ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್ ವಿಮಾನ ನಿಲ್ದಾಣದ ಕನಸಿಗೆ ಮತ್ತೆ ರೆಕ್ಕೆ

|
Google Oneindia Kannada News

ಬೆಂಗಳೂರು, ಮೇ.1: ಬೀದರ್ ಜಿಲ್ಲೆಯ ಜನರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಬೀದರ್‌ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ವಿಮಾನ ಸಂಪರ್ಕಕ್ಕೆ ಇರುವ ಅಡ್ಡಿಗಳನ್ನು ನಿವಾರಿಸುವಂತೆ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ರೋಷನ್‌ ಬೇಗ್‌ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಬುಧವಾರ ನವದೆಹಲಿಗೆ ತರಳಿರುವ ಸಚಿವ ರೋಷನ್ ಬೇಗ್, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಅಶೋಕ್‌ ಲಾಸ್ವ ಅವರನ್ನು ಭೇಟಿ ಮಾಡಿ, ಬೀದರ್ ವಿಮಾನ ನಿಲ್ದಾಣದ ಕುರಿತು ಮಾತುಕತೆ ನಡೆಸಿದ್ದಾರೆ. ಹಲವಾರು ವಿವಾದಗಳಿಂದಾಗಿ ವಿಮಾನ ನಿಲ್ದಾಣ ಉದ್ಘಾಟನೆ ವಿಳಂಬವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Roshan Baig

ಹೈದರಾಬಾದ್‌ ವಿಮಾನ ನಿಲ್ದಾಣವನ್ನು ನಿರ್ಮಿಸಿರುವ ಜಿಎಂಆರ್‌ ಸಂಸ್ಥೆಯು ಬೀದರ್‌ ನಲ್ಲಿ ವಿಮಾನಯಾನ ಸೇವೆ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಎರಡು ವಿಮಾನ ನಿಲ್ದಾಣಗಳ ನಡುವೆ ಕನಿಷ್ಠ 150 ಕಿ.ಮೀ. ಅಂತರವಿರಬೇಕು ಎಂದು ಜಿಎಂಆರ್‌ ಸಂಸ್ಥೆ ತಕರಾರು ಎತ್ತಿದೆ ಎಂದು ಹೇಳಿದ್ದಾರೆ. [ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ]

ಸಚಿವ ರೋಷನ್ ಬೇಗ್ ಮನವಿಗೆ ಸ್ಪಂದಿಸಿರುವ ಲಾಸ್ವ, ತಕ್ಷಣವೇ ಈ ಬಗ್ಗೆ ಜಿಎಂಆರ್‌ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲು ಪ್ರಯತ್ನಿಸುವ ಭರವಸೆ ನೀಡಿದ್ದಾರೆ. ಇದರಿಂದ ಬೀದರ್ ವಿಮಾನ ನಿಲ್ದಾಣ ಶೀಘ್ರದಲ್ಲೇ ಆರಂಭವಾಗು ಸಾಧ್ಯತೆ ಇದೆ.

ಬೀದರ್ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದು, ಅದನ್ನು ಉದ್ಘಾಟನೆ ಮಾಡಲು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದಿಂದ ಅಗತ್ಯ ಅನುಮತಿ ದೊರಕಿಲ್ಲ. ಹೈದರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿರುವ ಜಿಎಂಆರ್ ಸಂಸ್ಥೆ ತಕರಾರು ಎತ್ತಿರುವುದರಿಂದ ವಿಳಂಬವಾಗುತ್ತಿದೆ ಎಂದು ಬೇಗ್ ಹೇಳಿದರು.

English summary
Karnataka Infrastructure Minister Roshan Baig meets civil aviation secretary Ashok Lavasa and dicuss about with the GMRBSE group objection to operation of facilities available at Bidar airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X