ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯವಾಗಿ ಮಹತ್ವದ ನಿರ್ಧಾರಕ್ಕೆ ಬಂದ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಸೆ 12: ಜೆಡಿಎಸ್ ವರಿಷ್ಠ ದೇವೇಗೌಡ್ರು ಬೆಂಗಳೂರಿನಿಂದ ಹೊರಗೆ ಹಾಸನದಲ್ಲಿ ನೆಲೆಸಲು ನಿರ್ಧರಿಸಿದಂತೆ, ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ರಾಜಕೀಯವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಪಕ್ಷಕ್ಕೆ ನೆಲೆಯಿಲ್ಲದ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗಲು ನಿರ್ಧರಿಸಿರುವ ಕುಮಾರಸ್ವಾಮಿ, ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರ ಹುಬ್ಬಳ್ಳಿಯಲ್ಲಿ ಮನೆ ಮಾಡಲು ನಿರ್ಧರಿಸಿದ್ದಾರೆ.

ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಸರಕಾರ ಲಘುವಾಗಿ ತೆಗೆದುಕೊಂಡಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಇತ್ತೀಚೆಗೆ ನಾನು ಉತ್ತರ ಕರ್ನಾಟಕದ ಭಾಗಕ್ಕೆ ಭೇಟಿ ನೀಡಿದಾಗ ಅಲ್ಲಿನ ಜನರು ತೋರಿಸಿದ ಪ್ರೀತಿಗೆ ಆಭಾರಿಯಾಗಿದ್ದೇನೆ. ಪಕ್ಷಕ್ಕೆ ಈ ಭಾಗದಲ್ಲಿ ನೆಲೆಯಿಲ್ಲ ಎನ್ನುವುದನ್ನು ಅರಿತಿದ್ದೇನೆ. (ಹುತಾತ್ಮನಾಗಲು ಸಿದ್ದ: ಕುಮಾರಸ್ವಾಮಿ)

ನನ್ನ ಭೇಟಿಯ ವೇಳೆ ಕಾರ್ಯಕರ್ತರಿಂದ ಮತ್ತು ಸಾರ್ವಜನಿಕರಿಂದ ಪಕ್ಷ ಸಂಘಟನೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಹುಬ್ಬಳ್ಳಿಯಲ್ಲಿ ಮನೆ ಮತ್ತು ಕಚೇರಿ ಮಾಡಿ ಪಕ್ಷ ಬಲವರ್ಧನೆಗೆ ನಿರ್ಧರಿಸಿದ್ದೇನೆಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರ ತಾಕತ್ತಿಗೆ ಸವಾಲ್ ಹಾಕಿದ ಕುಮಾರಸ್ವಾಮಿ, ಉಗ್ರಪ್ಪ ಅವರನ್ನು ಬೆಂಡೆತ್ತಿದ್ದು ಹೀಗೆ..

ಸದನ ಸಮಿತಿ ರಚಿಸಲು ಏನು ತೊಂದರೆ?

ಸದನ ಸಮಿತಿ ರಚಿಸಲು ಏನು ತೊಂದರೆ?

ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಶನ್ ವಿಚಾರದಲ್ಲಿ ಸದನ ಸಮಿತಿಯೊಂದನ್ನು ರಚಿಸಲು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಸರಕಾರ ಎಲ್ಲವನ್ನೂ ಲಘುವಾಗಿ ತೆಗೆದುಕೊಳ್ಳುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.

ಉಗ್ರಪ್ಪನವರ ತಾಕತ್ತಿಗೆ ಸವಾಲು ಹಾಕಿದ ಕುಮಾರಸ್ವಾಮಿ

ಉಗ್ರಪ್ಪನವರ ತಾಕತ್ತಿಗೆ ಸವಾಲು ಹಾಕಿದ ಕುಮಾರಸ್ವಾಮಿ

ಪದೇ ಪದೇ ಗಣಿ ಅವ್ಯವಹಾರದಲ್ಲಿ ನನ್ನನ್ನು ವಿನಾಕಾರಣ ಸಿಲುಕಿಸುತ್ತಿರುವ ಉಗ್ರಪ್ಪನವರ ತಾಕತ್ತಿಗೆ ಕುಮಾರಸ್ವಾಮಿ ಸವಾಲೆಸಿದಿದ್ದಾರೆ. ನೀವು ಬರೀ ಆರೋಪ ಮಾಡುವುದಲ್ಲ, ನಿಮ್ಮ ಆರೋಪವನ್ನು ಸಾಬೀತು ಪಡಿಸಿ - ಕುಮಾರಸ್ವಾಮಿ ಸವಾಲ್.

