ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕನಾಥೇಶ್ವರಿ ದೇವಾಲಯದಲ್ಲಿ ಬೆಂಕಿ :1.5ಲಕ್ಷ ನಷ್ಟ

By Ashwath
|
Google Oneindia Kannada News

ಚಿತ್ರದುರ್ಗ‌, ಜು. 9: ಏಳು ಸುತ್ತಿನ ಕೋಟೆಯ ಅಧಿದೇವತೆ ಚಿತ್ರದುರ್ಗ‌ದ ಏಕನಾಥೇಶ್ವರಿ ದೇವಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದೇವಿಗೆ ಭಕ್ತರು ಸಲ್ಲಿಸಿದ್ದ ಹರಕೆಯ ಸೀರೆಗಳು, ಉತ್ಸವ ಮಂಟಪ, ಪೂಜೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.

ಸೋಮವಾರ ಬೆಳಗ್ಗೆ ಬೆಟ್ಟಕ್ಕೆ ವಾಯುವಿಹಾರಕ್ಕಾಗಿ ಹೋದವರಿಗೆ ಬೆಂಕಿ ಕಾಣಿಸಿದ್ದು, ಅವರು ಅರ್ಚಕರಿಗೆ ತಿಳಿಸಿದ್ದಾರೆ. ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ಹೋಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಸಾರ್ವಜನಿಕರ ಸಹಕಾರದಿಂದ ಬೆಂಕಿಯನ್ನು ಆರಿಸಿದ್ದಾರೆ.[ಶಾಪ ವಿಮೋಚನೆಗೆ ಕಾದಿರುವ ದುರ್ಗದ ಬಂಡೆಗಳು]

Chitradurga Ekanatheshwari templ
ಬೆಂಕಿ ಅವಘಡಕ್ಕ ಶಾರ್ಟ್‌ ಸರ್ಕ್ಯೂಟ್‌ ಕಾರಣ ಎಂದು ಶಂಕಿಸಲಾಗಿದೆ. ಜಾತ್ರಾ ಸಮಯದಲ್ಲಿ ದೇವತೆಗೆ ಕಟ್ಟುವ ಮರದ ಗೊಂಬೆಗಳು ಬೆಂಕಿಗೆ ಆಹುತಿಯಾಗಿವೆ. ಏಕನಾಥೇಶ್ವರಿ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ. ಬೆಂಕಿಯ ತೀವ್ರತೆಗೆ ದೇಗುಲದ ಒಳಗಿನ ಬಂಡೆ ಗೋಡೆಯ ಮೇಲ್ಮೈ ಚೂರುಗುಳು ಉದುರಿವೆ. ಘಟನೆಯಿಂದ ಸುಮಾರು 1.5 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಏಳುಸುತ್ತಿನ ಕೋಟೆಯಲ್ಲಿರುವ ದೇವಾಲಯ ಮುಜರಾಯಿ ಇಲಾಖೆಯ ವಶದಲ್ಲಿದೆ. ದುರ್ಗವನ್ನು ಆಳಿದ ವೀರ ಮದಕರಿನಾಯಕನ ಕುಲದೇವತೆ ಏಕನಾಥೇಶ್ವರಿ. 16ನೇ ಶತಮಾನದಲ್ಲಿ ಕದಂಬ ರಾಜವಂಶಸ್ಥ ಮಯೂರವರ್ಮ‌‌ ಈ ದೇವಾಲಯವನ್ನು ನಿರ್ಮಿಸಿದ್ದು, ಬೆಂಗಳೂರಿನಿಂದ ವಾಯುವ್ಯಕ್ಕೆ 200 ಕಿ.ಮೀ ದೂರದಲ್ಲಿದೆ.

English summary
A fire broke out on July 8 at the historic Ekanatheshwari temple in the south Indian state of Karnataka. An electric short-circuit caused the fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X