ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್‌ಗೆ ಬೆಣ್ಣೆ, ಬಿಎಸ್‌ವೈಗೆ ದೊಣ್ಣೆ; ಇದ್ಯಾವ ನ್ಯಾಯ

By * ಮಹಾಂತ ವಕ್ಕುಂದ
|
Google Oneindia Kannada News

"ನಾವು ಬಸವಣ್ಣನ ಅನುಯಾಯಿಗಳು. ನಮಗೆ ಮೋಸ ಮಾಡಿದವರನ್ನ ನನ್ನ ನಾಡಿನ ಜನ ಎಂದು ಕ್ಷಮಿಸೋದಿಲ್ಲ" ಎಂಬ ಒಂದೇ ಒಂದು ಉವಾಚ್ಯ ಅಂದು ಕರ್ನಾಟಕದ ಹಾಗೂ ದಕ್ಷಿಣ ಭಾರತದ ರಾಜಕೀಯ ವಿಧ್ಯಮಾನದಲ್ಲಿ ಸಂಚಲನ ಮೂಡಿಸಿ, ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಸ್ಥಾಪನೆಗೆ ನಾಂದಿಯಾಗಿತ್ತು.

ಅಂದು ಜೆಡಿಎಸ್ ಹಾಗೂ ಕುಮಾರಸ್ವಾಮಿಯವರ ಕುತಂತ್ರಕ್ಕೆ ಬಲಿಯಾಗಿ ಅಧಿಕಾರ ಕಳೆದುಕೊಂಡು ಅತಂತ್ರರಾಗಿದ್ದ ಯಡಿಯೂರಪ್ಪನವರು ಹೇಳಿದ ಆ ಒಂದು ಮಾತು ಸಾಕಿತ್ತು 2008 ರ ವಿಧಾನ ಸಭೆಯಲ್ಲಿ ಬಿಜೆಪಿ ಅದ್ವಿತೀಯ ಸಾಧನೆ ಮಾಡಿ ಕರ್ನಾಟಕದಲ್ಲಿ ಹಾಗೂ ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು. ಅಂದಿನವರೆಗೆ ಕರ್ನಾಟಕವನ್ನ ಸ್ವಾತಂತ್ರ್ಯಾನಂತರ ಕೇವಲ ಕಾಂಗ್ರೆಸ್ ಹಾಗೂ ಜೆಡಿ(ಎಸ್) ಪಕ್ಷಗಳೇ ಆಳಿದ್ದವು.[ಯಡಿಯೂರಪ್ಪ ಕರ್ನಾಟಕ ಬಿಜೆಪಿ ಅಧ್ಯಕ್ಷ?]

ಒಂದೊಮ್ಮೆಯೂ ಬಿಜೆಪಿಗೆ ಅಧಿಕಾರ ನೀಡದೆ ಅವೆರಡೆ ಪಕ್ಷಗಳು ತಮ್ಮ ಪ್ರಭುತ್ವ ಸ್ಥಾಪಿಸಿ ಮೆರೆಯುತ್ತಿದ್ದಾಗ ಬಿ.ಎಸ್. ಯಡಿಯೂರಪ್ಪನವರಂತಹ ಒಂದು ಶಕ್ತಿ ಕರ್ನಾಟಕಕ್ಕೆಹಾಗೂ ದಕ್ಷಿಣ ಭಾರತಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬೇಕಿತ್ತು, ಅಂತೆಯೇ ಆ ಸಾಧನೆಗೈದ ಯಡಿಯೂರಪ್ಪನವರನ್ನ ಆಗಿನ ಭಾಜಪದ ಬಂಧು ಮಿತ್ರರೆಲ್ಲ ಹೊಗಳಿ ಕೊಂಡಾದಿದ್ದೆನೊ, ಮೆರೆಸಿ ಅಟ್ಟಕ್ಕೆರಿಸಿದ್ದೆನೊ.

ಆದರೆ, ಈಗ ಬಿಜೆಪಿ ಮರಳಿದ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ? ಹಲವು ಆರೋಪ ಹೊತ್ತಿರುವ ಮೋದಿ ಆಪ್ತ ಅಮಿತ್ ಶಾ ಗೊಂದು ನ್ಯಾಯ, ಬಿಎಸ್ ವೈಗೆ ಒಂದು ನ್ಯಾಯ ಏಕೆ? ಮುಂದೆ ಓದಿ...

