ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ಮೊಮ್ಮಗ ಪ್ರಜ್ವಲ್ ಇತ್ಯೋಪರಿ

By ಮಲೆನಾಡಿಗ
|
Google Oneindia Kannada News

'ನಮ್ಮ ಕುಟುಂಬದ ಮೇಲೆ 'ಮಣ್ಣಿನ ಮಕ್ಕಳು' ಎಂಬ ಟ್ಯಾಗ್ ಇದೆ. ನಾನೂ ಮಣ್ಣಿನ ಮಗನೂ ಆಗ್ತೀನಿ... ಸಿಟಿಯಲ್ಲಿ ಐಟಿ ಟ್ಯಾಗ್ ಬೆಳೆಸುತ್ತೇನೆ. ಯುವಕರ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ' ಹೀಗೆ ಇತ್ತೀಚಿನ ಸಂದರ್ಶನದಲ್ಲಿ ಘೋಷಿಸಿದ್ದು ಪ್ರಜ್ವಲ್ ರೇವಣ್ಣ.

ಇಂಜಿನಿಯರಿಂಗ್ ಓದಿ ಸಿಟಿ ಲೈಫ್ ಕಂಡಿರುವ ಪ್ರಜ್ವಲ್ ಗೆ ರೈತರ ಕಷ್ಟ ಸುಖಗಳನ್ನು ಚಿಕ್ಕಂದಿನಿಂದ ಕಂಡಿರುವ ಅನುಭವವಿದೆಯಂತೆ. ಯುವಕರು ಒಗ್ಗೂಡಿದರೆ ದೇಶದ ರಾಜಕೀಯ ದಿಶೆಯನ್ನೇ ಬದಲಾಯಿಸಲು ಸಾಧ್ಯ. ಸರ್ಕಾರ ಹಾಗೂ ಜನ ಸಾಮಾನ್ಯರ ನಡುವೆ ಯುವಕರು ಸೇತುವೆಯಾಗಿ ಕಾರ್ಯ ನಿರ್ವಹಿಸಿದರೆ ಸಮಸ್ಯೆಗಳು ಇನ್ನಿಲ್ಲದಂತೆ ಮಾಯವಾಗಲಿದೆ ಎಂದಿದ್ದಾರೆ.

ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಮಾಡಿರುವ ಅಭಿವೃದ್ಧಿಯನ್ನು ಗುರುತಿಸಿ ಕೆಲಸ ಮಾಡಬೇಕು. ನಾನು ಬೆಳೆಯಲು ದೇವೇಗೌಡರೇ ಕಾರಣ. ಅವರನ್ನು ಗೆಲ್ಲಿಸುವುದೇ ನನ್ನ ಸದ್ಯದ ಗುರಿ. ಜೆಡಿಎಸ್ ಒಂದೇ ಕೋಮಿಗೆ ಸೇರಿದ್ದಲ್ಲ. ಎಲ್ಲಾ ಜಾತಿಯವರ ಸಮ್ಮಿಶ್ರ ಎಂದು ದೇವೇಗೌಡರ ಪರ ಮತಯಾಚನೆ ಮಾಡುತ್ತಿದ್ದಾರೆ.

ಆಸೆ ಕಂಗಳ ಯುವಕ ಪ್ರಜ್ವಲ್ ಗೆ ಸಕ್ರಿಯ ರಾಜಕೀಯಕ್ಕೆ ಹಠಾತ್ ಪ್ರವೇಶ ಮಾಡುವ ಆತುರವಿಲ್ಲ. ಎಲ್ಲವೂ ಅಜ್ಜ ದೇವೇಗೌಡರ ಬುದ್ಧಿವಾದದಂತೆ ನಡೆಯಲಿದೆ. ನನಗೆ ರಾಜಕೀಯ ಪಾಠ ಹೇಳಿಕೊಡಲು ಸಾಕಷ್ಟು ಜನ ಗುರುಗಳಿದ್ದಾರೆ. ಅಪ್ಪ ರೇವಣ್ಣ, ಅಮ್ಮ ಭವಾನಿ ಅವರ ಜತೆಗೆ ಚಿಕ್ಕಪ್ಪ ಕುಮಾರಸ್ವಾಮಿ, ಜಮೀರಣ್ಣ ಅವರ ಮಾರ್ಗದರ್ಶನದಲ್ಲಿ ನನ್ನ ಮುಂದಿನ ಹೆಜ್ಜೆ ಇಡುತ್ತೇನೆ ಎನ್ನುತ್ತಿದ್ದಾರೆ. ಹಾಸನದ ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಜ್ಜನದ್ದು ಇದೇ ಕೊನೆ ಚುನಾವಣೆ ಎನ್ನುತ್ತಿದ್ದಾರೆ. ಇದು ಜೆಡಿಎಸ್ ನಲ್ಲಿ ಹೊಸ ಉತ್ತರಾಧಿಕಾರಿಗಳಿಗೆ ನಾಂದಿ ಹಾಡಲಿದೆಯೇ? ಮುಂದೆ ಓದಿ...

