ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾಸುದ್ದಿ : ಹಿರಿಯ ಅಧಿಕಾರಿಗಳ ಸಾರ್ವತ್ರಿಕ ವರ್ಗ

By Mahesh
|
Google Oneindia Kannada News

ಬೆಂಗಳೂರು, ಏ.26: ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿನ ಚುನಾವಣಾ ನೀತಿ ಸಂಹಿತೆಯನ್ನು ಸಂಪೂರ್ಣವಾಗಿ ಸಡಿಲಗೊಳೀಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಶುಕ್ರವಾರ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ವಿ.ಪಿ.ಬಳಿಗಾರ್ ‌ರನ್ನು ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮ(ಕೆಎಸ್ ‌ಐಐಡಿಸಿ)ದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹಾಗೂ ಪಿ.ಬಿ.ರಾಮ ಮೂರ್ತಿಯನ್ನು ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಸಾರ್ವತ್ರಿಕ ವರ್ಗಾವಣೆ: ಕಳೆದ ವರ್ಷ ವರ್ಗಾವಣೆ ಒತ್ತಡ ಮಿತಿ ಮೀರಿದ ಕಾರಣ ಎಲ್ಲಾ ಇಲಾಖೆಗಳಲ್ಲಿ ಕೌನ್ಸಲಿಂಗ್ ಪದ್ದತಿ ಜಾರಿ ಮಾಡಲು ಸಿಎಂ ಮೌಖಿಕ ಸೂಚನೆ ನೀಡಿದ್ದರು. ಆದರೆ, ಶಾಸಕರ ವಿರೋಧದಿಂದ ಕೌನ್ಸಲಿಂಗ್ ಪದ್ಧತಿ ಜಾರಿಗೆ ಬರಲಿಲ್ಲ.

ಕಳೆದ ವರ್ಷ ಎ ಮತ್ತು ಬಿ ಹುದ್ದೆಗಳಲ್ಲಿ ಶೇ 3 ರಷ್ಟು, ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ 4.5ರಷ್ಟು ವರ್ಗಾವಣೆ ಮಿತಿ ಹಾಕಿಕೊಳ್ಳಲಾಗಿತ್ತು. ಆದರೆ, ಮಿತಿ ಮೀರಿದ ಕಾರಣ, ಈ ವರ್ಷ ಮಿತಿಯನ್ನು ಶೇ 5ಕ್ಕಿಂತ ಹೆಚ್ಚು ಮಾಡಲು ಬೇಡಿಕೆ ಮುಂದಿಡಲಾಗುತ್ತಿದೆ. ಮೈಸೂರು, ಬೆಂಗಳೂರು, ಉಡುಪಿ, ಬಳ್ಳಾರಿ ಮುಂತಾದೆಡೆಗಳಿಂದ ಬಂದಿರುವ ಇನ್ನಷ್ಟು ಸುದ್ದಿಗಳು ಇಲ್ಲಿವೆ ತಪ್ಪದೇ ನೋಡಿ...

ಮೈಸೂರು : ಅಣ್ಣ ಬಸವಣ್ಣ ವೈಭವೀಕರಣ ಆಕ್ಷೇಪ

ಮೈಸೂರು : ಅಣ್ಣ ಬಸವಣ್ಣ ವೈಭವೀಕರಣ ಆಕ್ಷೇಪ

ಬಸವಣ್ಣ ಅವರನ್ನು ಕಲಾವಿದರು ವಜ್ರ, ವೈಢೂರ್ಯಗಳಿಂದ ಕೂಡಿದ ಕಿರೀಟ, ಕಂಠಾಭರಣ, ಮುಂಗೈನಲ್ಲಿ ಚಿನ್ನದ ಕಪ್ಪ, ಬೆರಳುಗಳಲ್ಲಿ ಮುತ್ತಿನ ಉಂಗುರ, ಕಿವಿಯಲ್ಲಿ ಮಕರ ಕುಂಡಲ, ಮೈಮೇಲೆ ಹೊದ್ದಿರುವ ಜರಿ ಅಂಚಿನ ರೇಷ್ಮೆವಸ್ತ್ರ, ಇರುವಂತೆ ಚಿತ್ರಿಸಿದ್ದಾರೆ. ಅನುಭವ ಮಂಟಪದಲ್ಲಿ ಇರುವಾಗ, ಬಡವನನ್ನು ನೋಡಲು ಕೂಡ ಬಸವಣ್ಣ ಕಿರೀಟಧಾರಿಯಾಗಿ ಹೋಗಿರುವಂತೆ ಚಿತ್ರಿಸಲಾಗಿದೆ. ಮಾಧ್ಯಮದಲ್ಲಿ ವೈಭವೀಕರಿಸಲಾಗಿದೆ ಎಂಬುದು ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ಅವರ ಆಕ್ಷೇಪಿಸಿದ್ದಾರೆ.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಆರ್ಟ್ ಗ್ಯಾಲರಿ ಸಹಯೋಗದಲ್ಲಿ ಏ.27 ರಂದು ಸಂಜೆ 5ಕ್ಕೆ ಅರಮನೆ ಉತ್ತರ ದ್ವಾರದ ಕಸಾಪ ನಗರ ಕಚೇರಿಯಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಹಿರಿಯ ಚಿತ್ರಕಲಾವಿದ ಎಲ್.ಎಸ್.ಎನ್. ಆಚಾರ್ ಕೃತಿ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ಪ್ರೊ.ದೇಜಗೌ ಅಧ್ಯಕ್ಷತೆ ವಹಿಸಲಿದ್ದು, ಕೃತಿ ಕುರಿತು ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ. ನಾಗಣ್ಣ ಮಾತನಾಡುವರು. ಪ್ರಕಾಶಕ ಶಶಿಕುಮಾರ್ ಉಪಸ್ಥಿತರಿರುವರು.