ಸಾಮ್ರಾಜ್ಯ ಕಟ್ಟಿದ ಬಿಎಸ್ವೈಗೆ ಅದೃಷ್ಟವಿರಲಿಲ್ಲ

ಸಾಮ್ರಾಜ್ಯ ಕಟ್ಟಿದ ಬಿಎಸ್ವೈಗೆ ಅದೃಷ್ಟವಿರಲಿಲ್ಲ

ಇಂತಹ ಒಂದು ಅಭೂತಪೂರ್ವ ಸಾಮ್ರಾಜ್ಯ ಕಟ್ಟಿದ ಬಿಎಸ್‌ವೈಗೆ ಎಲ್ಲಿಲ್ಲದ ಕೀರ್ತಿ ಹೆಗ್ಗಳಿಕೆ ಹರಿದು ಬಂದರೂ ಹಿಂದಿನಿಂದಲೇ ಕಾಡುವ ಪೀಡೆಗಳೂ ಬೆನ್ನು ಬಿದ್ದವು. ಗಣಿ ಧಣಿಗಳನ್ನು ಸಂಪುಟಕ್ಕೆ ಸೇರಿಸಿಕೊಂಡು ಅಧಿಕಾರ ನಡೆಸುತ್ತ ಗಣಿ ಅಕ್ರಮದೆದುರು ದನಿ ಎತ್ತಿದ ಬಿಎಸ್‌ವೈಗೆ ಅದೇ ಗಣಿ ಉರುಳಾಯಿತು. ನೆಮ್ಮದಿಯ ಅಧಿಕಾರ ನಡೆಸುವ ಭಾಗ್ಯವಾಗಲಿ, ಪದವಿಯ ಸುಖ ಅನುಭವಿಸುವ ಪುಣ್ಯವಾಗಲಿ ಅವರಿಗೆ ಲಭಿಸಲಿಲ್ಲ.

ಸ್ವಜನ ಪಕ್ಷಪಾತದ ಪೊಳ್ಳು ಕಾರಣ ಉರುಳಾಯ್ತು

ಸ್ವಜನ ಪಕ್ಷಪಾತದ ಪೊಳ್ಳು ಕಾರಣ ಉರುಳಾಯ್ತು

ಬದಲಿಗೆ ಮುಖ್ಯಮಂತ್ರಿಯಾಗಿ ಸ್ವಜನ ಪಕ್ಷಪಾತ ಮಾಡಿದರು ಎಂಬ ಪೊಳ್ಳು ಕಾರಣಗಳನ್ನು ನೀಡಿ ಅವರನ್ನು 23 ದಿನಗಳ ಮಟ್ಟಿಗೆ ಜೈಲಿಗಟ್ಟಿ ಪ್ರತಿ ಪಕ್ಷಗಳು ಮಹಾನ್ ಸಾಧನೆಗೈದಂತೆ ಮೆರೆದವು. ಇಡಿ ಪಕ್ಷವನ್ನೇ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ತಂದ ದೊರೆ ಪಕ್ಷದೊಳಗಿನ ಹಾಗೂ ಪಕ್ಷದ ಹೊರಗಿನವರ ಕುತಂತ್ರಕ್ಕೆ ಬಲಿಯಾಗಿ ನಲುಗಿ ಹೋಗುವಂತಾಗಿತ್ತು.

