ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯಿಯನ್ನು ಶೌಚಾಲಯದಲ್ಲಿ ಕೂಡಿಹಾಕಿದ ಮಗ

|
Google Oneindia Kannada News

ಹಾಸನ, ಜು. 14 : ಮನೆಯ ಆಸೆಗಾಗಿ ತಾಯಿಯನ್ನು ಶೌಚಾಲಯದಲ್ಲಿ ಕೂಡಿಹಾಕಿದ್ದ ಮಗನೊಬ್ಬನ ಪಾಪ ಕೃತ್ಯ ಹಾಸನದಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯರು ಮತ್ತು ಪೊಲೀಸರು ಸಹಕಾರದಿಂದ ಮಹಿಳೆಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ತಾಲೂಕಿನ ಸುಗ್ಗನಹಳ್ಳಿ ಜನತಾ ಕಾಲೋನಿ ನಿವಾಸಿ ಜಯಮ್ಮನನ್ನು (67), ಮಗ ರಮೇಶ್ ಮೂರು ದಿನದಿಂದ ಅನ್ನ, ನೀರು ಕೊಡದೆ ಶೌಚಾಲಯದಲ್ಲಿ ಕೂಡಿ ಹಾಕಿದ್ದ. ತಾಯಿಯನ್ನು ಪೊಲೀಸರು ಮತ್ತು ಸ್ಥಳೀಯರ ಸಹಕಾರದಿಂದ ರಕ್ಷಿಸಿರುವ ಪುತ್ರಿ ಪದ್ಮಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

Hassan

ಪ್ರಕರಣ ಬೆಳಕಿಗೆ ಬಂದ ನಂತರ ಆರೋಪಿ ರಮೇಶ್ ತಲೆಮರಿಸಿಕೊಂಡಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜಯಮ್ಮ ವಾಸಿಸುತ್ತಿದ್ದ ಮನೆಯನ್ನು ರಮೇಶ್ ಹೆಸರಿಗೆ ಬರೆದುಕೊಡಲು ಆಕೆ ನಿರಾಕರಿಸಿದ್ದರಿಂದ ಆಕೆಯನ್ನು ಕೂಡಿಹಾಕಿ, ಅನ್ನ, ನೀರು ಕೊಡದೆ ಹಿಂಸೆ ನೀಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. [ರಾಜ್ಯದ ಗೃಹ ಬಂಧನ ಪ್ರಕರಣಗಳು]

ಕಡಲೆಕಾಯಿ ಜಯಮ್ಮ : ಮೂವತ್ತು ವರ್ಷಗಳಿಂದ ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದ ಜಯಮ್ಮ ಅವರು ಕಡಲೆ ಕಾಯಿ ಜಯಮ್ಮ ಎಂದು ಎಲ್ಲರಿಗೂ ಪರಿಚಿತರು. ಇವರಿಗೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು. ಜಯಮ್ಮ ಪತಿ ಸುಮಾರು 20 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ.

ಸರ್ಕಾರದಿಂದ ಮಂಜೂರಾಗಿದ್ದ ಜನತಾ ಮನೆಯಲ್ಲಿ ಜಯಮ್ಮ ಅವರು ವಾಸಿಸುತ್ತಿದ್ದರು ಪತಿ ತೀರಿಕೊಂಡಿದ್ದ ಮಗಳು ಪದ್ಮ ಸಹ ಜಯಮ್ಮ ಜೊತೆ ನೆಲೆಸಿದ್ದರು. ಹಿರಿಯ ಮಗನಾದ ರಮೇಶ್ ಮನೆಯನ್ನು ತನ್ನ ಹೆಸರಿಗೆ ಬರೆದುಕೊಡು ಎಂದು ಜಯಮ್ಮ ಅವರಿಗೆ ಒತ್ತಾಯ ಮಾಡುತ್ತಿದ್ದ. ಈ ವಿಚಾರವಾಗಿ ತಾಯಿ ಮತ್ತು ಸಹೋದರಿ ಪದ್ಮಾ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಗನ ಈ ವರ್ತನೆ ಕುರಿತು ಜಯಮ್ಮ ಅವರಿಗೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಆದರೂ ಆತನ ತನ್ನ ಒತ್ತಾಯವನ್ನು ಮುಂದುವರೆಸಿದ್ದ. ಇದರಿಂದ ಬೇಸತ್ತ ಪದ್ಮಾ ಬೇರೆ ಮನೆ ಮಾಡಿದ್ದರು. ಗುರುವಾರ ಜಯಮ್ಮ ಮನೆಗೆ ಬಂದ ರಮೇಶ್ ತಾಯಿಯೊಂದಿಗೆ ಜಗಳವಾಡಿ, ನಂತರ ಆಕೆಯನ್ನು ಶೌಚಾಲಯದಲ್ಲಿ ಕೂಡಿಹಾಕಿ ಮನೆಗೆ ಬೀಗಹಾಕಿಕೊಂಡು ಹೋಗಿದ್ದ.

ರಮೇಶ್ ನ ಬಗ್ಗೆ ತಿಳಿದಿದ್ದ ಸ್ಥಳೀಯರು ಸಹಾಯಕ್ಕೆ ಬರದೆ ಸುಮ್ಮನಿದ್ದರು. ಶನಿವಾರ ಜಯಮ್ಮ ಪುತ್ರಿ ಪದ್ಮಾ ಅವರಿಗೆ ಈ ವಿಷಯ ತಿಳಿದಿದೆ. ಪೊಲೀಸರು ಮತ್ತು ಸ್ಥಳೀಯರ ಸಹಕಾರದಿಂದ ಆಕೆ ಮನೆಯ ಬೀಗ ಮುರಿದು ತಾಯಿಯನ್ನು ರಕ್ಷಿಸಿದ್ದಾರೆ. ಮೂರು ದಿನಗಳಿಂದ ಊಟ, ನೀರು ಇಲ್ಲದೆ ನಿತ್ರಾಣರಾಗಿದ್ದ ಜಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

English summary
Villagers and police rescued a woman who had been locked up in a toilet by her son and deprived of food for three days in Sugganahalli village of Channarayapatna taluk of Hassan on Sunday. Jayamma (67) was rescued by the police who broke the lock of the main door. Jayamma son Ramesh allegedly had a rift with his mother over property and was forcing her to transfer the house to his name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X