ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಡ್ಯಾಂನಲ್ಲಿ ಎಷ್ಟು ನೀರಿದೆ?

By Ashwath
|
Google Oneindia Kannada News

ಬೆಂಗಳೂರು,ಜು.26: ಕೃಷ್ಣೆಯ ಉಗಮ ಸ್ಥಾನ ಮಹಾಬಳೇಶ್ವರ ಸೇರಿದಂತೆ ಕೊಂಕಣ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು ಬೆಳಗಾವಿ ಮತ್ತು ಬಾಗಲಕೋಟದ ಹಲವು ಗ್ರಾಮಗಳು ಜಲಾವೃತಗೊಂಡಿವೆ.

ಚಿಕ್ಕೋಡಿ ತಾಲೂಕಿನಲ್ಲಿ 10 ಕೆಳಮಟ್ಟದ ಸೇತುವೆಗಳು ಮುಳುಗಿದ್ದು, ನದಿ ತೀರದ ಜನರಿಗೆ ಪ್ರವಾಹದ ಭೀತಿ ಕಾಡುತ್ತಿದೆ. ಚಿಕ್ಕೋಡಿಯ ರೈತನೊಬ್ಬ ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಕೃಷ್ಣಾ ನದಿ ಸೇರಿದಂತೆ ಉಪನದಿಗಳಾದ ದೂಧಗಂಗಾ, ವೇಧಗಂಗಾ, ಪಂಚಗಂಗಾ ಮತ್ತು ಚಕುತ್ರಾ ನದಿಗಳು ಉಕ್ಕಿ ಹರಿಯಲಾರಂಭಿಸಿವೆ.

ಕೃಷ್ಣೆಯ ಹಿನ್ನೀರು ಹೆಚ್ಚಿದ್ದರಿಂದ ಕಳೆದೆರೆಡು ತಿಂಗಳಿಂದ ಸ್ಥಗಿತಗೊಂಡಿದ್ದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕ ಶುಕ್ರವಾರ ಬೆಳಗ್ಗೆಯಿಂದ ಕಾರ್ಯಾರಂಭ ಮಾಡಿದೆ.

gagan chukki jalpatha

ಹಾಸನ,ಉತ್ತರ ಕನ್ನಡ, ಶಿವಮೊಗ್ಗದಲ್ಲೂ ಭಾರಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು ಜಲಾವೃತಗೊಂಡಿದ್ದ ಭಾಗಮಂಡಲ ತ್ರಿವೇಣಿ ಸಂಗಮ, ದಕ್ಷಿಣ ಕೊಡಗಿನಲ್ಲಿ ಭತ್ತದ ಗದ್ದೆಗೆ ನುಸುಳಿದ್ದ ಲಕ್ಷ್ಮಣ ತೀರ್ಥ ನದಿ ಪ್ರವಾಹ ಕೂಡ ಕಡಿಮೆಯಾಗಿದೆ.

ಭಾರೀ ಮಳೆ: ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?
ಜಲಾಶಯ ಗರಿಷ್ಠ ಮಟ್ಟ ಇಂದಿನ ನೀರಿನ ಮಟ್ಟ ಕಳೆದ ವರ್ಷದ ಮಟ್ಟ ಒಳ ಹರಿವು ಹೊರ ಹರಿವು
ಲಿಂಗನಮಕ್ಕಿ 1819 1783.30 1804.20 43035 7,340
ತುಂಗಾಭದ್ರಾ 1633 1619.50 1632.03 67,437 2953
ಹಾರಂಗಿ 2,859 2856.83 2854.88 17,825 15423
ಕೆಆರ್‌ಎಸ್‌‌ 124.80 110.80 116.00 36,330 12,300
ಆಲಮಟ್ಟಿ 519 .60 ಮೀ. 515.20 ಮೀ. 516.20 ಮೀ 1,17,675 20,000

*ನೀರಿನ ಮಟ್ಟ ಅಡಿಗಳಲ್ಲಿ
*ಒಳ ಹರಿವು ,ಹೊರಹರಿವು ಕ್ಯೂಸೆಕ್‌ ಲೆಕ್ಕದಲ್ಲಿ

ಕ್ಯೂಸೆಕ್‌ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಆಗಲಿದೆ.

English summary
Following heavy rains in Maharashtra, there has been a copious inflow of water into the Krishna river, which submerged ten bridges, in Chikodi taluk on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X