ನಾನು ಸಕ್ರಿಯ ರಾಜಕೀಯಕ್ಕೆ ಬರುತ್ತೇನೆ.

ನಾನು ಸಕ್ರಿಯ ರಾಜಕೀಯಕ್ಕೆ ಬರುತ್ತೇನೆ.

ನಾನು ಸಕ್ರಿಯ ರಾಜಕೀಯಕ್ಕೆ ಬರುತ್ತೇನೆ. ಆದರೆ, ನನಗಿನ್ನೂ ಚಿಕ್ಕ ವಯಸ್ಸು, ಲೋಕಸಭೆ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆಯೂ ಇಲ್ಲ. ಸದ್ಯಕ್ಕೆ ಪ್ರಚಾರ, ಸಂಘಟನೆ ಬಗ್ಗೆ ಎಷ್ಟು ಯೋಚಿಸುತ್ತಿದ್ದೇನೆ. ಹಿರಿಯ ನಾಯಕರಾದ ಜಮೀರ್ ಅಣ್ಣ ಅವರು ನನಗೆ ಸಾಥ್ ನೀಡುತ್ತಿದ್ದಾರೆ.

ಅಭಿಮಾನಿಗಳು, ಯುವಕರಿಗೆ ಕಿವಿಮಾತು

ಅಭಿಮಾನಿಗಳು, ಯುವಕರಿಗೆ ಕಿವಿಮಾತು

'ಹೋಗಿ ನಿಂತು ಹೋರಾಟ ಮಾಡು' ಎಂದು ದೇವೇಗೌಡರು ಶಕ್ತಿ ಕೊಟ್ಟರೆ ನಾನು ನನ್ನ ಹುಡುಗರಿಗಾಗಿ ಸಕ್ರಿಯ ರಾಜಕೀಯಕ್ಕೆ ಬರುತ್ತೇನೆ. ಯುವಕರೇ ಕ್ರಿಕೆಟ್ ಟೂರ್ನಿ, ರಾಜ್ಯೋತ್ಸವಕ್ಕೆ ಸೀಮಿತವಾಗಬೇಡಿ. ದೇಶ ಕಟ್ಟುವ ಕೆಲಸ ಮಾಡಿ. ಹಣದ ಹೊಳೆ ಅರಿಸಿ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಕೆಲಸ ಮಾಡಿದರಷ್ಟೇ ಇಲ್ಲಿ ಬೆಲೆ. ಯುವಕರಿಗೆ ಅನ್ನದಾನಕ್ಕೆ 30 ಲಕ್ಷ ರು ಕೊಡಿಸಿದ್ದೇನೆ. ಅದನ್ನು ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ

ಯುವಕರಿಗೆ ರಾಜಕೀಯದಲ್ಲಿ ಬೆಲೆ ಸಿಗುತ್ತಿಲ್ಲ

ಯುವಕರಿಗೆ ರಾಜಕೀಯದಲ್ಲಿ ಬೆಲೆ ಸಿಗುತ್ತಿಲ್ಲ

20-35 ವರ್ಷದ ಹುಡುಗರಿಗೆ ರಾಜಕೀಯ ಪಕ್ಷಗಳಲ್ಲಿ ಅಂಥ ಬೆಲೆ ಸಿಗುತ್ತಿಲ್ಲ. ಯುವ ಪೀಳಿಗೆಯ ಆಶಯಕ್ಕೆ ಸ್ಪಂದಿಸುವುದು ನನ್ನ ಕೆಲ್ಸ., ಅವರಿಗೆ ಧ್ವನಿಯಾಗಲು ರಾಜಕೀಯಕ್ಕೆ ಬರುತ್ತಿದ್ದೇನೆ.24 ವಯಸ್ಸು ಮುಂಚಿತವಾಗಿ ರಾಜಕೀಯಕ್ಕೆ ಬರುತ್ತಿಲ್ಲ.

