ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾ ಗಾಂಧಿ ಹುಟ್ಟುಹಬ್ಬದಂದು ಚುಕುಬುಕು ರೈಲು

By Mahesh
|
Google Oneindia Kannada News

ಚಿಕ್ಕಮಗಳೂರು, ಅ.18: ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಡೂರು- ಚಿಕ್ಕಮಗಳೂರು ರೇಲ್ವೆ ಸೇವೆ ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಜನ್ಮ ದಿನಾಚರಣೆ (ನ.19) ದಿನ ಈ ನೂತನ ರೇಲ್ವೆ ಮಾರ್ಗವನ್ನು ಉದ್ಘಾಟಿಸಲು ಉತ್ಸುಕವಾಗಿದೆ.

ನೈರುತ್ಯ ರೇಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ಗುರುವಾರದಂದು ಕಡೂರು- ಚಿಕ್ಕಮಗಳೂರು ರೇಲ್ವೆ ಹಳಿ ಹಾಗೂ ವೇಗಮಿತಿ ಯಂತ್ರದ ಪರಿಶೀಲನೆ ನಡೆಸಿ ಎಲ್ಲವೂ ಸರಿಯಾಗಿದೆ ಎಂದು ಘೋಷಿಸಿ, ಮುಹೂರ್ತ ಫಿಕ್ಸ್ ಮಾಡಿಕೊಳ್ಳಿ ಎಂದಿದ್ದಾರೆ. ಕಡೂರು- ಚಿಕ್ಕಮಗಳೂರು ರೇಲ್ವೆ ಮಾರ್ಗದ 45 ಕಿ.ಮೀ. ಉದ್ದದ ಹಳಿಗಳನ್ನು ಅಧಿಕಾರಿಗಳು ಶುಕ್ರವಾರ ಸಹ ಮತ್ತೊಮ್ಮೆ ಹಳಿ ಪರಿಶೀಲನೆ ನಡೆಸಿದ್ದಾರೆ.

ಹಳಿ ಹಾಕುವ ಕೆಲಸ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಸರಕು ಸಾಗಾಣಿಕೆಯ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ. ಹೆಚ್ಚು ಬೋಗಿಗಳನ್ನು ಒಳಗೊಂಡ ರೈಲು ಈ ಮಾರ್ಗದಲ್ಲಿ ಗುರುವಾರ ಸಂಚರಿಸಿತು. ಇದರ ಜೊತೆಗೆ, ಹಳಿ ತಪಾಸಣಾ ಕಾರ್ಯ ನಡೆಯುತ್ತಿದ್ದು, ಈ ಕೆಲಸ ಮುಗಿದ ಬಳಿಕ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳ ತಂಡ ಕೇಂದ್ರ ಸರ್ಕಾರಕ್ಕೆ ವರದಿ ನೀಡುತ್ತದೆ. ಆ ನಂತರ ನೂತನ ರೈಲ್ವೆ ಸಂಪರ್ಕದ ಉದ್ಘಾಟನಾ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಲಾಗುತ್ತದೆ.

Kadur Chikmagalur Train Service on Indira Gandhi Birthday

ಇಂದಿರಾ ಗಾಂಧಿ ಕೊಡುಗೆ: 1978ರಲ್ಲಿ ಇಂದಿರಾಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಸಂದರ್ಭದಲ್ಲಿ ಕಡೂರಿನಿಂದ ಚಿಕ್ಕಮಗಳೂರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಈ ಯೋಜನೆಗೆ ಅನುಮೋದನೆ ಸಹ ಸಿಕ್ಕಿತ್ತು. ಈ ಕಾಮಗಾರಿಗೆ ಎಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿಯಾಗಿದ್ದಾಗ ಶಂಕುಸ್ಥಾಪನೆ ನೆರವೇರಿಸಿದ್ದರು.

ಆ ನಂತರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಈ ಕಾಮಗಾರಿಗೆ ಕೇಂದ್ರ ಸರ್ಕಾರ ಹಣ ನೀಡಲಿಲ್ಲ. ಪ್ರತಿ ವರ್ಷ 10 ರಿಂದ 20 ಕೋಟಿ ರುಪಾಯಿ ಮಾತ್ರ ವಿವಿಧ ಹಂತಗಳಲ್ಲಿ ಬಿಡುಗಡೆಯಾಗುತ್ತಾ ಬಂದಿದ್ದು, ನಂತರ ಶೇ 50 ರಷ್ಟು ಹಣ ಹೂಡಿಕೆಗೆ ಮುಂದಾಯಿತು.

ರಾಮನಹಳ್ಳಿ, ಬಿಸಲೆಹಳ್ಳಿ, ಸಖರಾಯಪಟ್ಟಣದಲ್ಲಿ ರೈಲ್ವೇ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲಾಡಳಿತ ಅಗತ್ಯ ಭೂಮಿಯನ್ನು ಸರ್ಕಾರ ಒದಗಿಸಿತ್ತು. ಆದರೆ, ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿತ್ತು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಕಾಮಗಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 50: 50 ಅನುಪಾತದಲ್ಲಿ ಹಣ ಬಿಡುಗಡೆ ಮಾಡಿದ್ದರಿಂದ ಕಾಮಗಾರಿ ಚುರುಕುಗೊಂಡಿತು. ಮುಂದಿನ ವರ್ಷದಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಈ ಮಾರ್ಗವನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಉದ್ಘಾಟನಾ ಸಮಾರಂಭದ ಬಗ್ಗೆ ಮಾತನಾಡಿದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಕೆ. ಜಯಪ್ರಕಾಶ್ ಹೆಗ್ಡೆ, ಚಿಕ್ಕಮಗಳೂರಿಗೆ ಮೊದಲಿಗೆ ಗೂಡ್ಸ್ ಗಾಡಿಗಳನ್ನು ಮಾತ್ರ ಬಿಡಲಾಗುತ್ತೆ. ನಂತರದ ದಿನಗಳಲ್ಲಿ ಕಡೂರಿನಿಂದ ಪ್ಯಾಸೆಂಜರ್ ಟ್ರೈನ್ ಹೊರಡಲಿದೆ. ಚಿಕ್ಕಮಗಳೂರಿನಿಂದ ಮುಂದಕ್ಕೆ ಹಾಸನಕ್ಕೆ ಸಂಪರ್ಕ ಕಲ್ಪಿಸುವವರೆಗೂ ಕಡೂರಿನಿಂದ ದಿನಕ್ಕೆ ಯಾವುದಾದರೂ ಒಂದು ಟ್ರೈನ್ ಮಾತ್ರ ಸಂಚಾರ ನಡೆಸಲಿದೆ. ರೈಲಿನ ವೇಳಾಪಟ್ಟಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದರು.

English summary
The congress government is keen to start Kadur-Chikmagalur railway service on former PM Indira Gandhi's birthday(Nov.19) hinted MP K Jayaprakash Hegde. Indian Railway Officials recently checked the railway line and preparing for launch of service. The railway line likely to get extended to Hassan soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X