ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ ಕೆಟಗೆರಿ ನಿವೇಶನ ಹಂಚಿಕೆ: ಸರ್ಕಾರಕ್ಕೆ 'ಹೈ' ನೋಟಿಸ್

By Mahesh
|
Google Oneindia Kannada News

ಬೆಂಗಳೂರು, ಜೂ.6: ಜಿ ಕೆಟಗರಿಯಡಿ ಬಿಡಿಎ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಗೆ ಶುಕ್ರವಾರ ಹೈಕೋರ್ಟ್ ನೋಟೀಸ್ ನೀಡಿದೆ. ನಿವೇಶನ ಹಂಚಿಕೆ ವಿಷಯದಲ್ಲಿ ಮೊದಲೇ ಗೊಂದಲದಲ್ಲಿರುವ ಸರ್ಕಾರಕ್ಕೆ ಇದು ಹಿನ್ನಡೆ ಎನ್ನಬಹುದು.

ನ್ಯಾಯಮೂರ್ತಿ ಬಿ.ಪದ್ಮರಾಜ್ ವರದಿ ಅನುಷ್ಠಾನಕ್ಕೆ ಕೋರಿ ಜಯಕುಮಾರ್ ಹೀರೇಮಠ್ ಎಂಬುವವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಮತ್ತು ಬಿಡಿಎಗೆ ಪ್ರಕರಣ ಕುರಿತು ಪ್ರತಿಕ್ರಯಿಸುವಂತೆ ಸೂಚಿಸಿ ನೋಟೀಸ್ ಜಾರಿ ಮಾಡಿದೆ.

ರಾಜ್ಯದಲ್ಲಿ ನಡೆದಿರುವ ಭೂ ಹಗರಣ ಸಂಬಂಧ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿ.ಪದ್ಮರಾಜ್ ಅವರ ನೇತೃತ್ವದ ತನಿಖಾ ಆಯೋಗ ರಚಿಸಿತ್ತು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜಿ.ಕೆಟಗರಿ ನಿವೇಶನ ವಿವಾದದ ಬಗ್ಗೆ ತನಿಖೆ ನಡೆಸಲು ಪದ್ಮರಾಜ್ ಆಯೋಗವನ್ನು ರಚಿಸಲಾಗಿತ್ತು. ಬಿಡಿಎ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಆಯೋಗ ಸರ್ಕಾರ ವರದಿ ಸಲ್ಲಿಸಿತ್ತು.

HC give notice to Karnataka government and BDA

ನ್ಯಾ.ಪದ್ಮರಾಜ್ ನೇತೃತ್ವದಲ್ಲಿ ನ್ಯಾ.ರಂಗವಿಠಲಾಚಾರ್, ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಪಿ.ಬಿ.ಮಹಿಷಿ ನಿವೃತ್ತ ಸೆಷನ್ ನ್ಯಾಯಾಧೀಶ ಎಚ್.ಎಂ ಭರತೇಶ್ ಅವರನ್ನು ಒಳಗೊಂಡ ಸಮಿತಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದು, ಕಡತಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಜಿ ಕೆಟಗರಿ ನಿವೇಶನ ಹಂಚಿಕೆಯಲ್ಲಾದ ಅಕ್ರಮ ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ನ್ಯಾ.ಪದ್ಮರಾಜ್ ನೇತೃತ್ವದ ಉಪ ಸಮಿತಿ ತನ್ನ ಅಧ್ಯಯನ ವರದಿ ಹಾಗೂ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಿ, 308 ನಿವೇಶನ ಹಂಚಿಕೆಯನ್ನು ರದ್ದುಗೊಳಿಸುವಂತೆ ಸೂಚಿಸಿತ್ತು. 2004 ರಿಂದ 2011 ರ ಆವಧಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಸದರಿ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದ್ದು ಕೆಲವನ್ನು ಮಾರಾಟ ಮಾಡಲಾಗಿದೆ.

ಈ ನಿಟ್ಟಿನಲ್ಲಿ ಏನು ಮಾಡಬೇಕೆಂದು ಸರ್ಕಾರ ಇನ್ನೂ ನಿರ್ಣಯ ಕೈಗೊಳ್ಳುವ ಮುನ್ನವೇ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. 2004 ರಿಂದ 2011 ರ ಅವಧಿಯ ನಿವೇಶನಗಳನ್ನು ಒಂದು ವೇಳೆ ಸರ್ಕಾರ ಹಿಂಪಡೆದುಕೊಂಡರೆ 2004ಕ್ಕಿಂತ ಹಿಂದೆ ಮಂಜೂರಾದ ನಿವೇಶನಗಳ ಬಗ್ಗೆ ಕೂಡಾ ಕೂಗೆದ್ದೀತು ಎಂಬ ಭಯ ಸರ್ಕಾರವನ್ನು ಕಾಡುತ್ತಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಟಿಬಿ ಜಯಚಂದ್ರ, ಆರ್ ವಿ ದೇಶಪಾಂಡೆ, ಎಚ್ ಕೆ ಪಾಟೀಲ್ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನೊಳಗೊಂಡ ಸಮಿತಿಯನ್ನು ಸಿಎಂ ಸಿದ್ದರಾಮಯ್ಯ ರಚಿಸಿದ್ದಾರೆ. ಸದ್ಯಕ್ಕಂತೂ ಪರಿಹಾರ ಸಿಕ್ಕಿಲ್ಲ.

English summary
The Karnataka High Court today gives Notice to The state government and Bangalore Development Authority(BDA) regarding sanction of G Category sites from 20004-2011. Siddaramaiah Government decided to seek the opinion of the advocate general and experts before deciding on 'G' category BDA sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X