ಬಿಎಸ್ ವೈಗೆ ಕ್ಲೀನ್ ಚಿಟ್ ನೀಡಿದರೂ

ಬಿಎಸ್ ವೈಗೆ ಕ್ಲೀನ್ ಚಿಟ್ ನೀಡಿದರೂ

ಆದರೆ ಇವೆಲ್ಲವೂ ಹುಸಿ ಎಂಬ ಕರ್ನಾಟಕದ ಉಚ್ಚ ನ್ಯಾಯಾಲಯದ ಕ್ಲೀನ್ ಚಿಟ್, ಸಿಬಿಐ ವಿಚಾರಣೆಯ ಸ್ಥಗಿತ, ಸರ್ವೋಚ್ಚ ನ್ಯಾಯಾಲಯದ ಸ್ಟೇ ಮುಂದೊಂದು ದಿನ ಯಡಿಯೂರಪ್ಪನವರು ನಿರಪರಾಧಿ ಎಂದು ನ್ಯಾಯ ಬದ್ಧವಾಗಿ ಸಾರಿ ಸಾರಿ ಹೇಳಿದವು. ಆದರೆ ಆಂತರಿಕವಾಗಿ ಪಕ್ಷದವರೇ ಈ ವಸ್ತು ಸ್ಥಿತಿಯ ಸದಾವಕಾಶ ಬಳಸಿಕೊಂಡು ಪಕ್ಷದಿಂದ ಬಂದಿದ್ದು ಬಾಚಿಕೊಳ್ಳುವುದಕ್ಕೆ ಮುಂದಾದರು. ಕಾಲೆಳೆದರು, ಕಿತ್ತಾಡಿದರು.

ಬಿಜೆಪಿ ಗೆಲ್ಲಲು ಮತ್ತೆ ಬಿಎಸ್ ವೈ ಬೇಕಾಯಿತು

ಬಿಜೆಪಿ ಗೆಲ್ಲಲು ಮತ್ತೆ ಬಿಎಸ್ ವೈ ಬೇಕಾಯಿತು

ಅಂತಹ ದಾಹಿಗಳಿಗೆ ಪಾಠ ಕಲಿಸಲು ಯಡಿಯೂರಪ್ಪನವರು ಪಕ್ಷವನ್ನೇ ಬಿಡಬೇಕಾಯಿತು. ಅಲ್ಲದೇ ಮುಂದಿನ ವಿಧಾನಸಭೆ ಚುನಾವಣೆಯಲ್ಲೇ ಕರ್ನಾಟಕದಲ್ಲಿ ಭಾಜಪವನ್ನು ಹೀನಾಯವಾಗಿ ಸೋಲಿಸಿ ತಮ್ಮ ಶಕ್ತಿಯ ಪರಿಚಯವನ್ನು ತಮ್ಮವರಿಗೆ ಇನ್ನೊಮ್ಮೆ ನೀಡಬೇಕಾಯಿತು.

ಅದಾದ ಮೇಲೆ ನಡೆದ ಮುಂದಿನ ಭಾಗ ಎಲ್ಲರಿಗೂ ಗೊತ್ತಿರುವುದೇ. ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗದ್ದಿಗೆಗೆರಿಸಲು ನನ್ನ ಕೈಲಾದ ಅಳಿಲು ಸೇವೆ ಮಾಡಲು ಮತ್ತೆ ಮಾತೃ ಪಕ್ಷಕ್ಕೆ ಮರಳಿದ ಬಿಎಸ್‌ವೈ ಇಂದಿನ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರವಿರುವ ಕರ್ನಾಟಕದಲ್ಲಿ 28ರ ಪೈಕಿ 17 ಭಾಜಪ ಸೀಟುಗಳು ಗೆಲ್ಲಲು ಕಾರಣರಾದರು.

ಬಿಎಸ್ವೈರಿಂದ ಅಮಿತ್ ಶಾ ಸರಿಸಮಾನವಾದ ಸಾಧನೆ

ಬಿಎಸ್ವೈರಿಂದ ಅಮಿತ್ ಶಾ ಸರಿಸಮಾನವಾದ ಸಾಧನೆ

ವಿಚಾರಶೀಲ ಹಾಗು ಪ್ರಜ್ಞಾವಂತ ಪ್ರಜೆಗಳ ಪ್ರಭುತ್ವ ಹೊಂದಿರುವ ನಮ್ಮ ಕರ್ನಾಟಕದಂತಹ ರಾಜ್ಯದಲ್ಲಿ ಇಂತಹ ದೊಡ್ಡ ಸಾಧನೆ ನಿಜವಾಗಲು ಒಂದು ದೊಡ್ಡ ಸಾಧನೆಯೇ. ಆ ಸಾಧನೆ ಉತ್ತರ ಪ್ರದೇಶದಲ್ಲಿ ಅಮಿತ್ ಷಾ ಮಾಡಿದ ಸಾಧನೆಗಾಗಲಿ, ರಾಜಸ್ಥಾನದಲ್ಲಿ ವಸುಂಧರಾ ರಾಜೆ ಮಾಡಿದ ಸಾಧನೆಯಾಗಲಿ ಅಥವಾ ಇನ್ನೊಬ್ಬ ಯಾವುದೇ ಭಾಜಪದ ಮುಖಂಡನಾಗಲಿ ಮಾಡಿದ ಸಾಧನೆಗೆ ಕಮ್ಮಿ ಏನಲ್ಲ.

