ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಕೇಂದ್ರೀಯ ವಿವಿಗೆ ಪ್ರವೇಶ ಪರೀಕ್ಷೆ

By Prasad
|
Google Oneindia Kannada News

ಗುಲಬರ್ಗ, ಜೂ. 6 : ಗುಲಬರ್ಗಾದ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಜೂನ್ 7 ಮತ್ತು 8ರಂದು ರಾಜ್ಯದ 14 ಕೇಂದ್ರಗಳನ್ನು ಒಳಗೊಂಡಂತೆ ದೇಶದ 29 ಕೇಂದ್ರಗಳಲ್ಲಿ ಏಕಕಾಲಕ್ಕೆ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿದೆ.

ಪದವಿಪೂರ್ವ ಪರೀಕ್ಷೆ ಪಾಸಾದವರೂ ವಿಶ್ವವಿದ್ಯಾಲಯದ ನೇರ ವಿದ್ಯಾರ್ಥಿಗಳಾಗುವ ಸುವರ್ಣಾವಕಾಶವನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಒದಗಿಸಿದೆ. ಇಂಜಿನಿಯರಿಂಗ್ ಮತ್ತು ಸೈನ್ಸ್ ದ್ವಿಪದವಿ ಕೋರ್ಸ್ ಗಳನ್ನು ಒಳಗೊಂಡಂತೆ 8 ದ್ವಿಪದವಿ, 15 ಪಿಎಚ್‌ಡಿ ಪದವಿಗಳ ಒಟ್ಟು 758 ಸೀಟುಗಳ ಪ್ರವೇಶಕ್ಕಾಗಿ ಪರೀಕ್ಷೆ ನಡೆಯಲಿದೆ.

Entrance exam by Central University Karnataka, Gulbarga

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳು ಖುದ್ದಾಗಿ ರಾಜ್ಯದ ಪ್ರಮುಖ ನಗರಗಳಿಗೆ ಭೇಟಿ ಕೊಟ್ಟು ಅಲ್ಲಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರ ಪರಿಣಾಮವಾಗಿ ಕರ್ನಾಟಕದಲ್ಲಿ ವ್ಯಾಪಕ ಪ್ರತಿಕ್ರಿಯೆ ದೊರೆತಿದೆ. ವಿಶ್ವವಿದ್ಯಾಲಯ ಸ್ಥಾಪನೆಗೊಂಡು 5 ವರ್ಷಗಳಲ್ಲಿ ಈ ಮಟ್ಟದ ಪ್ರತಿಕ್ರಿಯೆ ದೊರೆತಿರಲಿಲ್ಲ.

ದ್ವಿಪದವಿಯ 280, ಸ್ನಾತಕೋತ್ತರ ಪದವಿಯ 420 ಮತ್ತು ಸಂಶೋಧನಾ ಪದವಿಯ 58 ಸೀಟುಗಳು ಸೇರಿ 6448 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಅಭ್ಯರ್ಥಿಗಳಲ್ಲಿ ಶೇ.46ರಷ್ಟು ವಿದ್ಯಾರ್ಥಿಗಳು ಗುಲಬರ್ಗಾದಲ್ಲಿ ಪ್ರವೇಶ ಪರೀಕ್ಷೆ ಬರೆಯುತ್ತಿರುವುದು ವಿಶೇಷ. ಒಟ್ಟಾರೆ ಕರ್ನಾಟಕದಿಂದ ಶೇ.81.3ರಷ್ಟು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಶೇ.18.7ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಗುಲಬರ್ಗಾದಲ್ಲಿ ಪರೀಕ್ಷೆ ಬರೆಯಲಿರುವ ಸುಮಾರು 3,000 ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲು ಗುಲಬರ್ಗಾದ ಅಪ್ಪಾ ಇಂಜಿನಿಯರಿಂಗ್ ಕಾಲೇಜು, ಪಿಡಿಎ ಇಂಜಿನಿಯರಿಂಗ್ ಕಾಲೇಜು ಮತ್ತು ಅಂಬೇಡ್ಕರ್ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ವಿದ್ಯಾರ್ಥಿಗಳು ಜೂನ್ 3ರಿಂದ ಪ್ರವೇಶಪತ್ರ (ಹಾಲ್ ಟಿಕೆಟ್) ವಿಶ್ವವಿದ್ಯಾಲಯದ ವೆಬ್ ಸೈಟ್ ನಿಂದ ಪಡೆದುಕೊಳ್ಳುತ್ತಿದ್ದಾರೆ. ಅರ್ಹ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.cuk.ac.in ವೆಬ್ ಸೈಟ್ ಸಂಪರ್ಕಿಸಬಹುದು. ಅಗತ್ಯವಿದ್ದರೆ ಈ ಕೆಳಕಂಡ ಸಹಾಯವಾಣಿಗೂ ಕರೆ ಮಾಡಬಹುದಾಗಿದೆ.

098456 34309
096114 89979
099721 91661
08477-226706
08477-226705

English summary
Central University of Karnataka, Kadaganchi, Gulbarga is conducting an all India basis entrance examination in 29 centres all over India including 14 in Karnataka on June 7 and 8, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X