ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಚಾ ದಿನ್ ಆಯೇಂಗೆ: ಆದ್ರೆ ದರ ಏರಿಕೆ ಅನಿವಾರ್ಯ

|
Google Oneindia Kannada News

ಬೆಂಗಳೂರು, ಜೂ 23: 'ದೇಶ್ ಕೊ ಅಚ್ಚೇ ದಿನ್ ಆನೇವಾಲಾಹೇ' ಎಂದು ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಟ್ವೀಟ್ ಸಂದೇಶ ಕಳುಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚಾ ದಿನ್ ಅಂದ್ರೇ ಇದೇನಾ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ರೈಲ್ವೆ ಸಚಿವರು ಬೆಲೆ ಏರಿಕೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಭಾನುವಾರ (ಜೂ 22) ಐಬಿಎನ್ ವಾಹಿನಿ ಜೊತೆ ಮಾತನಾಡುತ್ತಿದ್ದ ಸಚಿವ ಸದಾನಂದ ಗೌಡ, ರೈಲ್ವೆ ಸುರಕ್ಷತೆ, ಅತ್ಯಾಧುನಿಕ ವ್ಯವಸ್ಥೆ ಮತ್ತು ಇಲಾಖೆಯ ಕಾರ್ಮಿಕರಿಗೆ ವೇತನ ನೀಡುವ ನಿಟ್ಟಿನಲ್ಲಿ ಪ್ರಯಾಣದ ದರ ಏರಿಕೆ ಅನಿವಾರ್ಯ ಎಂದು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. (ರೈಲ್ವೆ ಮತ್ತು ಕೇಂದ್ರ ಬಜೆಟ್ ಮಂಡನೆಗೆ ದಿನಾಂಕ ನಿಗದಿ)

ದೇಶದಲ್ಲಿ ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರೈಲ್ವೆ ಇಲಾಖೆ ಮತ್ತು ಅತಿ ಹೆಚ್ಚು ಇಂಧನ ತುಂಬಿಸ ಬೇಕಾದ ಅನಿವಾರ್ಯತೆ ಇಲಾಖೆಗೆ ಇರುವುದರಿಂದ ಆದಾಯಕ್ಕಿಂತ ನಷ್ಟವೇ ಹೆಚ್ಚಾಗಿದೆ. ಇದರಿಂದಾಗಿ ಇಲಾಖೆಯ ಆಧುನೀಕರಣ ವ್ಯವಸ್ಥೆಗೆ ಆರ್ಥಿಕ ಮುಗ್ಗಟ್ಟು ಎದುರಾಗಿರುವುದು ಸಹಜ ಎಂದು ಸದಾನಂದ ಗೌಡ ಹೇಳಿದ್ದಾರೆ.

ಹಳೆಯ ಸರಕಾರ ರೈಲ್ವೆ ಖಜಾನೆಯನ್ನು ಬರಿದಾಗಿಸಿರುವುದು ವಾಸ್ತವತೆಯಾದರೂ, ಅದರ ಲಾಭ ಪಡೆದುಕೊಳ್ಳುವ ಇರಾದೆ ನಮಗಿಲ್ಲ. ನಮ್ಮ ಸರಕಾರದ ಮೇಲೆ ಜನ ನಂಬಿಕೆ ಇಟ್ಟು ಆರಿಸಿದ್ದಾರೆ. ಉತ್ತಮ ಸೇವೆ ನೀಡಲು ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸದಾನಂದ ಗೌಡ ದರ ಏರಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಐಬಿಎನ್ ವಾಹಿನಿಗೆ ನೀಡಿದ ಸಂದರ್ಶನದ ಮುಂದಿನ ಭಾಗ ಸ್ಲೈಡಿನಲ್ಲಿ...

ವಿಶ್ವದರ್ಜೆಯ ಸೇವೆ

ವಿಶ್ವದರ್ಜೆಯ ಸೇವೆ

ನಮ್ಮ ದೇಶದಲ್ಲಿ ರೈಲು ಪ್ರಯಾಣಕ್ಕೆ ಇರುವ ಮಹತ್ವ ನಮಗೆ ಅರಿತಿದೆ. ಹಿಂದಿನ ಸರಕಾರ ಖಜಾನೆಯನ್ನು ಬರಿದಾಗಿಸಿದ್ದನ್ನು ನಾನು ಟೀಕಿಸಿದ್ದೇನೆ ಆದರೆ ಹಿಂದಿನ ಸಚಿವರ ವೈಯಕ್ತಿಕ ನಿಂದನೆ ಮಾಡಿಲ್ಲ. ವಿಶ್ವದರ್ಜೆಯ ಪ್ರಯಾಣ ಮತ್ತು ರೈಲ್ವೆ
ತಂಗುದಾಣದ ಆಧುನೀಕರಣ ನಮ್ಮ ಮುಂದಿನ ಗುರಿ. ಹಾಗಾಗಿ ಪ್ರಯಾಣ ದರ ಏರಿಕೆ ಅನಿವಾರ್ಯ.