ಹೀಗಿರುವಾಗ ಇಂದಿನ ಎನ್‌ಡಿಎ ಸರ್ಕಾರ (ಮೋದಿ ಸರ್ಕಾರ) ಯಡಿಯೂರಪ್ಪನವರ ವಿಷಯದಲ್ಲಿ ಏಕೆ ತಾರತಮ್ಯ ಮಾಡುತ್ತಿದೆಯೋ ತಿಳಿಯದು.
ಬಿಎಸ್‌ವೈ ಅಭಿಮಾನಿಗಳಿಗೆಲ್ಲ ನೋವಾಗುತ್ತದೆ

ಬಿಎಸ್‌ವೈ ಅಭಿಮಾನಿಗಳಿಗೆಲ್ಲ ನೋವಾಗುತ್ತದೆ

ಯಡಿಯೂರಪ್ಪನವರ ಮೇಲಿನ ಅಪವಾಧ, ಆರೋಪಗಳೆಲ್ಲವೂ ಮಣ್ಣಾಗಿ ಹೋದರು ಇಂದಿಗೂ ಅವರಿಗೆ ಅಧಿಕಾರ ಭಾಗ್ಯ ಸಿಗುತ್ತಿಲ್ಲ. ಭಾಜಪದ ಕೇಂದ್ರ ಸರ್ಕಾರ ಆಡಳಿತಕ್ಕೆ ಬರಲಿ, ಮೋದಿ ಪ್ರಧಾನಿಯಾಗಲಿ ಎಂಬ ಕನಸಿನ ಕೂಸಿಗೆ ಹಾಲುಣಿಸಿ ಬೆಳೆಸಿದ ನಮ್ಮ ನಾಯಕನಿಗೆ ಇಂದು ಇರುವ ಸ್ಥಿತಿ ಗತಿ ನೋಡಿದರೆ ನಿಜಕ್ಕೂ ಅವರ ಅಭಿಮಾನಿಗಳಿಗೆಲ್ಲ ನೋವಾಗುತ್ತದೆ. ಅವರು ಕಳಂಕಿತರು, ಜೈಲಿಗೆ ಹೋದವರು ಎಂಬ ಕಾರಣ ಕೊಡುವವರು ಮೊದಲು ಅವರು ಯಾಕೆ ಜೈಲಿಗೆ ಹೋದದ್ದು ಎಂಬುದನ್ನು ಅರಿಯಬೇಕು.

ಜೈಲಿಗೆ ಹೋಗುವುದೇ ಮಹಾಪರಾಧವಾದರೆ

ಜೈಲಿಗೆ ಹೋಗುವುದೇ ಮಹಾಪರಾಧವಾದರೆ

ಜೈಲಿಗೆ ಹೋಗುವುದೇ ಮಹಾಪರಾಧವಾದರೆ ಯಡಿಯೂರಪ್ಪನವರನ್ನು ಮೊದಲು ಮುಖ್ಯ ಮಂತ್ರಿಯನ್ನಾಗಾದರು ಏಕೆ ಮಾಡಬೇಕಿತ್ತು ? ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವ ಮೊದಲು ಭಾರತದ ತುರ್ತು ಪರಿಸ್ಥಿತಿ ಉಂಟಾದಾಗಲೂ ಇಂದಿರಾ ಗಾಂಧಿಯವರ ಸರ್ಕಾರವಿದ್ದ ಸಂಧರ್ಭದಲ್ಲಿ ಜೈಲಿಗೆ ಹೋಗಿದ್ದರು, ಅದೂ 2 ಸಾರಿ. ಆಗ ಜೈಲಿಗೆ ಹೋಗಿದ್ದರೆ ಮುಖ್ಯ ಮಂತ್ರಿಯಾಗಬಹುದು ಈಗ ಕೋರ್ಟು ನಿರ್ದೋಷಿ ಎಂದು ಹೇಳಿದರೂ ಅಧಿಕಾರ ನೀಡಬಾರದೆಂಬ ಹೊಸ ಕಾನೂನೇನಾದರು ನಮ್ಮ ಹೊಸ ಎನ್‌ಡಿಎ ಸರ್ಕಾರ ತಂದಿದೆಯೇ ?