ಅರ್ಹತೆ ಇರುವ ಸ್ಥಾನಕ್ಕೆ ಮಾತ್ರ ನಾನು ರೆಡಿ

ಅರ್ಹತೆ ಇರುವ ಸ್ಥಾನಕ್ಕೆ ಮಾತ್ರ ನಾನು ರೆಡಿ

ನಾನು ಬೇರುಮಟ್ಟದ ರಾಜಕಾರಣಿಯಾಗಿ ಬರುತ್ತೇನೆ. ಪಕ್ಷದ ಹಿರಿಯರಿಗೆ ಸೂಕ್ತ ಸ್ಥಾನ ಮಾನ ಸಿಗಬೇಕು. ರಾಜಕೀಯಕ್ಕೆ ಬಂದು ತಂದೆ ಹೆಸರು ದುರ್ಬಳಕೆ ಮಾಡುವುದು ಉದ್ದೇಶವಲ್ಲ. ದೇವೇಗೌಡರು ಕೊಡುವ ಸ್ಥಾನಕ್ಕೆ ನನ್ನ ಅರ್ಹತೆ ಇರಬೇಕು. ಈ ಬಗ್ಗೆ ನನ್ನ ಕಾರ್ಯಕರ್ತರೊಡನೆ ಚರ್ಚಿಸಬೇಕು.

ಯೂಥ್ ಪವರ್ ಬಳಸಿ ಪ್ರಚಾರ ನನ್ನ ಗುರಿ

ಯೂಥ್ ಪವರ್ ಬಳಸಿ ಪ್ರಚಾರ ನನ್ನ ಗುರಿ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೊದಿ ಅವರೇ ಯೂಥ್ಸ್ ಬಳಸಿ ಪ್ರಚಾರ ನಡೆಸಿದ್ದಾರೆ. ನಾನು ವಾಯ್ಸ್ ಆಫ್ ಯೂಥ್ ಆಗಬೇಕು. ಬೇಲೂರು ನನ್ನ ಆರಂಭದ ಕ್ಷೇತ್ರ. 89 ಲಕ್ಷ ಅನುದಾನ ನೀಡಿಸಿದೆ. ನಾನು ಪುರಸಭೆಯಲ್ಲೂ ಪ್ರಚಾರ ನಡೆಸಿದೆ. ಬೇಲೂರು ಜನರ ಋಣ ತೀರಿಸಬೇಕಿದೆ.

ಕುಟುಂಬ ರಾಜಕೀಯ ಬೇಸರ ತರೆಸುವುದಿಲ್ವ

ಕುಟುಂಬ ರಾಜಕೀಯ ಬೇಸರ ತರೆಸುವುದಿಲ್ವ

ಕುಟುಂಬ ರಾಜಕೀಯ ಬೇಸರ ತರೆಸುವುದಿಲ್ವ.ದೇವೇಗೌಡರಿಗೆ 9 ಜನ ಮೊಮ್ಮಕ್ಕಳಿದ್ದಾರೆ. ಕುಟುಂಬ ರಾಜಕಾರಣ ಇದ್ದರೆ ಅಷ್ಟು ಜನ ಈಗ ರಾಜಕೀಯದಲ್ಲಿರುತ್ತಿದ್ದರು.

ಕಾರ್ಯಕರ್ತರು ಫ್ಯೂಡಲ್ ಸಿಸ್ಟಮ್ ನಲ್ಲಿದ್ದಾರಾ?

ಕಾರ್ಯಕರ್ತರು ಫ್ಯೂಡಲ್ ಸಿಸ್ಟಮ್ ನಲ್ಲಿದ್ದಾರಾ?