ಈಗಿನ ಏರಿಕೆನೂ ಕಮ್ಮಿಯೇ

ಈಗಿನ ಏರಿಕೆನೂ ಕಮ್ಮಿಯೇ

ರೈಲ್ವೆ ಇಲಾಖೆ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿದೆ. ಈಗಿನ ಬೆಲೆ ಏರಿಕೆ ಪ್ರಮಾಣ ನಷ್ಟವನ್ನು ಸರಿದೂಗಿಸುವುದಿಲ್ಲ. ಮತ್ತೊಮ್ಮೆ ಬೆಲೆ ಏರಿಕೆಯ ಬಗ್ಗೆ ಈಗಲೇ ಮಾತನಾಡುವುದು ಸರಿಯಲ್ಲ. ರೈಲ್ವೆ ಬಜೆಟ್ ಮಂಡಿಸುತ್ತಿದ್ದೇನೆ, ಈಗಿನ ಪ್ರಯಾಣ ದರದ ಏರಿಕೆ ಏನಿದೆಯೋ ಅದು ಕಾಂಗ್ರೆಸ್ ಪ್ರಸ್ತಾವ ಸಲ್ಲಿಸಿರುವುದು ಎನ್ನುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು.

18 ಸಾವಿರ ಕೋಟಿ ನಷ್ಟ

18 ಸಾವಿರ ಕೋಟಿ ನಷ್ಟ

ಬೆಲೆ ಏರಿಕೆಯ ನಂತರವೂ ರೈಲ್ವೆ ಇಲಾಖೆ 18 ಸಾವಿರ ಕೋಟಿ ನಷ್ಟ ಅನುಭವಿಸುತ್ತದೆ. ಬೆಲೆ ಏರಿಕೆಯನ್ನು ಈಗ ವಿರೋಧಿಸುತ್ತಿರುವವರಿಗೆಲ್ಲಾ ಗೊತ್ತಿದೆ, ಬೆಲೆ ಏರಿಕೆ ಅನಿವಾರ್ಯವೆಂದು. ಆದರೆ ನಮ್ಮ ರಾಜಕೀಯ ವಿರೋಧಿಗಳು ಅದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ರಾಜ್ಯದ ರೈಲ್ವೇ ಸಚಿವರು

ರಾಜ್ಯದ ರೈಲ್ವೇ ಸಚಿವರು

ಕರ್ನಾಟಕ, ಬಿಹಾರ ಅಥವಾ ಬೆಂಗಾಳ ಮೂಲದವರು ರೈಲ್ವೆ ಸಚಿವರಾದರೆ ಅವರ ರಾಜ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಗೌಡ, ಇದು KSRTC ಅಥವಾ APSRTC ಅಲ್ಲ. ಕರ್ನಾಟಕ ಅಥವಾ ಕಾಶ್ಮೀರ ಎನ್ನುವ ಭಾವನೆ ನಮಗಿಲ್ಲ. ಕರ್ನಾಟಕದವರು ವೈಷ್ಣೋದೇವಿಗೆ ಪ್ರಯಾಣಿಸುವುದಿಲ್ಲವೇ? ನನ್ನ ಕ್ಷೇತ್ರಕ್ಕೆ ಶೇ. 5 ಮತ್ತು ನನ್ನ ರಾಜ್ಯದ ಬಗ್ಗೆ ಶೇ.10ರಷ್ಟು ಒಲವು ಹೆಚ್ಚಿರುವುದು ಸ್ವಾಭಾವಿಕ. ನಾನು ಕರ್ನಾಟಕದ ಸಿಎಂ ಆಗಿದ್ದರೆ ರಾಜ್ಯದ ಬಗ್ಗೆ ಚಿಂತಿಸ ಬೇಕಾಗುತ್ತದೆ, ಆದರೆ ನಾನು ಈ ದೇಶದ ರೈಲ್ವೆ ಸಚಿವ.

ರೈಲ್ವೆ ಬಜೆಟ್

ರೈಲ್ವೆ ಬಜೆಟ್

ಬುಲೆಟ್ ರೈಲು ಸಂಚಾರ ಆರಂಭಿಸುವ ಬಗ್ಗೆ ಈ ಬಜೆಟಿನಲ್ಲಿ ಸರಕಾರದ ನಿರ್ಧಾರವನ್ನು ತಿಳಿಸುತ್ತೇನೆ. ಪ್ಲಾಟ್ ಫಾರಂ ಶುಚಿತ್ವದ ಬಗ್ಗೆ ಈಗಾಗಲೇ ಹಲವು ಹಂತದ ಮಾತುಕತೆಯನ್ನು ಅಧಿಕಾರಿಗಳ ಜೊತೆ ನಡೆಸಿದ್ದೇನೆ ಎಂದು ಸದಾನಂದ ಗೌಡ ಹೇಳಿದ್ದಾರೆ.

English summary
For World class travel passenger need to pay more, Union Railway Minister D V Sadananda Gowda in a interview to IBN Live.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X