ಯಡಿಯೂರಪ್ಪನವರಿಗೆ ಅವಕಾಶ ಯಾಕಿಲ್ಲ ?

ಯಡಿಯೂರಪ್ಪನವರಿಗೆ ಅವಕಾಶ ಯಾಕಿಲ್ಲ ?

ನಕಲಿ ಏನ್ ಕೌಂಟರ್ ಕೇಸಲ್ಲಿ ಬಂಧಿಯಾದ ಹಾಗೂ ಸುಮಾರು 2 ವರ್ಷಗಳ ಕಾಲ ತಮ್ಮ ರಾಜ್ಯದಿಂದ ಗಡಿ ಪಾರಾದ ಅಮಿತ್ ಷಾಗಾಗಲಿ, ಸುಮಾರು ಹಗರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ನಿತಿನ್ ಗಡ್ಕರಿಗಾಗಲಿ, ಉಮಾ ಭಾರತಿಯವರಿಗಾಗಲಿ ಅಥವಾ ಸ್ವತಃ ಕೋರ್ಟು ಕಚೇರಿ ಸುತ್ತಿದ ಪ್ರಧಾನಿ ನರೇಂದ್ರ ಮೋದಿಯವರಿಗಾಗಲಿ ಕೇಂದ್ರದಲ್ಲಿ ಅಧಿಕಾರ ಮಾಡುವ ಅವಕಾಶವಿರುವಾಗ ನಮ್ಮ ಯಡಿಯೂರಪ್ಪನವರಿಗೆ ಯಾಕಿಲ್ಲ ? ಇವರಿಗೆಲ್ಲರಿಗೂ ಅಂಟದ ಕಳಂಕ ಯಡಿಯೂರಪ್ಪನವರಿಗೆ ಅಂಟಿದ್ಯಾಕೆ ?

ಯಡಿಯೂರಪ್ಪ ಒಬ್ಬ ಗೆಲ್ಲುವ ಕುದುರೆ

ಯಡಿಯೂರಪ್ಪ ಒಬ್ಬ ಗೆಲ್ಲುವ ಕುದುರೆ

ಯಡಿಯೂರಪ್ಪ ಒಬ್ಬ ಗೆಲ್ಲುವ ಕುದುರೆ, ಮುಂದಿಟ್ಟುಕೊಂಡು ಆಟವಾಡೋಣ, ಗೆದ್ದಾದ ಮೇಲೆ ನೋಡಿಕೊಳ್ಳೋಣ ಎಂಬ ಸಮಯೋಚಿತ ಲೆಕ್ಕಾಚಾರ ಹಾಗು ನಮೋ ಸರ್ಕಾರಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ಇಂದಿನ ಪ್ರಧಾನಿಗೆ '14, 18, 22 ಇಲ್ಲ 24 ಕ್ಯಾರಟ್ ಚಿನ್ನದೊಳಗೆ ಬೇಕಾದ್ದು ಆರಿಸಿಕೊಳ್ಳಿ ಎಲ್ಲ ಫ್ರೀ' ಎಂಬ ಬಂಪರ್ ಆಫರ್ ನೀಡಿತು, ಆದರೆ ಇದೇ ಸರ್ಕಾರ ಮ್ಯಾಜಿಕ್ ನಂಬರ್ ಗೇಮ್ ಬಾರ್ಡರ್‌ಗೆ ಬಂದು ನಿಂತಿದ್ದರೆ ಯಡಿಯೂರಪ್ಪನವರ ಪರಿಸ್ಥಿತಿ ಹೀಗಿರುತ್ತಿತ್ತೆ?

 ಹೀಗೆ ಕಡೆಗಣಿಸಿದರೆ ಮುಂದೆ ಏನಾದಿತು ?

ಹೀಗೆ ಕಡೆಗಣಿಸಿದರೆ ಮುಂದೆ ಏನಾದಿತು ?