ಜೆಡಿಎಸ್ ಕಾರ್ಯಕರ್ತರು ಫ್ಯೂಡಲ್ ಸಿಸ್ಟಮ್ ನಲ್ಲಿದ್ದಾರೆ ಎನ್ನಿಸುವುದಿಲ್ಲವೇ? ಈ ಬಾರಿ ಮೊದಲೇ ದೇವೇಗೌಡರು ಹೇಳಿದಂತೆ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸಿಲ್ಲ. ಕುಮಾರಸ್ವಾಮಿ ಅವರು ಕಾರ್ಯಕರ್ತರ ಒತ್ತಡದಿಂದ ಚಿಕ್ಕಬಳ್ಳಾಪುರದಲ್ಲಿ ನಿಲ್ಲಬೇಕಾಯಿತು. ಪುಟ್ಟರಾಜು, ಪ್ರಭಾಕರ್ ರೆಡ್ಡಿ ಜನ ಸಾಮಾನ್ಯರಿಗೆ ಟಿಕೆಟ್ ನೀಡಿದ್ದೇವೆ ಎಂಬುದನ್ನು ಮರೆಯಬಾರದು.

ಮಣ್ಣಿನ ಮಕ್ಕಳು ಹೆಸರಿಗೆ ಮಾತ್ರವೇ?

ಮಣ್ಣಿನ ಮಕ್ಕಳು ಹೆಸರಿಗೆ ಮಾತ್ರವೇ?

ನಾವು ಹೆಸರಿಗೆ ತಕ್ಕಂತೆ ಮಣ್ಣಿನ ಮಕ್ಕಳಾಗೆ ಇದ್ದೇವೆ. ನಮ್ಮ ಕುಟುಂಬದವರು ರೈತರಾಗೇ ಇದ್ದೀವಿ. ಬಾಳೆ, ಸಫೋಟಾ ಬೆಳೆದಿದ್ದೇವೆ. ಅದರಿಂದ ಬಂದ ಹಣ ಬೇರೆ ಕಡೆ ಇನ್ವೆಸ್ಟ್ ಮಾಡಿದ್ದೇವೆ. ಕೆ.ಆರ್ ನಗರದ ಸಾಲಿಗ್ರಾಮ ತಾಯಿ ಊರು.. ಹಳ್ಳಿ ಬದುಕು ಹೊಸದೇನಲ್ಲ. ಹಳ್ಳಿ ಜನರು ರೈತರಿಗಾಗಿ ದುಡಿಯುತ್ತೇನೆ.

ಆಲೂಗೆಡ್ಡೆ ತರಕಾರಿ ಬೆಳೆದು ಕೋಟಿಗಟ್ಟಲೆ ಆಸ್ತಿ?

ಆಲೂಗೆಡ್ಡೆ ತರಕಾರಿ ಬೆಳೆದು ಕೋಟಿಗಟ್ಟಲೆ ಆಸ್ತಿ?

ಆಲೂಗೆಡ್ಡೆ ತರಕಾರಿ ಬೆಳೆದು ಕೋಟಿಗಟ್ಟಲೆ ಆಸ್ತಿ ಮಾಡಲು ಸಾಧ್ಯವೇ ಎಂದು ಸಿದ್ದು ಕೇಳಿದ್ದಾರೆ? ಆದರೆ, ಸುಮ್ಮನೆ ಆರೋಪ ಮಾಡಬೇಕು ಎಂದು ಸಿದ್ದು ಮಾಡಿದ್ದಾರೆ. ಚುನಾವಣೆ ಸಮಯದ ಆರೋಪ.. ಸಂದೇಶವಿದ್ದರೆ ಸಿಓಡಿ, ಸಿಬಿಐ ತನಿಖೆ ನಡೆಸಲಿ.

ಸಿದ್ದುಗೆ ಸಿಎಂ ಪಟ್ಟ ತಪ್ಪಿದ್ದರ ಬಗ್ಗೆ

ಸಿದ್ದುಗೆ ಸಿಎಂ ಪಟ್ಟ ತಪ್ಪಿದ್ದರ ಬಗ್ಗೆ

ಮುಲಾಯಂ ಸಿಂಗ್ ಅವರು ಸಕ್ರಿಯವಾಗಿದ್ದರೂ ಅಖಿಲೇಶ್ ಯಾದವ್ ಅವರನ್ನು ಸಿಎಂ ಮಾಡಿದರು. ಅದೇ ರೀತಿ ಅಂದು ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡಲಾಯಿತು ರೇವಣ್ಣ ಅವರನ್ನು ಡಿಸಿಎಂ ಮಾಡಲಿಲ್ಲ.

