ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪ-ಅಮ್ಮ ಹೆಸರಲ್ಲಿ 10 ಎಕ್ರೆ ಜಮೀನು ದಾನ: ಡಿಕೆಶಿ

By Srinath
|
Google Oneindia Kannada News

ಕನಕಪುರ, ಏ.5: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಡಿಕೆ ಸುರೇಶ್‌ ಪರ ಅವರ ಸೋದರ, ಇಂಧನ ಸಚಿವ ಡಿಕೆ ಶಿವಕುಮಾರ್‌ ಅವರು ಕನಕಪುರ ಕ್ಷೇತ್ರದಲ್ಲಿ ನಿನ್ನೆ ಶುಕ್ರವಾರ ಭರ್ಜರಿ ಪ್ರಚಾರ ನಡೆಸಿದರು.

ಕೋಡಿಹಳ್ಳಿ ಗ್ರಾಮದಲ್ಲಿ ಹೆಚ್ಚು ಪ್ರಚಾರ ನಡೆಸಿದ ಡಿಕೆಶಿ ಮುಖ್ಯವಾಗಿ ಗ್ರಾಮದ ಶಾಲಾ ಮಕ್ಕಳಿಗೆ ನೆರವಾಗಲು ಮುಂದಾಗಿದ್ದಾರೆ. ಕೋಡಿಹಳ್ಳಿಯಲ್ಲಿ ಸದ್ಯಕ್ಕೆ ಯಾವುದೇ ಶಿಕ್ಷಣ ಸಂಸ್ಥೆಗಳು ಇಲ್ಲ. ಇಲ್ಲಿನ ಮಕ್ಕಳು ವಿದ್ಯಾಭ್ಯಾಸಕ್ಕೆಂದು ದೂರದ ಕನಕಪುರಕ್ಕೇ ಹೋಗಬೇಕಾದ ಪರಿಸ್ಥಿತಿಯಿದೆ. ಇದನ್ನು ಮನಗಂಡ ಸ್ಥಳೀಯ ಶಾಸಕರೂ ಆದ ಸಚಿವ ಡಿಕೆ ಶಿವಕುಮಾರ್‌ ಅವರು ತಮ್ಮ ತಂದೆ ತಾಯಿಯ ಹೆಸರಿನಲ್ಲಿ 10 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. (ಪಂಚೆ ಎತ್ತಿ ಕಟ್ಟಿ ಪಾದಯಾತ್ರೆ ಮಾಡಿದ್ದ ಸಿದ್ದು ಎಲ್ಹೋದ್ರು?)

ಈ ಜಮೀನಿನಲ್ಲಿ ಒಂದು ಹೈಸ್ಕೂಲ್‌ ಮತ್ತು ಐಟಿಐ ಕಾಲೇಜನ್ನು ತೆರೆಯಲು ಅನುವು ಮಾಡಿಕೊಟ್ಟಿದ್ದಾರೆ. ಜತೆಗೆ ಈ ಶಿಕ್ಷಣ ಸಂಸ್ಥೆಗಳನ್ನು ಸರಕಾರದಿಂದ ಅಗತ್ಯ ಮಂಜೂರಾತಿಗಳನ್ನು ದೊರಕಿಸಿಕೊಟ್ಟಿದ್ದಾರೆ. ತನ್ಮೂಲಕ ಇಡೀ ಹೋಬಳಿಯ ಜನ ವಿದ್ಯಾವಂತರಾಗಲು ಅವಕಾಶ ಮಾಡಿಕೊಡಲಾಗಿದೆ ಎಂದು ಡಿಕೆ ಶಿವಕುಮಾರ್‌ ನಿನ್ನೆ ಗ್ರಾಮಸ್ಥರನ್ನುದ್ದೇಶಿ ಮಾತನಾಡುತ್ತಾ ತಿಳಿಸಿದರು.
(ದೇವೇಗೌಡರ ಮಣಿಸಲು ಕಾಂಗ್ರೆಸ್ ದೊಡ್ಡ ಕಾರ್ಯತಂತ್ರ)