ನಿಮ್ಮದೇ ಸರಕಾರ ಇದೆ ಸ್ವಾಮಿ

ನಿಮ್ಮದೇ ಸರಕಾರ ಇದೆ ಸ್ವಾಮಿ

ರಾಜ್ಯದಲ್ಲಿ ನಿಮ್ಮದೇ ಸರಕಾರವಿದೆ. ಪದೇ ಪದೇ ಯಾಕೆ 150 ಕೋಟಿ ಆರೋಪವನ್ನು ನನ್ನ ಮೇಲೆ ಹೊರೆಸುತ್ತಿದ್ದೀರಾ? ತಾಕತ್ತಿದ್ದರೆ ವಿಚಾರಣೆ ನಡೆಸಿ, ಆರೋಪವನ್ನು ಸಾಬೀತು ಪಡಿಸಿ ಉಗ್ರಪ್ಪಗೆ ಕುಮಾರಸ್ವಾಮಿ ಸವಾಲ್.

ನನ್ನ ಮೇಲಿನ ಸಿಡಿ ಬಿಡುಗಡೆ ಮಾಡಿದವರು ಈಗ ಎಲ್ಲಿದ್ದಾರೆ

ನನ್ನ ಮೇಲಿನ ಸಿಡಿ ಬಿಡುಗಡೆ ಮಾಡಿದವರು ಈಗ ಎಲ್ಲಿದ್ದಾರೆ

ಉಗ್ರಪ್ಪನವರೇ, ಬರೀ ಉಡಾಫೆಯ ಮಾತು ಯಾಕೆ. ಆರೋಪ ಸಾಬೀತು ಪಡಿಸಿ ಸ್ವಾಮಿ, ನಮ್ಮದೇನು ಅಭ್ಯಂತರವಿಲ್ಲ. ನನ್ನ ಮೇಲೆ 150 ಕೋಟಿ ಗಣಿ ಹಗರಣದ ಆರೋಪ ಮಾಡಿದವರು ಈಗ ಎಲ್ಲಿದ್ದಾರೆ ಎನ್ನುವುದು (ಜನಾರ್ಧನ ರೆಡ್ಡಿ) ರಾಜ್ಯದ ಜನತೆಗೆ ಗೊತ್ತು.

ನೆರೆ ಪೀಡಿತ ಪ್ರದೇಶಕ್ಕೆ ಕುಮಾರಸ್ವಾಮಿ

ನೆರೆ ಪೀಡಿತ ಪ್ರದೇಶಕ್ಕೆ ಕುಮಾರಸ್ವಾಮಿ

ಗದಗ ಮತ್ತು ಧಾರವಾಡ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಕುಮಾರಸ್ವಾಮಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, ನಿಮಗೆ ಧಮ್ ಅನ್ನೋದು ಇದ್ದರೆ, ನಿಮ್ಮದೇ ಸರಕಾರ ಬೇರೆ ಇಲ್ಲಿದೆ. ನೀವು ಮಾಡುತ್ತಿರುವ ಆರೋಪವನ್ನು ಮೊದಲು ಸಾಬೀತು ಪಡಿಸಿ ಎಂದು ಉಗ್ರಪ್ಪನವರಿಗೆ ಎಚ್ದಿಕೆ ನೇರ ಸವಾಲೆಸೆಸಿದ್ದಾರೆ.

English summary
Former Chief Minister and JDS leader H D Kumaraswamy decides to relocate to Hubli. Reason : Party loosing grounds in North Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X