ರೇವಣ್ಣ ಅವರು ಸರ್ಕಾರದಿಂದ ಆಚೆ ಇದ್ದರು ಈ ಬಗ್ಗೆ ಯಾಕೆ ಯಾರೂ ಮಾತನಾಡಲಿಲ್ಲ. ಎರಡು ಸಲ ಪಟ್ಟ ತಪ್ಪಿದೆ ಎಂದು ಸಿದ್ದು ಏಕೆ ಹೇಳುತ್ತಾರೋ ಗೊತ್ತಿಲ್ಲ. ಅವರನ್ನೇ ಕೇಳಬೇಕು.

ಹಾಸನದಲ್ಲಿ ತಂದೆಗೆ ಬಲಗೈ ಎಂದರೆ ನನ್ನ ತಾಯಿ

ಹಾಸನದಲ್ಲಿ ತಂದೆಗೆ ಬಲಗೈ ಎಂದರೆ ನನ್ನ ತಾಯಿ

ಹಾಸನದಲ್ಲಿ ತಂದೆಗೆ ಬಲಗೈ ಎಂದರೆ ನನ್ನ ತಾಯಿ.. ಅವರಿಗೆ ಚುನಾವಣೆ ಸ್ಪರ್ಧೆ ಆಸೆ ಇರಬಹುದು. ಅದನ್ನೇ ಅವರನ್ನೇ ಕೇಳಿ. ಬೆಂಗಳೂರು ಗ್ರಾಮಾಂತರ, ಮಂಡ್ಯ ಟಿಕೆಟ್ ಗಾಗಿ ಭವಾನಿ ರೇವಣ್ಣ ಅವರು ಹೋರಾಟ ಮಾಡಬೇಕಾಗಿದೆ ಎಂಬುದೆಲ್ಲ ಸುಳ್ಳು. ನಮ್ಮ ಕುಟುಂಬದಲ್ಲಿ ಟಿಕೆಟ್ ಗಾಗಿ ಎಂದೂ ಕಿತ್ತಾಟ ನಡೆದಿಲ್ಲ

ನನಗೆ 25 ತುಂಬಿದ್ದಾರೆ. ನನ್ನನ್ನು ಹಾಸನದಲ್ಲಿ ನಿಲ್ಲಿಸಿ ದೇವೇಗೌಡರು ಕನಕಪುರದ ಕಡೆ ಬರುತ್ತಿದ್ದರು. ನಮ್ಮಲ್ಲಿ ಹಣ ಪ್ರಾಬಲ್ಯವಿಲ್ಲ. ಅಭ್ಯರ್ಥಿಗಳು ಉದ್ದಿಮೆಯಿಂದ ಗಳಿಸಿದ ಹಣ ಪಕ್ಷಕ್ಕೆ ಹಾಕುತ್ತಾರೆ ಎನ್ನಲಾಗದು.

ಸೆಕ್ಯುಲರಿಸಂ ತತ್ವ ಮುಖ್ಯ. ಜಾತಿ ತೊರೆಯಬೇಕು

ಸೆಕ್ಯುಲರಿಸಂ ತತ್ವ ಮುಖ್ಯ. ಜಾತಿ ತೊರೆಯಬೇಕು

ದೇಶ ಉದ್ಧಾರವಾಗಬೇಕಾದಿದ್ದರೆ ಜಾತಿ ತೊರೆಯಬೇಕಾಗುತ್ತದೆ. ದೇವೇಗೌಡರು ಎಲ್ಲೂ ಒಕ್ಕಲಿಗರು ಎಂದು ಹೇಳಿಕೊಂಡಿಲ್ಲ. ಅವರು ಅನುದಾನ ಕೊಡಬೇಕಾಗಿದ್ದರೆ ಜಾತಿ ನೋಡಿ ಕೊಟ್ಟಿದ್ದಲ್ಲ.

ಒಳ್ಳೆ ರಾಜಕಾರಣ ಮಾಡಿದರೆ ಹಣ ಹೆಂಡ ಇಲ್ಲದೆ ಮೇಲಕ್ಕೆ ಬರಕ್ಕೆ ಸಾಧ್ಯ. ನಾನು ಜಾತಿ ಲೀಡರ್ ಆಗಿ ಉಳಿಯುವುದಿಲ್ಲ. ನಾನು ಸಮಾಜದ ನಾಯಕ.

