ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ, ಜಿನ್‌ಪಿಂಗ್‌ ಕೈ ಸೇರಿದ ಕರ್ನಾಟಕ ಚರಕ

|
Google Oneindia Kannada News

ಬೆಂಗಳೂರು, ಅ. 2 : ನಮ್ಮ ರಾಜ್ಯದಲ್ಲಿ ತಯಾರಾದ ಚರಕ ಮಾದರಿಗಳು ಅಮೆರಿಕ, ಚೀನಾದ ಅಧ್ಯಕ್ಷರ ಕೋಣೆಗಳ ಸೆಲ್ಫ್ ಗಳ ಮೇಲೆ ಮಿನುಗುತ್ತಿವೆ ಎಂಬ ಸಂಗತಿಯನ್ನು ನೀವು ನಂಬಲೆಬೇಕು.

ಮಹಾತ್ಮ ಗಾಂಧೀಜಿ ತತ್ವ ಆದರ್ಶಗಳಲ್ಲಿ ಒಂದಾದ ಖಾದಿ ಬಟ್ಟೆ ಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕರ್ನಾಟಕದ ಕಂಪನಿಯೊಂದು ಕಳೆದ ಮೂರು ವರ್ಷಗಳಿಂದ ಸದ್ದಿಲ್ಲದೇ ಮಾಡಿಕೊಂಡು ಬರುತ್ತಿದೆ. ಚರಕದ ಮಾದರಿಗಳನ್ನು ತಯಾರಿಸಲು ಗುಜರಾತಿನ ಸಬರಮತಿ ಆಶ್ರಮದಿಂದ ಅನುಮತಿ ಪಡೆದಿರುವ ಕರ್ನಾಟಕದ ಏಕೈಕ ಸಂಸ್ಥೆ ಸ್ವದೇಶ್‌ ಎಂಟರ್‌ಪ್ರೈಸಸ್‌ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದೆ.

ಚರಣ್‌ ಭಾಸ್ಕರಾಚಾರ್‌ ಎಂಬುವರು ಮೂರು ವರ್ಷದ ಕೆಳಗೆ ಆರಂಭಿಸಿದ ಸ್ವದೇಶ್‌ ಎಂಟರ್‌ಪ್ರೈಸಸ್‌ ಇಂದು 25 ಜನ ಕಾರ್ಮಿಕರನ್ನೊಳಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಣಾವರದಲ್ಲಿ ಘಟಕ ಕಾರ್ಯನಿರತವಾಗಿದೆ. ಇಲ್ಲಿ ತಯಾರಾಗುವ ಚರಕದ ಮಾದರಿಗಳು ದೇಶ-ವಿದೇಶದ ಗಣ್ಯರಿಗೆ ನೆನಪಿನ ಕಾಣಿಕೆಯಾಗಿ ರವಾನೆಯಾಗುತ್ತಿವೆ.[ಸ್ವಚ್ಛ ಭಾರತ ಅಭಿಯಾನಕ್ಕಾಗಿ ಗಾಂಧಿ ಜಯಂತಿ ರಜೆ ಇಲ್ಲ]

gandhiji

ನಮಗೆ ಹೊರದೇಶಗಳಿಂದಲೂ ಬೇಡಿಕೆ ಬರುತ್ತಿದೆ. ಭಾರತದ ಮೂಲದವರು ವಿದೇಶಗಳಿಂದಲೂ ಆರ್ಡರ್ ಕಳುಹಿಸುತ್ತಿದ್ದಾರೆ. ಪೆರುವಿನಿಂದಲೂ ಬೇಡಿಕೆ ಬಂದಿದೆ. ಅಮೆರಿಕದ ಅಧ್ಯಕ್ಷ ಬರಾಕ್‌ ಒಮಾಮ, ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಕ್ಸಿ ಜಿನ್‌ಪಿಂಗ್ ಅವರಿಗೂ ಸಹ ನಮ್ಮ ಸಂಸ್ಥೆಯಲ್ಲೇ ತಯಾರು ಮಾಡಿದ ಚರಕದ ಮಾದರಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದು ಹೆಮ್ಮೆ ತಂದಿದೆ ಎಂದು ಚರಣ್‌ ಭಾಸ್ಕರಾಚಾರ್‌ ಹೇಳುತ್ತಾರೆ.

