ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್: ಮೇಲ್ಮನೆಗೆ ಶರವಣ, ರಾಜ್ಯಸಭೆಗೆ ಕುಪೇಂದ್ರ ?

By Srinath
|
Google Oneindia Kannada News

ಬೆಂಗಳೂರು, ಮೇ 31: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೋಲಿನ ಪರಾಮರ್ಶೆಯಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿವೆ. ಜೆಡಿಎಸ್ ಸಹ ಪಕ್ಷಕ್ಕೆ ಉಂಟಾದ ತೀವ್ರ ಹಿನ್ನಡೆ ಕುರಿತು ಶುಕ್ರವಾರ ಸಭೆ ಸೇರಿ ಸುದೀರ್ಘ ಚರ್ಚೆ ನಡೆಸಿದೆ.

ನಗರದ ಖಾಸಗಿ ಹೋಟೆಲಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮುಖಂಡರು ಸಾಮೂಹಿಕ ಚಿಂತನೆ ನಡೆಸಿದರು.

ಚುನಾವಣೆಯಲ್ಲಿ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಶಾಸಕರು ಮುಕ್ತ ಚರ್ಚೆ ನಡೆಸಿದರು. ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ವರಿಷ್ಠರಿ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಶಾಸಕರ ಅಸಮಾಧಾನಕ್ಕೆ ಸಮಾಧಾನದಿಂದಲೇ ಉತ್ತರಿಸಿದ ದೇವೇಗೌಡರು ನಮ್ಮಿಂದ ಕೆಲವು ತಪ್ಪುಗಳು ಆಗಿರುವುದು ನಿಜ. ಈ ಸೋಲು ನಮಗೆ ಮೊದಲಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಸಮಾಧಾನ ಪಡಿಸಿದರು ಎಂದು ಪಕ್ಷದ ಮೂಲಗಳು ಹೇಳಿವೆ.

jds-probables-ta-sharavana-for-mlc-kupendra-reddy-for-rajya-sabha

ಜೆಡಿಎಸ್ ಪಕ್ಷದ ಪುನರ್ ಸಂಘಟನೆಗೆ ಗೌಡರ ಕುಟುಂಬದವರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ಕುರಿತು 15 ದಿನಗಳೊಳಗಾಗಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ವರಿಷ್ಠರು ಶಾಸಕರಿಗೆ ಭರವಡೆ ನೀಡಿದ್ದಾರೆ ಎನ್ನಲಾಗಿದೆ.

ಮೇಲ್ಮನೆಗೆ ಟಿಎ ಶರವಣ ಸ್ಪರ್ಧೆ
ಈ ಮಧ್ಯೆ ವಿಧಾನಪರಿಷತ್ತಿಗೆ ಹಾಲಿ ಸದಸ್ಯ ಕೆವಿ ನಾರಾಯಣ ಸ್ವಾಮಿ, ನಿರ್ಮಾಪಕ ಮನೋಹರ್ ಹಾಗೂ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಮಾಲೀಕ ಶರವಣ ಅವರ ಪೈಕಿ ಇಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ.

ರಾಜ್ಯಸಭೆಗೆ ಕುಪೇಂದ್ರ ರೆಡ್ಡಿ: (ಮೈತ್ರಿಗೆ ಮೊದಲೇ ಜೆಡಿಎಸ್ ಮುನಿಸು)
ವಿಧಾನಸಭೆಯಲ್ಲಿ 40 ಸದಸ್ಯರ ಬೆಂಬಲವನ್ನು ಹೊಂದಿರುವ ಜೆಡಿಎಸ್, ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಇನ್ನೂ 6 ಸದಸ್ಯರ ಬೆಂಬಲ ಬೇಕಾಗುತ್ತದೆ. ಹಾಗಾಗಿ ಕಾಮಗ್ರೆಸ್ ನಾಯಕರ ಜತೆ ಉತ್ತಮ ಒಡನಾಟ ಹೊಂದಿರುವ ಕುಪೇಂದ್ರ ರೆಡ್ಡಿ ಅವರನ್ನು ರಾಜ್ಯಸಭೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ.

English summary
JDS probables for Vidhana Parishad nomination TA Sharavana and Kupendra Reddy for Rajya Sabha. JDS which met yesterday in Bangalore in the leadership of ex PM HD Deve Gowda has decided so.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X