ನಿಖಿಲ್ vs ಪ್ರಜ್ವಲ್ ಫೈಟ್

ನಿಖಿಲ್ vs ಪ್ರಜ್ವಲ್ ಫೈಟ್

ನಮ್ಮದು ಬೇರೆ ಬೇರೆ ಕ್ಷೇತ್ರ ಪೈಪೋಟಿ ಹೇಗೆ ಸಾಧ್ಯ? ನಿಖಿಲ್ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿರಬಹುದು. ನನ್ನ ಕ್ಷೇತ್ರವೇನಿದ್ದರೂ ಹಾಸನ, ಬೇಲೂರು, ಹೊಳೆನರಸೀಪುರ. ಉತ್ತರಾಧಿಕಾರಿ ಸದ್ಯಕ್ಕೆ ಕುಮಾರಣ್ಣ ಇದ್ದಾರೆ. ನಾನು ಒಬ್ಬ ಸೈನಿಕನಾಗಿ ದುಡಿಯಲು ಸಿದ್ಧ.

ಭ್ರಷ್ಟಾಚಾರ ನಿಲ್ಲಿಸುವುದು ಅಸಾಧ್ಯ

ಭ್ರಷ್ಟಾಚಾರ ನಿಲ್ಲಿಸುವುದು ಅಸಾಧ್ಯ

ಭ್ರಷ್ಟಾಚಾರ ನಿಲ್ಲಿಸುವುದು ಅಸಾಧ್ಯ. ಆದರೆ, ಅಳಿಸುವ ಶಕ್ತಿ ಜನರಿಗಿದೆ. ಮೋದಿ ಅಲೆ ಹೇಗೆ ಒಪ್ಪಲು ಸಾಧ್ಯ. ಯಾರ ಮುಖ ನೋಡಿ ಮತ ಹಾಕ್ಬೇಕು?. ಕಾಂಗ್ರೆಸ್ ಮುಳುಗುವ ದೋಣಿ ಆ ಬಗ್ಗೆ ಮಾತಿಲ್ಲ. ಜಿಡಿಪಿ ಪ್ರಗತಿ ಬಿಹಾರ ಒರಿಸ್ಸಾ ಮೇಲಿದೆ. ಇವು ತೃತೀಯರಂಗದವರು ಇವರು ಮುಂದೆ ಇದ್ದಾರೆ ಎನ್ನಬೇಕಾಗುತ್ತದೆ. ಈ ಬಾರಿ ಚುನಾವಣೆ ತೃತೀಯ ರಂಗ vs ಬಿಜೆಪಿ ಮೋದಿ

ಸಿಬಿಐ ತನಿಖೆಗೆ ಕೊಡಿ ಎಂದರೆ ಯಾಕೆ ಕೊಡುತ್ತಿಲ್ಲ

ಸಿಬಿಐ ತನಿಖೆಗೆ ಕೊಡಿ ಎಂದರೆ ಯಾಕೆ ಕೊಡುತ್ತಿಲ್ಲ

ವಿಮಾನಯಾನ ಸಚಿವರಾದಾಗ ಅನಂತ್ ಕುಮಾರ್ ಭ್ರಷ್ಟಚಾರ ಮಾಡಿಲ್ವ.ಸಿಬಿಐ ಹಾಗೂ ಜ್ಯುಡಿಷಿಯಲ್ ವ್ಯವಸ್ಥೆ ಕೈಯಿಟ್ಟುಕೊಂಡರೆ ನ್ಯಾಯ ಎಲ್ಲಿ ಸಿಗುತ್ತೆ.ನಮ್ಮ ಕುಟುಂಬದ ಆಸ್ತಿ ಬಗ್ಗೆ ಅನುಮಾನವಿದ್ದರೆ ಸಿಬಿಐ ತನಿಖೆಗೆ ಕೊಡಿ. ಯಾಕೆ ಕೊಡುತ್ತಿಲ್ಲ. ಎಚ್ಡಿಕೆ, ವಿಲ್ ಸೇ ಸೇಮ್ ವರ್ಡ್ ..ವೀ ಆರ್ ರೆಡಿ ಟು ಫೈಟ್,

English summary
Prajwal Revanna son of MLA HD Revanna hints about his entry in to active politics. Prajwal Revanna campaigned for Hassan candidate HD Deve Gowda. He said Deve Gowda not encouraging Family politics in JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X