ಅಭಿವೃದ್ಧಿ ಕೆಲಸ ನೋಡಿ ಸುರೇಶನಿಗೆ ಮತ ನೀಡಿ

ಅಭಿವೃದ್ಧಿ ಕೆಲಸ ನೋಡಿ ಸುರೇಶನಿಗೆ ಮತ ನೀಡಿ

ಜತೆಗೆ, ಕೋಡಿಹಳ್ಳಿ ಹೋಬಳಿ ಸೇರಿದಂತೆ ಇಡೀ ಲೋಕಸಭಾ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವ ಮೂಲಕ ಇಡೀ ರಾಷ್ಟ್ರಕ್ಕೆ ಮಾದರಿಯೆನಿಸುವ ಕೆಲಸಗಳನ್ನು ಮಾಡಲಾಗಿದೆ. ನಮ್ಮೀ ಅಭಿವೃದ್ಧಿ ಕೆಲಸಗಳನ್ನು ನೋಡಿ, ನಿಮ್ಮ ಮತವನ್ನು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಡಿಕೆ ಸುರೇಶ್‌ ಅವರಿಗೆ ನೀಡಿ ಎಂದು ಸಚಿವ ಶಿವಕುಮಾರ್‌ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್‌ ಮತಯಾಚನೆ

ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್‌ ಮತಯಾಚನೆ

ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಡಿಕೆ ಸುರೇಶ್‌ ಅವರು ಸಾತನೂರು ಹೋಬಳಿಯಲ್ಲಿ ಕುಡಿಯಲು ಶಿಂಷಾ ನದಿಯ ನೀರು, ಕಾವೇರಿ ನೀರು ತರಲಾಗಿದೆ. ಕರೆಗಳನ್ನು ತುಂಬಿಸುವ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೋಡಿಹಳ್ಳಿ ರಸ್ತೆ ಅಗಲೀಕರಣಕ್ಕೆ ರಾಜ್ಯದಲ್ಲೇ ಗರಿಷ್ಠ ಅನುದಾನ

ಕೋಡಿಹಳ್ಳಿ ರಸ್ತೆ ಅಗಲೀಕರಣಕ್ಕೆ ರಾಜ್ಯದಲ್ಲೇ ಗರಿಷ್ಠ ಅನುದಾನ

ಕೋಡಿಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಇಡೀ ರಾಜ್ಯದಲ್ಲೇ ಗರಿಷ್ಠ ಪ್ರಮಾಣದ ಅನುದಾನವನ್ನು ನೀಡಿ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ. ಇದರಿಂದ ನಿಮ್ಮ ಆಸ್ತಿಪಾಸ್ತಿಗಳ ಮೌಲ್ಯ ದ್ವಿಗುಣಗೊಂಡಿದೆ ಎಂದು ತಿಳಿಸಿದರು.

ರಾಮನಗರಕ್ಕಿಂತ ಕನಕಪುರ ಹೆಚ್ಚು ಸುಭಿಕ್ಷ: ಸುರೇಶ್

ರಾಮನಗರಕ್ಕಿಂತ ಕನಕಪುರ ಹೆಚ್ಚು ಸುಭಿಕ್ಷ: ಸುರೇಶ್

ಪಕ್ಕದ ರಾಮನಗರದಲ್ಲಿ ಯುಗಾದಿ ಹಬ್ಬ ಬಂದರೂ ಕೂಡ ಕುಡಿಯಲು, ಬಟ್ಟೆ ತೊಳೆಯಲು ನೀರು ಸಿಗದಂತ ಪರಿಸ್ಥಿತಿ ಇದೆ. ಆದರೆ ಕನಕಪುರದಲ್ಲಿ ಅಂತಹ ಪ್ರಕರಣಗಳು ಕಂಡುಬಂದಿಲ್ಲ. ಬದಲಾಗಿ ಅತಿ ಹೆಚ್ಚಿನ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಕಟವನ್ನು ಸ್ಥಾಪನೆಗೊಳಿಸುವ ಮೂಲಕ ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ ಎಂದು ಡಿಕೆ ಸುರೇಶ್‌ ಹೇಳಿದರು.

English summary
Lok Sabha Polls 2014- Congress Minister DK Shivakumar campaigns for his brother and sitting MP, DK Suresh who is the candidate in Bangalore Rural Lok Sabha Constituency. The Power Minister DK Shivakumar was canvassing in Kodihalli in Kanakapura Constituency where DK Shivakumar is the MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X