ಉಡುಪಿಗೆ ಮಂತ್ರಾಲಯದ ನೂತನ ಶ್ರೀಗಳು

ಉಡುಪಿಗೆ ಮಂತ್ರಾಲಯದ ನೂತನ ಶ್ರೀಗಳು

ಮಂತ್ರಾಲಯದ ನೂತನ ಮಠಾಧೀಶರಾದ ಶ್ರೀ ಸುಬುದೇಂದ್ರ ತೀರ್ಥ ಶ್ರೀ ಪಾದರು ಪೀಠ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಶ್ರೀ ಕೃಷ್ಣನ ದರ್ಶನಕ್ಕೆ ಉಡುಪಿಗೆ ಮೇ 6ರಂದು ಆಗಮಿಸುತ್ತಿದ್ದಾರೆ. ಮೇ 7, 8ರಂದು ರಾಜಾಂಗಣದಲ್ಲಿ ವಿದ್ವತ್ ಸಭೆ ಆಯೋಜಿಸಲಾಗಿದೆ.

ಅವರನ್ನು ಕೃಷ್ಣ ಮಠ ಮತ್ತು ಉಡುಪಿಯ ಭಕ್ತರು ಭವ್ಯವಾಗಿ ಬರ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಎಂದು ಪರ್ಯಾಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು. ಅಂದು ಸಂಜೆ 6 ಗಂಟೆಗೆ ಉಡುಪಿ ಪುರಪ್ರವೇಶ ಮಾಡಲಿರುವ ಶ್ರೀಗಳನ್ನು ಜೋಡುಕಟ್ಟೆಯಲ್ಲಿ ಉಡುಪಿಯ ಗಣ್ಯರು, ಭಕ್ತರು ವೈಭವದಿಂದ ಸ್ವಾಗತಿಸಲಿದ್ದು, ನಂತರ ಬಿರುದಾವಳಿ, ವಾದ್ಯಘೋಷಗಳೊಂದಿಗೆ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ರಥಬೀದಿಗೆ ಕರೆ ತರಲಾಗುವುದು.

ಮುಂಗಾರು ಒಂದು ವಾರ ತಡವಾಗಲಿದೆ

ಮುಂಗಾರು ಒಂದು ವಾರ ತಡವಾಗಲಿದೆ

ರಾಜ್ಯಕ್ಕೆ ಈ ಬಾರಿ ಮುಂಗಾರು ಒಂದು ವಾರ ತಡವಾಗಿ ಆಗಮಿಸುತ್ತಿದೆ ಅಲ್ಲದೇ, ಜೂನ್ ‌ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ ಡಾ.ಪ್ರಕಾಶ್ ‌ ತಿಳಿಸಿದ್ದಾರೆ.

ಜುಲೈ ಮತ್ತು ಆನಂತರದ ಹವಾಮಾನ ಮುನ್ಸೂಚನೆ ಮಳೆ ಸಾಧ್ಯತೆಗಳ ಬಗೆಗಿನ ವರದಿ ಎರಡು -ಮೂರು ದಿನಗಳಲ್ಲಿ ದೊರೆಯಲಿದ್ದು ಆನಂತರ ಒಟ್ಟಾರೆ ಮಳೆ ಪರಿಸ್ಥಿತಿಯನ್ನು ವಿಶ್ಲೇಷಿಸಬಹುದಾಗಿದೆ ಎಂದರು. ಬಳ್ಳಾರಿಯಲ್ಲಿ ಶುಕ್ರವಾರ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ‌ ತಲುಪಿದೆ. 9 ವರ್ಷ ಅವಧಿಯಲ್ಲಿ ಏಪ್ರಿಲ್ ‌ನಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ ಎಂದು ತಿಳಿದು ಬಂದಿದೆ.

ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ

ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ

ಬೆಂಗಳೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದಲ್ಲಿ ಶೇ.50ರಷ್ಟು ಅಥವಾ ಕನಿಷ್ಠ 500 ವಿನಾಯಿತಿ ನೀಡಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಶುಲ್ಕ ಏರಿಕೆಯನ್ನು ವಿರೋಧಿಸಿ ಸಿಂಡಿಕೇಟ್ ಸಭೆಗೂ ಮುಂಚೆ ನಾನಾ ವಿದ್ಯಾರ್ಥಿ ಸಂಘಟನೆಗಳು ಸೆಂಟ್ರಲ್ ಕಾಲೇಜು ಆವರಣದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದವು.

ವಿದ್ಯಾರ್ಥಿಗಳ ಪ್ರತಿಭಟನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕುಲಪತಿ ಪ್ರೊ.ತಿಮ್ಮೇಗೌಡ, ಶುಲ್ಕ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶೈಕ್ಷಣಿಕ ವಿಚಾರದಲ್ಲಿ ಮಾತ್ರ ವಿವಿಗೆ ಸ್ವಾತಂತ್ರ್ಯವಿದೆ, ಆರ್ಥಿಕ ವಿಷಯಗಳಲ್ಲಿ ರಾಜ್ಯ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

English summary
Super fast news bites from interior Karnataka : VP Baligar, IAS posted as Chairman and Managing Director, Karnataka State Industrial and Infrastructure Development Corporation (KSIIDC), Bangalore with immediate effect and P.B. Ramamurthy, IAS, transferred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X