ಸಾಕ್ಷಚಿತ್ರ ನಿರ್ಮಾಣ ಮಾಡಿಕೊಂಡಿದ್ದ ಭದ್ರಾವತಿ ಮೂಲದ ಭಾಸ್ಕರಾಚಾರ್‌ ಚರಕ ಮಾದರಿ ತಯಾರಿಕೆ ಆರಂಭಿಸಿ ಯಶಸ್ಸು ಸಾಧಿಸಿದ್ದಾರೆ. ಚರಣ್‌ ತಮ್ಮ ತಂದೆ ಖಾದಿ ಭಾಸ್ಕರಾಚಾರ್ ಅವರಿಂದ ಪ್ರಭಾವಿತರಾಗಿ ಚರಕದ ಮಾದರಿ ತಯಾರಿಕೆಯಂಥ ವಿಶಿಷ್ಟ ಕೆಲಸ ಶುರುವಿಟ್ಟುಕೊಂಡರು.[ಗಾಂಧೀಜಿ ಸ್ವಚ್ಛ ಭಾರತ ಕನಸು ನನಸಾಗಿಸೋಣ: ಮೋದಿ]

ಸಾಕ್ಷಚಿತ್ರಕ್ಕೆ ಸಂಬಂಧಿಸಿ ಭಾಸ್ಕರಾಚಾರ್‌ ಗೆ ಚರಕವೊಂದರ ಅಗತ್ಯಬಿತ್ತು. ಆದರೆ ಒಂದೇ ಒಂದು ಚರಕ ಮಾದರಿ ತರಲು ಆಚಾರ್‌ ಪರದಾಡಬೇಕಾಯಿತು. ಇದಾದ ನಂತರ ಸ್ವತಃ ಆಚಾರ್‌ ಚರಕ ಮಾದರಿ ನಿರ್ಮಾಣಕ್ಕೆ ನಿಂತರು. ಕೆಲ ಸಮಸ್ಯೆಗಳು ಎದುರಾದರೂ ಆಚಾರ್‌ ಎಲ್ಲವನ್ನೂ ಮೆಟ್ಟಿ ಯಶಸ್ಸು ಸಾಧಿಸಿದರು.

ಈಗ ಪ್ರತಿ ತಿಂಗಳು ಮೂರು ಸಾವಿರಕ್ಕೂ ಅಧಿಕ ಚರಕದ ಮಾದರಿ ತಯಾರು ಮಾಡಲಾಗುತ್ತದೆ. ಚರಕದ ಮಾದರಿಯನ್ನು ನೆನಪಿನ ಕಾಣಿಕೆಯನ್ನಾಗಿ ನೀಡುವುದು ಒಂದು ಪರಂಪರೆ ಮತ್ತು ಪ್ರತಿಷ್ಠೆಯಾಗಿ ಬೆಳೆಯುತ್ತಿದೆ. 500 ರೂ. ನಿಂದ 5 ಸಾವಿರ ರೂ. ವರೆಗೂ ಚರಕದ ಮಾದರಿಗಳು ಲಭ್ಯವಿವೆ ಎಂದು ಆಚಾರ್‌ ಮಾಹಿತಿ ನೀಡುತ್ತಾರೆ.

English summary
Bangalore-based Swadesh Enterprises, the only company in Karnataka to obtain permission from Khadi Bhandar Sabarmati in Gujarat to make miniature models. Swadesh Enterprises started as a small venture by Sri Charan Bhaskarachar three years ago. It now employs 25 workers crafting six models of charakas at a unit at Banavara in Chikmagalur district. The charakas are gifted as mementos in India and abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X