ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲೇ ಅತಿ ಕಡಿಮೆ ವಾಯು ಮಾಲಿನ್ಯ ಹಾಸನದಲ್ಲಿ

By Ashwath
|
Google Oneindia Kannada News

ಬೆಂಗಳೂರು, ಮೇ. 12: ಹಾಸನದ ಜನತೆ ಒಂದು ಗುಡ್‌ ನ್ಯೂಸ್‌. ದೇಶದಲ್ಲಿ ಅತಿ ಕಡಿಮೆ ವಾಯು ಮಾಲಿನ್ಯ ವಾಗುತ್ತಿರುವ ನಗರಗಳ ಪಟ್ಟಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಹಾಸನ ಮೂರನೇ ಸ್ಥಾನ ಪಡೆದುಕೊಂಡಿದೆ.

ಡಬ್ಲ್ಯೂಎಚ್‌ಓ ಪಟ್ಟಿಯಲ್ಲಿ ದೇಶದ ಮೊದಲ ಎರಡು ಸ್ಥಾನಗಳು ಕೇರಳದ ಪಾಲಗಿದ್ದು, ಕೊಲ್ಲಂ ಮತ್ತು ಪತ್ತನಂತಿಟ್ಟ ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನ ಪಡೆದುಕೊಂಡಿದೆ.[ಬೆಂಗಳೂರಿನಲ್ಲಿ ಹಸಿರೇ ಉಸಿರೆನ್ನುವ ನಿಕ್ ಹಾಲಿಕ್]

ವಿಶ್ವದ 91 ದೇಶಗಳ 1,600 ನಗರಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆ ಈ ಸ್ಥಾನವನ್ನು ನೀಡಿದ್ದು ವಿಶ್ವದಲ್ಲಿ ಅತೀ ಹೆಚ್ಚು ಮಾಲಿನ್ಯ ಹೊಂದಿದ ನಗರಿಗಳ ಪೈಕಿ ನವದೆಹಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

Hassan
ಭಾರತದ ಒಟ್ಟು 12 ನಗರಗಳು ಟಾಪ್ 20 ಮಾಲಿನ್ಯ ನಗರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಕೊಂಡಿದೆ. ಪಾಟ್ನಾ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಗ್ವಾಲಿಯರ್, ನಾಲ್ಕನೇ ಸ್ಥಾನದಲ್ಲಿ ರಾಯ್‌ಪುರ ಇದೆ.[ಪರಿಸರ ಕಾಳಜಿಗೆ 75 ವಯಸ್ಸಿನ ಅಜ್ಜನೇ ಸ್ಫೂರ್ತಿ]

ಅಹ್ಮದಾಬಾದ್, ಲಕ್ನೋ, ಫಿರೋಜಾಬಾದ್, ಖಾನ್‌ಪುರ, ಅಮೃತಸರ, ಅಲಹಾಬಾದ್, ಅಗ್ರಾಗಳು ಟಾಪ್ 20ರಪಟ್ಟಿಯಲ್ಲಿ ಸ್ಥಾನ ಗಳಿಸಿದೆ. ಈ ಅಧ್ಯಯನಕ್ಕೆ ರಾಜ್ಯದ ಬೆಂಗಳೂರು ಮತ್ತು ಗುಲ್ಬರ್ಗಾ ನಗರಗಳನ್ನು ಪರಿಗಣಿಸಲಾಗಿತ್ತು.

English summary
Hassan city is among three Indian cities with minimum air pollution, according to the latest World Health Organisation (WHO) study on ambient air quality. The study spanned over 1,600 cities in 91 countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X