೇಳೆ ಆಶ್ರಮದ ಮುಂಭಾಗ ಕಾರ್ಯಕರ್ತರು ಟೈಯರ್‌ಗಳಿಗೆ ಬೆಂಕಿ ಹಚ್ಚಿ ನಿತ್ಯಾನಂದ ಸ್ವಾಮೀಜಿಯ ವಿರುದ್ಧ ಘೋಷಣೆ ಕೂಗಿದರು. ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿಲ್ಲ.

English summary
Kannada activists belonging to Karnataka Nava Nirmana Sene today protested over performing Guru Poornima rituals at Bidadi Nithyananda Ashram. Nithyananda's Pooja, rituals are following anti Kannada approach and neglecting the locals alleged activists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X