ಲಿಂಗಾಯತ ಸಮುದಾಯದ ನಾಯಕರಾಗಿ ಯಡಿಯೂರಪ್ಪನವರೇ ಬೇಕು, ಅವರಿಗೆ ನಮ್ಮ ಬೆಂಬಲ ಎಂಬ ಮಾತನ್ನು ಬಿಜೆಪಿಗೆ ಕರ್ನಾಟಕದ ಮತದಾರ ಪ್ರಭು ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅಂತಹ ಚಾಣಕ್ಷ ಮತದಾರರ ತೃಪ್ತಿ ಪಡಿಸಲು ಜಿಎಂ ಸಿದ್ದೇಶ್ವರರಂತಹ ಒಬ್ಬ ನಾಯಕರಿಂದ ಸಾಧ್ಯವಾದೀತೇ ?

ಮೋದಿಯವರಿಗಿಂತಲೂ ಮೊದಲೇ ಬಿಜೆಪಿ ಸೇರಿ 40 ವರ್ಷಕ್ಕೂ ಅಧಿಕ ಕಾಲ ಪಕ್ಷ ಕಟ್ಟಿ, ದಕ್ಷಿಣ ಭಾರತದಲ್ಲೂ ಬಿಜೆಪಿಗೆ ಒಂದು ಬೆಳಕು ಕೊಟ್ಟ ನಮ್ಮ ಒಬ್ಬ ಹಿರಿಯ ನಾಯಕ ಯಡಿಯೂರಪ್ಪನವರನ್ನು ಹೀಗೆ ಕಡೆಗಣಿಸಿದರೆ ಮುಂದೆ ಏನಾದಿತು ?

ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಎಚ್ಚೆತ್ತುಕೊಳ್ಳಲಿ

ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಎಚ್ಚೆತ್ತುಕೊಳ್ಳಲಿ

ಈಗಲೂ ಕಾಲ ಮಿಂಚಿಲ್ಲ, ಮಾನ್ಯ ಯಡಿಯೂರಪ್ಪನವರನ್ನ ಕರೆದು ಅವರಿಗೆ ಸೂಕ್ತವಾದ ಸ್ಥಾನ ಮಾನ ನೀಡಿದರೆ ಎಂದಿಗೂ ಒಬ್ಬ ಮಹಾನ್ ನಾಯಕನನ್ನು ಉಳಿಸಿಕೊಂಡ ಕೀರ್ತಿ ಬಿಜೆಪಿಗೆ ಉಳಿದುಕೊಳ್ಳುತ್ತದೆ.

ಕಾಲ ಚಕ್ರ ಯಾವಾಗಲು ತಿರುಗುತ್ತಲೇ ಇರುವುದು ಮುಂದೊಂದು ದಿನ ಇಂತಹದೇ ಚುನಾವಣೆ ಬಂದಾಗ ಮತದಾರ ಪ್ರಭು ಮ್ಯಾಜಿಕ್ ಗೇಟಿಗೆ ತಂದು ನಿಲ್ಲಿಸುವ ಲಾಜಿಕ್ ಗೇಮ್ ಆಡಿದರೆ ಇದೇ ಬಿಜೆಪಿಗೆ ಸರ್ಕಾರ ನಡೆಸಲು ಅಥವಾ ಅಸ್ಥಿತ್ವ ಉಳಿಸಿಕೊಳ್ಳಲು ಮುಲಾಯಂ ಸಿಂಗ್, ಲಾಲು, ದೀದಿ, ಅಮ್ಮ- ಗುಮ್ಮನ ಕಾಲು ಹಿಡಿಯಬೇಕಾದ ಪರಿಸ್ಥಿತಿಯೂ ಬರಬಹುದು ಆ ಸಮಯಕ್ಕೆ ಯಡಿಯೂರಪ್ಪನವರಂತಹ ನಾಯಕನನ್ನು ಕಡೆಗಣಿಸಿದ ಪಾಪ ಮುಂದಿನ ಏಳೇಳು ಚುನಾವಣೆಗೂ ಕಾಡಿದರೆ ಪಶ್ಚಾತಾಪ ಪಟ್ಟುಕೊಳ್ಳಬಹುದೇ ವಿನಹ ಮತ್ತೆ ಗೆಲುವು ಸಾಧಿಸುವುದು ಬಿಜೆಪಿಗೆ ಹಗಲುಗನಸಾಗೆ ಉಳಿಯಬಹುದು.

English summary
Is BS Yeddyurappa getting Step-Motherly Treatment in BJP. Why Shimoga MP Yeddyurappa is sidelined by Narendra Modi led NDA government. Why Amit Shah a close aide of PM Modi is given powerful post questions citizen journalist Mahanta Vakkunda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X