ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ರೈಲುಗಳ ಪ್ರಯಾಣಿಕರಿಗೆ ವೈಫೈ ಭಾಗ್ಯ

|
Google Oneindia Kannada News

ಬೆಂಗಳೂರು, ಆ.23 : ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಲು ಸಿದ್ಧವಾಗುತ್ತಿರುವ ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ನಾಲ್ಕು ರೈಲುಗಳಲ್ಲಿ ವೈಫೈ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧತೆ ಆರಂಭಿಸಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ನಾಲ್ಕು ರೈಲುಗಳಲ್ಲಿ ಅಳವಡಿಸಲಾಗುತ್ತದೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ನೈರುತ್ಯ ರೈಲ್ವೆ ವಲಯದ ನಿರ್ದೇಶಕರಾದ ರಾಜ್‌ಕುಮಾರ್ ಲಾಲ್‌ ಅವರು, ಏರ್‌ಟೆಲ್ ಮತ್ತು ವೋಡಾಫೋನ್ ಸಂಸ್ಥೆಯೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದು, ಎರಡು ಕಂಪನಿಗಳು ನಾಲ್ಕು ರೈಲುಗಳಲ್ಲಿ ವೈಫೈ ವ್ಯವಸ್ಥೆ ಕಲ್ಪಿಸಲಿವೆ ಎಂದು ಹೇಳಿದರು.

Indian Railways

ಪ್ರಾಯೋಗಿಕವಾಗಿ ಚಾಮುಂಡಿ, ಟಿಪ್ಪು, ಬೆಂಗಳೂರು-ಧಾರವಾಡ ಮತ್ತು ಬೆಂಗಳೂರು ಶಿವಮೊಗ್ಗ ಇಂಟರ್‌ಸಿಟಿ ಎಕ್ಸ್‌ಪೆಸ್ ರೈಲುಗಳಲ್ಲಿ ವೈಫೈ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು. ಈ ಸೇವೆಗೆ ಸಿಗುವ ಪ್ರತಿಕ್ರಿಯೆಯನ್ನು ಗಮನಿಸಿ ಯೋಜನೆ ವಿಸ್ತರಣೆ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ರಾಜ್‌ಕುಮಾರ್ ಲಾಲ್‌ ತಿಳಿಸಿದ್ದಾರೆ. [ಶೀಘ್ರದಲ್ಲೇ ಸ್ಥಾಪನೆಯಾಗಲಿದೆ ರೈಲ್ವೆ ವಿವಿ]

ಹೊಸ ಟಿಕೆಟ್ ಕೌಂಟರ್ ಆರಂಭ : ರೈಲ್ವೆ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಲು ಆಗುವ ತೊಂದರೆಯನ್ನು ತಪ್ಪಿಸಲು ನೂತನವಾಗಿ ಯಾತ್ರಿ ಟಿಕೆಟ್ ಸುವಿಧಾ ಕೇಂದ್ರಗಳನ್ನು ಇಲಾಖೆ ಆರಂಭಿಸಲಿದೆ. ಪಿಪಿಪಿ ಮಾದರಿಯಲ್ಲಿ ಈ ಕೇಂದ್ರಗಳನ್ನು ದೇಶದ ಹಲವು ನಗರಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. [ಒಂದು ವರ್ಷದಲ್ಲಿ ಬೆಂಗಳೂರು ವೈಫೈ ಸಿಟಿ]

ಮೈಸೂರಿನಲ್ಲಿ ಅಡುಗೆ ಮನೆ : ರೈಲ್ವೆ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಮಾಡಲು ಮೈಸೂರಿನಲ್ಲಿ ರೈಲ್ವೆ ಅಡುಗೆ ಮನೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಆರು ತಿಂಗಳಿನಲ್ಲಿ ಈ ಅಡುಗೆ ಮನೆ ಕಾರ್ಯಾರಂಭ ಮಾಡಲಿದೆ.

English summary
The South Western Railway (SWR) in its efforts to provide more facilities for people, will introduce Wi-Fi facility in four trains, on a pilot basis said, SWR Divisional Railway Manager Rajkumar Lal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X