ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಕೇಬಲ್ ಸೇವೆ ಬಗ್ಗೆ ಎರಡು ತಿಂಗಳಲ್ಲಿ ನಿರ್ಧಾರ

|
Google Oneindia Kannada News

ಬೆಂಗಳೂರು, ಆ.26 : ಸರ್ಕಾರಿ ಕೇಬಲ್‌ ಆಪರೇಟಿಂಗ್‌ ಸಂಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಮಂಗಳವಾರ ವಾರ್ತಾ ಸಚಿವ ರೋಷನ್ ಬೇಗ್ ಕೇಬಲ್ ಆಪರೇಟರ್‌ಗಳೊಂದಿಗೆ ಸಭೆ ನಡೆಸಿದ್ದು, ಅವರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ಸರ್ಕಾರ ಕೇಬಲ್ ಆಪರೇಟಿಂಗ್ ಸಂಸ್ಥೆ ಆರಂಭಿಸಿದರೆ 15 ಲಕ್ಷ ಮಂದಿ ನಿರುದ್ಯೋಗಿಗಳಾಗುತ್ತಾರೆ ಎಂದು ಕೇಬಲ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ರಾಜು ಅವರು ಸಚಿವರಿಗೆ ಅಹವಾಲು ಸಲ್ಲಿಸಿದ್ದಾರೆ.

Roshan Baig

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರೋಷನ್ ಬೇಗ್, ರಾಜ್ಯದಲ್ಲಿ 2 ಲಕ್ಷ ಕೇಬಲ್ ಆಪರೇಟರ್‌ಗಳಿದ್ದಾರೆ. ಅವರ ವಿಚಾರ ಮತ್ತು ಅಹವಾಲುಗಳನ್ನು ಆಲಿಸಿದ್ದೇವೆ. ಈ ಕುರಿತು ಸರ್ಕಾರ ಎರಡು ತಿಂಗಳಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದರು. [ಅಗ್ಗದ ದರದಲ್ಲಿ ಕೇಬಲ್ ಸೇವೆ]

ಸರ್ಕಾರಿ ಸ್ವಾಮ್ಯದ ಕೇಬರ್ ಆಪರೇಟಿಂಗ್ ಸಂಸ್ಥೆ ಆರಂಭವಾದರೆ, ಪ್ರತಿ ತಿಂಗಳು 50ರಿಂದ 100 ರೂಪಾಯಿಯೊಳಗೆ ಗ್ರಾಹಕರಿಗೆ ಸೇವೆಯನ್ನು ನೀಡುವ ಚಿಂತನೆ ಸರ್ಕಾರದ ಮುಂದಿದೆ ಎಂದು ಸಚಿವರು ಮಾಹಿತಿ ನೀಡಿದರು. ಲೋಕಸಭೆ ಹಾಗೂ ರಾಜ್ಯ ಸಭೆ ಟಿವಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಟಿವಿ ಚಾನೆಲ್ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

English summary
Karnataka Information and Public Relations Minister Roshan Baig meets cable operators in Bangalore on Tuesday, August 26. State government has initiated steps to launch a State-owned cable television network so minister meets operators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X